ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ನಿಲ್ಲುವುದಲ್ಲ. ಅವರು ಒಟ್ಟಾಗಿ ಕಾಣಿಸಿಕೊಂಡು ಈ ವದಂತಿಗೆ ಬ್ರೇಕ್ ಹಾಕುವವರೆಗೆ ಈ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಇತ್ತೀಚೆಗೆ ಆರಾಧ್ಯಾ ಅವರು ಬರ್ತ್ಡೇ ಆಚರಿಸಿಕೊಂಡಿದ್ದರು. ಆದರೆ, ಅಲ್ಲಿ ಅಭಿಷೇಕ್ ಇರಲಿಲ್ಲ. ಈಗ ಅವರು ಮಗಳ ಬಗ್ಗೆ ಕಮೆಂಟ್ ಒಂದನ್ನು ಮಾಡಿದ್ದಾರೆ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾ ಅವರಿಂದ ದೂರವೇ ಇದ್ದಾರೆ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಇನ್ನು ಆರಾಧ್ಯಾ ಅವರನ್ನು ಸಾಕುವ ಜವಾಬ್ದಾರಿ ಕೂಡ ಐಶ್ವರ್ಯಾ ಹೆಗಲಿಗೆ ಬಿದ್ದಿದೆ ಎನ್ನಬಹುದು. ಆರಾಧ್ಯಾ ಇತ್ತೀಚೆಗೆ ತಂದೆಯಿಂದ ದೂರ ಇರುವುದೇ ಇದಕ್ಕೆ ಕಾರಣ. ಅವರು ಎಲ್ಲಿಯೂ ಅಭಿಷೇಕ್ ಜೊತೆ ಕಾಣಿಸಿಕೊಂಡಿಲ್ಲ ಹೀಗಿರುವಾಗಲೇ, ಅಭಿಷೇಕ್ ಅವರು ಮಗಳ ಬಗ್ಗೆ ಮಾತನಾಡಿದ್ದಾರೆ.
ಅಭಿಷೇಕ್ ಬಚ್ಚನ್ ಅವರು ‘ಐ ವಾಂಟ್ ಟು ಟಾಕ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ನವೆಂಬರ್ 22ರಂದು ಈ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರದ ಪ್ರಚಾರಕ್ಕಾಗಿ ಅವರು ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮಕ್ಕೆ ಬಂದಿದ್ದರು. ಈ ಕಾರ್ಯಕ್ರಮದಲ್ಲಿ ಅವರು ಮಗಳ ಬಗ್ಗೆ ಮಾತನಾಡಿದ್ದಾರೆ. ಈ ಸಿನಿಮಾದಲ್ಲಿ ಅವರು ಅರ್ಜುನ್ ಸೇನ್ ಹೆಸರಿನ ಪಾತ್ರ ಮಾಡಿದ್ದಾರೆ. ತಾಯಿ ಇಲ್ಲದೆ ಸಿಂಗಲ್ ಪೇರೆಂಟ್ ಆಗಿ ಮಗಳನ್ನು ಸಾಕುವ ಜವಾಬ್ದಾರಿ ಅವರಿಗೆ ಬರುತ್ತದೆ. ಇದು ಸಿನಿಮಾದ ಕಥೆ. ಇದೇ ವಿಚಾರವಾಗಿ ಅವರು ಮಾತನಾಡಿದ್ದಾರೆ.
‘ಆರಾಧ್ಯಾ ನನ್ನ ಮಗಳು. ಶೂಜಿತ್ (ಸಿನಿಮಾ ನಿರ್ದೇಶಕ) ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ನಾವು ಹೆಣ್ಣು ಮಕ್ಕಳ ಅಪ್ಪಂದಿರು. ನಮಗೆ ಭಾವನೆಗಳು ಅರ್ಥ ಆಗುತ್ತದೆ’ ಎಂದು ಅಭಿಷೇಕ್ ಹೇಳಿಕೊಂಡಿದ್ದಾರೆ. ಅವರ ಈ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ಇದನ್ನೂ ಓದಿ: ಹೇಗಿತ್ತು ನೋಡಿ ಆರಾಧ್ಯಾ ಬರ್ತ್ಡೇ ಸೆಲೆಬ್ರೇಷನ್; ಬಚ್ಚನ್ ಕುಟುಂಬದವರಿಗಿಲ್ಲ ಆಹ್ವಾನ
ಅಭಿಷೇಕ್ ಹಾಗೂ ಐಶ್ವರ್ಯಾ ಬಗ್ಗೆ ಹುಟ್ಟಿರುವುದು ಕೇವಲ ವದಂತಿ ಎಂದು ಅಮಿತಾಭ್ ಬಚ್ಚನ್ ಸ್ಪಷ್ಟನೆ ನೀಡಿದ್ದಾರೆ. ಇಬ್ಬರೂ ಒಟ್ಟಾಗಿ ಇದ್ದಾರೆ ಎಂದಾದರೆ ಅವರು ಎಲ್ಲಿಯೂ ಏಕೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂಬುದು ಅನೇಕರ ಪ್ರಶ್ನೆ. ಈ ಪ್ರಶ್ನೆಗೆ ಈ ವರೆಗೆ ಉತ್ತರ ಸಿಕ್ಕಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.