ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ನಡುವಿನ ವಯಸ್ಸಿನ ಅಂತರವೆಷ್ಟು? ಅಭಿಷೇಕ್ ಹಿರಿಯರಲ್ಲ

| Updated By: ರಾಜೇಶ್ ದುಗ್ಗುಮನೆ

Updated on: Oct 21, 2024 | 8:27 AM

ಅಭಿಷೇಕ್ ಬಚ್ಚನ್ ವೃತ್ತಿ ಬದುಕು ಏರಿಳಿತಗಳಿಂದ ಕೂಡಿದೆ. ಅವರು ಕೆಲವೊಮ್ಮೆ ಹಿಟ್ ಕೊಟ್ಟರೆ ಕೆಲವೊಮ್ಮೆ ಸೋತಿದ್ದಾರೆ. ಐಶ್ವರ್ಯಾಗೆ ಹಾಗಲ್ಲ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಬಂದ ಅವರು ದೊಡ್ಡ ಗೆಲುವು ಕಂಡರು. ಇವರ ವಯಸ್ಸಿನ ಬಗ್ಗೆ ಚರ್ಚೆ ನಡೆದಿದೆ.

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ನಡುವಿನ ವಯಸ್ಸಿನ ಅಂತರವೆಷ್ಟು? ಅಭಿಷೇಕ್ ಹಿರಿಯರಲ್ಲ
ಐಶ್ವರ್ಯಾ-ಅಭಿಷೇಕ್
Follow us on

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ದಾಂಪತ್ಯದ ಬಗ್ಗೆ ಆಗಾಗ ಕೆಲವು ವದಂತಿಗಳು ಹರಿದಾಡುತ್ತಲೇ ಇರುತ್ತವೆ. ಈ ದಂಪತಿ ವಿಚ್ಛೇದನ ಪಡೆದಿದ್ದಾರೆ ಎಂದು ಕೆಲವರು ಹೇಳಿದರೆ,ಇನ್ನೂ ಕೆಲವರು ಇದನ್ನು ಅಲ್ಲಗಳೆದಿದ್ದಾರೆ. ಈ ಬಗ್ಗೆ ದಂಪತಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಹಾಗಾದರೆ ಇವರ ಮಧ್ಯೆ ಇರುವ ವಯಸ್ಸಿನ ಅಂತರ ಎಷ್ಟು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಅಭಿಷೇಕ್ ಬಚ್ಚನ್ ವೃತ್ತಿ ಬದುಕು ಏರಿಳಿತಗಳಿಂದ ಕೂಡಿದೆ. ಅವರು ಕೆಲವೊಮ್ಮೆ ಹಿಟ್ ಕೊಟ್ಟರೆ ಕೆಲವೊಮ್ಮೆ ಸೋತಿದ್ದಾರೆ. ಅನೇಕರು ಅವರನ್ನು ತಂದೆ ಅಮಿತಾಭ್ ಬಚ್ಚನ್​ಗೆ ಹೋಲಿಕೆ ಮಾಡೋದು ಅವರ ವೃತ್ತಿ ಜೀವನಕ್ಕೆ ದೊಡ್ಡ ಹಿನ್ನಡೆ ಎನ್ನಬಹುದು. ಆದರೆ, ಐಶ್ವರ್ಯಾಗೆ ಹಾಗಲ್ಲ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಬಂದ ಅವರು ದೊಡ್ಡ ಗೆಲುವು ಕಂಡರು.

ಐಶ್ವರ್ಯಾ ರೈಗಿಂತ ಅಭಿಷೇಕ್ ಬಚ್ಚನ್ ಎರಡೂವರೆ ವರ್ಷ ಕಿರಿಯರು. ಹೌದು, ಅಭಿಷೇಕ್ ಅವರು ಜನಿಸಿದ್ದು 1976ರ ಫೆಬ್ರವರಿ 5ರಂದು. ಅಂದರೆ ಅವರಿಗೆ ಈಗ 48 ವರ್ಷ. ಐಶ್ವರ್ಯಾ ಅವರು ಜನಿಸಿದ್ದು 1973ರ ನವೆಂಬರ್ 1ರಂದು. ಅವರಿಗೆ 50 ವರ್ಷ. ಇಬ್ಬರ ಮಧ್ಯೆ ಎರಡೂವರೆ ವರ್ಷ ವಯಸ್ಸಿನ ಅಂತರ ಇದೆ.

ಇಬ್ಬರೂ ಒಟ್ಟಾಗಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 2000ರಲ್ಲಿ ರಿಲೀಸ್ ಆದ ‘ಧಾಯಿ ಅಕ್ಷರ್ ಪ್ರೇಮ್ ಕೆ’ ಸಿನಿಮಾದಲ್ಲಿ ಇವರು ಒಟ್ಟಾಗಿ ನಟಿಸಿದ್ದರು. ಅಮರೀಶ್ ಪುರಿ, ಅನುಪಮ್ ಖೇರ್, ಶಕ್ತಿ ಕಪೂರ್, ಸುಷ್ಮಾ ಸೇನ್ ಮೊದಲಾದವರು ನಟಿಸಿದ್ದರು.

2003ರಲ್ಲಿ ರಿಲೀಸ್ ಆದ ‘ಕಲ್ ಹೋ ನ ಹೋ’ದಲ್ಲಿ ನಟಿಸಿದ್ದರು. ರೋಹನ್ ಸಿಪ್ಪಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.  ‘ಉಮರಾವೋ ಜಾನ್’, ‘ಗುರು’, ‘ಧೂಮ್ 2’ ಸಿನಿಮಾಗಳಲ್ಲಿ ಇವರು ಒಟ್ಟಾಗಿ ನಟಿಸಿದ್ದಾರೆ. ‘ಧೂಮ್ 2’ ಚಿತ್ರದಲ್ಲಿ ಜಾನ್ ಅಬ್ರಹಾಂ. ಉದಯ್ ಚೋಪ್ರಾ, ಮನೋಜ್ ಜೋಶಿ. ರಿಮಿ ಸೇನ್ ಮೊದಲಾದವರು ನಟಿಸಿದ್ದರು. ಈ ಚಿತ್ರವನ್ನು ಸಂಜಯ್ ಗಾಧ್ವಿ ನಿರ್ದೇಶನ ಮಾಡಿದ್ದರು. ಇದರಲ್ಲಿ ಅನೇಕ ಟ್ವಿಸ್ಟ್​ಗಳು ಇದ್ದವು.

ಇದನ್ನೂ ಓದಿ: ಎಲ್ಲರ ಎದುರು ಅಭಿಷೇಕ್ ಜತೆ ಐಶ್ವರ್ಯಾ ರೈ ಜಗಳ; ವಿಡಿಯೋದಿಂದ ಹೆಚ್ಚಿತು ಡಿವೋರ್ಸ್ ಗುಮಾನಿ

ಅಭಿಷೇಕ್ ಹಾಗೂ ಐಶ್ವರ್ಯಾ ಇಬ್ಬರೂ ಸಿನಿಮಾ ಒಪ್ಪಿಕೊಳ್ಳುವಲ್ಲಿ ಯಾವುದೇ ತರಾತುರಿ ತೋರಿಸುತ್ತಿಲ್ಲ. ‘ಪೊನ್ನಿಯಿನ್ ಸೆಲ್ವನ್ 2’ ಬಳಿಕ ಐಶ್ವರ್ಯಾ ಅವರು ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಅಭಿಷೇಕ್ ಅವರು ವಿಲನ್ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.