ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಸ್ಟಾರ್ ಕಲಾವಿದರ ಬಾಲ್ಯದ ಫೋಟೋಗಳು ವೈರಲ್ ಆಗುತ್ತವೆ. ಕೆಲವು ಫೋಟೋಗಳನ್ನು ಸೆಲೆಬ್ರಿಟಿಗಳೇ ಶೇರ್ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವು ಫೋಟೋಗಳನ್ನು ಅವರ ಅಭಿಮಾನಿಗಳು ಹುಡುಕಿ ತೆಗೆಯುತ್ತಾರೆ. ಈಗ ಸ್ಟಾರ್ ಹೀರೋನ ಬಾಲ್ಯದ ಫೋಟೋ ಒಂದು ವೈರಲ್ ಆಗಿದೆ. ಇದನ್ನು ಹಂಚಿಕೊಂಡಿದ್ದು ಹೀರೋನ ಸಹೋದರಿ. ಅಂದಹಾಗೆ ಈ ಫೋಟೋದಲ್ಲಿ ಇರೋದು ಅಭಿಷೇಕ್ ಬಚ್ಚನ್ (Abhishek Bachchan). ಇಂದು (ಫೆಬ್ರವರಿ 5) ಅವರ ಬರ್ತ್ಡೇ. ಆ ಪ್ರಯುಕ್ತ ಶ್ವೇತಾ ಬಚ್ಚನ್ ಅವರು ಬಾಲ್ಯದ ಫೋಟೋ ಹಂಚಿಕೊಂಡು ಶುಭಾಶಯ ಕೋರಿದ್ದಾರೆ.
ಇಂದು ಅಭಿಷೇಕ್ ಬಚ್ಚನ್ ಅವರಿಗೆ 48ನೇ ವರ್ಷದ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರಿಗೆ ಎಲ್ಲ ಕಡೆಗಳಿಂದ ವಿಶ್ಗಳು ಬರುತ್ತಿವೆ. ಅಭಿಮಾನಿಗಳ ಜೊತೆಗೆ ಅವರ ಕುಟುಂಬದವರು ಕೂಡ ಶುಭ ಕೋರುತ್ತಿದ್ದಾರೆ. ಅವರ ಸಾಧನೆಗಳನ್ನು ನೆನೆಯಲಾಗುತ್ತಿದೆ. ಅವರ ಬರ್ತ್ಡೇನ ಶ್ವೇತಾ ಬಚ್ಚನ್ ಮತ್ತಷ್ಟು ವಿಶೇಷ ಗೊಳಿಸಿದ್ದಾರೆ. ಬಾಲ್ಯದ ಒಂದು ಮುದ್ದಾದ ಫೋಟೋನ ಶೇರ್ ಮಾಡಿಕೊಂಡಿದ್ದಾರೆ.
ಶ್ವೇತಾ ಬಚ್ಚನ್ ಅವರು ಬಾಲ್ಯದ ಫೋಟೋ ಪೋಸ್ಟ್ ಮಾಡಿದ್ದಾರೆ. ಇದು ಸುಮಾರು 4 ದಶಕಗಳಿಗಿಂತಲೂ ಹಿಂದಿನ ಫೋಟೋ. ಶ್ವೇತಾ ಹಾಗೂ ಅಭಿಷೇಕ್ ಒಟ್ಟಾಗಿ ಇರುವ ಫೋಟೋ ಇದಾಗಿದೆ. ಇಬ್ಬರೂ ಏನನ್ನೋ ತಿನ್ನುತ್ತಿದ್ದಾರೆ. ಶ್ವೇತಾ ಅವರು ಅಭಿಷೇಕ್ನ ದಿಟ್ಟಿಸಿ ನೋಡುತ್ತಿದ್ದಾರೆ. ಅವರು ಶುಭಾಶಯ ಕೋರಿ ವಿಶ್ ಮಾಡಿದ್ದಾರೆ.
ಶ್ವೇತಾ ಬಚ್ಚನ್ ಮಗಳು ನವ್ಯಾ ನವೇಲಿ ನಂದ ಕೂಡ ಅಭಿಷೇಕ್ಗೆ ವಿಶ್ ಮಾಡಿದ್ದಾರೆ. ನಿರ್ದೇಶಕಿ ಜೋಯಾ ಅಖ್ತರ್, ನಟಿ ಸೋನಾಲಿ ಬೇಂದ್ರೆ ಮೊದಲಾದವರು ಶುಭಾಶಯ ತಿಳಿಸಿದ್ದಾರೆ. ಆದರೆ ಈವರೆಗೆ (ಫೆಬ್ರವರಿ 5 ಬೆಳಿಗ್ಗೆ 11:30) ಐಶ್ವರ್ಯಾ ರೈ ಅವರು ಅಭಿಷೇಕ್ ಕುರಿತು ಯಾವುದೇ ಪೋಸ್ಟ್ ಮಾಡಿಲ್ಲ.
ಇದನ್ನೂ ಓದಿ: ‘ಐಶ್ವರ್ಯಾಗಿಂತ ಅಭಿಷೇಕ್ ಉತ್ತಮ ನಟ’; ಶ್ವೇತಾ ಬಚ್ಚನ್ ನೇರ ಮಾತು
ಇತ್ತೀಚೆಗೆ ಅಭಿಷೇಕ್ ಹಾಗೂ ಐಶ್ವರ್ಯಾ ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಜೋರಾಗಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, ಇವರು ಪ್ರೋ ಕಬ್ಬಡಿ ಸಂದರ್ಭದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ಮೂಲಕ ವಿಚ್ಛೇದನ ವಿಚಾರಕ್ಕೆ ತೆರೆ ಎಳೆದಿದ್ದರು. ಈಗ ಅಭಿಷೇಕ್ಗೆ ಪತ್ನಿ ಐಶ್ವರ್ಯಾ ವಿಶ್ ಮಾಡುತ್ತಾರಾ ಅಥವಾ ಇಲ್ಲವಾ ಎನ್ನುವ ಪ್ರಶ್ನೆ ಮೂಡಿದೆ. ಇನ್ನು, ಸಿನಿಮಾ ವಿಚಾರಕ್ಕೆ ಬರೋದಾದರೆ ಅಭಿಷೇಕ್ ಸಿನಿಮಾ ರಂಗದಲ್ಲಿ ದೊಡ್ಡ ಗೆಲುವು ಕಾಣುತ್ತಿಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾಗಳು ರಿಲೀಸ್ ಆಗುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:33 am, Mon, 5 February 24