AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Janhvi Kapoor: ಹೇಗಿದೆ ನೋಡಿ ನಟಿ ಜಾನ್ವಿ ಕಪೂರ್ ವರ್ಕೌಟ್​; ಇಲ್ಲಿದೆ ವಿಡಿಯೋ

ಈ ವಿಡಿಯೋದಲ್ಲಿ ಜಾನ್ವಿ ಭರ್ಜರಿಯಾಗಿ ವರ್ಕೌಟ್ ಮಾಡುತ್ತಿದ್ದಾರೆ. ಇದು ಹಳೆಯ ವಿಡಿಯೋ ಆಗಿದ್ದು, ಈಗ ಪೋಸ್ಟ್​ ಮಾಡಲಾಗಿದೆ. ಇದು ಅತ್ಯಂತ ಕಷ್ಟದ ವರ್ಕೌಟ್ ಎಂದು ಹೇಳಲಾಗಿದೆ.

Janhvi Kapoor: ಹೇಗಿದೆ ನೋಡಿ ನಟಿ ಜಾನ್ವಿ ಕಪೂರ್ ವರ್ಕೌಟ್​; ಇಲ್ಲಿದೆ ವಿಡಿಯೋ
ಜಾನ್ವಿ
TV9 Web
| Edited By: |

Updated on: May 26, 2022 | 4:58 PM

Share

ಸೆಲೆಬ್ರಿಟಿಗಳು ಫಿಟ್​​ನೆಸ್​ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಈ ಕಾರಣಕ್ಕೆ ಜಿಮ್​ನಲ್ಲಿ (Gym) ಹೆಚ್ಚು ಸಮಯ ಕಳೆಯುತ್ತಾರೆ. ಕೆಲವರು ಯೋಗದ ಮೊರೆ ಕೂಡ ಹೋಗುತ್ತಾರೆ. ಒಟ್ಟಿನಲ್ಲಿ ನಿತ್ಯ ಒಂದಷ್ಟು ಸಮಯವನ್ನು ದೇಹ ಹುರಿಗೊಳಿಸಲು ಮೀಸಲಿಡುತ್ತಾರೆ. ನಟಿ ಜಾನ್ವಿ ಕಪೂರ್ ಕೂಡ ಇದಕ್ಕೆ ಹೊರತಾಗಿಲ್ಲ. ಬಾಲಿವುಡ್​ನ ಸ್ಟಾರ್​ ಕುಡಿ ಆಗಿರುವ ಜಾನ್ವಿ (Janhvi Kapoor) ನಿತ್ಯ ಒಂದಷ್ಟು ಸಮಯವನ್ನು ಫಿಟ್​ನೆಸ್ ಕಾಯ್ದುಕೊಳ್ಳಲು ಮೀಸಲಿಟ್ಟಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಈಗ ಅವರು ಜಿಮ್​ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.

‘ಧಡಕ್​’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದವರು ಜಾನ್ವಿ. ಇದು ಮರಾಠಿ ಸಿನಿಮಾದ ರಿಮೇಕ್ ಆದರೂ ಹಿಂದಿಯಲ್ಲಿ ಈ ಚಿತ್ರ ಒಳ್ಳೆಯ ಗಳಿಕೆ ಕಂಡಿತು. ಮೊದಲ ಸಿನಿಮಾದಲ್ಲೇ ಗೆಲುವಿನ ರುಚಿ ಕಂಡರು ಜಾನ್ವಿ. ಆ ಬಳಿಕ ಅವರಿಗೆ ಒಳ್ಳೆಯ ಆಫರ್​ಗಳು ಬಂದರೂ ಹೇಳಿಕೊಳ್ಳುವಂತಹ ಗೆಲುವು ಸಿಗಲಿಲ್ಲ. ‘ಗುಂಜನ್​ ಸಕ್ಸೇನಾ: ದಿ ಕಾರ್ಗಿಲ್​ ಗರ್ಲ್​’, ‘ರೂಹಿ’ ಚಿತ್ರಗಳಲ್ಲಿ ಜಾನ್ವಿ ನಟನೆಯನ್ನು ಹೊಗಳಿದವರು ಕಡಿಮೆ. ಸದ್ಯ, ಹಲವು ಸಿನಿಮಾ ಕೆಲಸಗಳಲ್ಲಿ ಜಾನ್ವಿ ಬ್ಯುಸಿ ಇದ್ದಾರೆ. ಈ ಮಧ್ಯೆ ವರ್ಕೌಟ್ ಕೂಡ ಮಾಡುತ್ತಿದ್ದಾರೆ.

ಜಾನ್ವಿ ಕಪೂರ್ ಆ್ಯಂಟಿಗ್ರ್ಯಾವಿಟಿ ಕ್ಲಬ್​ ಜಿಮ್​​ನಲ್ಲಿ ವರ್ಕೌಟ್​ ನಡೆಸುತ್ತಾರೆ. ಈ ಜಿಮ್​ನವರು ಇನ್​​ಸ್ಟಾಗ್ರಾಮ್​ನಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಜಾನ್ವಿ ಭರ್ಜರಿಯಾಗಿ ವರ್ಕೌಟ್ ಮಾಡುತ್ತಿದ್ದಾರೆ. ಇದು ಹಳೆಯ ವಿಡಿಯೋ ಆಗಿದ್ದು, ಈಗ ಪೋಸ್ಟ್​ ಮಾಡಲಾಗಿದೆ. ಇದು ಅತ್ಯಂತ ಕಷ್ಟದ ವರ್ಕೌಟ್ ಎಂದು ಹೇಳಲಾಗಿದೆ.

ಜಾನ್ವಿ ಸ್ಟಾರ್ ಕಿಡ್ ಆಗಿರುವುದರಿಂದ ಹಲವು ಆಫರ್​ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಆದರೆ, ಎಲ್ಲಾ ಚಿತ್ರಗಳನ್ನು ಅವರು ಒಪ್ಪಿಕೊಳ್ಳುತ್ತಿಲ್ಲ. ‘ಗುಡ್​ ಲಕ್​ ಜೆರ್ರಿ’, ‘ಮಿಲಿ’, ‘ಮಿಸ್ಟರ್​ ಆ್ಯಂಡ್ ಮಿಸಸ್​ ಮಾಹಿ’ ಹಾಗೂ ‘ಬವಾಲ್’ ಸಿನಿಮಾಗಳಲ್ಲಿ ಸದ್ಯ ಅವರು ನಟಿಸುತ್ತಿದ್ದಾರೆ. ಸಿನಿಮಾ ಕೆಲಸಗಳ ಮಧ್ಯೆ ಅವರು ಫ್ರೆಂಡ್ಸ್ ಜತೆ ಸುತ್ತಾಡೋಕೆ ತೆರಳುತ್ತಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.

ಇದನ್ನೂ ಓದಿ: ಮೇ ತಿಂಗಳನ್ನು ಕಳೆದಿದ್ದು ಹೇಗೆ ಎಂಬುದನ್ನು ಫೋಟೋ ಮೂಲಕ ವಿವರಿಸಿದ ಜಾನ್ವಿ ಕಪೂರ್

ಇನ್ನು, ಜಾನ್ವಿ ಹಾಟ್ ಫೋಟೋಗಳನ್ನು ಹಂಚಿಕೊಳ್ಳಲು ಹಿಂದೆ ಬಿದ್ದಿಲ್ಲ. ವಾರಕ್ಕೆ ಒಂದಾದರೂ ಫೋಟೋಶೂಟ್ ಮಾಡಿಸಿ ಆ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡುತ್ತಾರೆ. ಈ ಫೋಟೋಗಳಿಗೆ ಲಕ್ಷಾಂತರ ಮಂದಿ ಲೈಕ್ಸ್ ಒತ್ತುತ್ತಾರೆ. ಅವರ ಅಭಿಮಾನಿ ಬಳಗ ನಿತ್ಯ ಹಿರಿದಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
TV9 Web
TV9 Web

TV9 Kannada

Read More
ರಾಜ್​ ಸಂಬಂಧಿ ಮನೆಯಲ್ಲಿ ಸ್ಫೋಟ: ಸ್ಥಳ ಮಹಜರು ವೇಳೆ ಹೈಡ್ರಾಮಾ
ರಾಜ್​ ಸಂಬಂಧಿ ಮನೆಯಲ್ಲಿ ಸ್ಫೋಟ: ಸ್ಥಳ ಮಹಜರು ವೇಳೆ ಹೈಡ್ರಾಮಾ
ಎನ್​ಡಿಎ ಪರೀಕ್ಷೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭದ್ರಾವತಿಯ ಶ್ರೇಯಾ
ಎನ್​ಡಿಎ ಪರೀಕ್ಷೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭದ್ರಾವತಿಯ ಶ್ರೇಯಾ
ಬರ ಪರಿಹಾರದಲ್ಲಿ ವ್ಯತ್ಯಾಸ: ಆಕ್ರೋಶ; ಸರ್ಕಾರಕ್ಕೆ ಚೆಕ್ ಬರೆದ ಅನ್ನದಾತರು
ಬರ ಪರಿಹಾರದಲ್ಲಿ ವ್ಯತ್ಯಾಸ: ಆಕ್ರೋಶ; ಸರ್ಕಾರಕ್ಕೆ ಚೆಕ್ ಬರೆದ ಅನ್ನದಾತರು
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ
ಮುಂಬೈನಲ್ಲಿ ಪಟಾಕಿ ಅಂಗಡಿಯಲ್ಲಿ ಸ್ಫೋಟ; 16 ವರ್ಷದ ಬಾಲಕ ಸಾವು
ಮುಂಬೈನಲ್ಲಿ ಪಟಾಕಿ ಅಂಗಡಿಯಲ್ಲಿ ಸ್ಫೋಟ; 16 ವರ್ಷದ ಬಾಲಕ ಸಾವು
7 ಮಂದಿ ಕೊಲೆ ಪ್ರಕರಣ: ಆರೋಪಿ ಇಂದುಶೇಖರ್​​ ವಿಚಾರಣೆ ಮತ್ತಷ್ಟು ತೀವ್ರ
7 ಮಂದಿ ಕೊಲೆ ಪ್ರಕರಣ: ಆರೋಪಿ ಇಂದುಶೇಖರ್​​ ವಿಚಾರಣೆ ಮತ್ತಷ್ಟು ತೀವ್ರ
ಮಾದಪ್ಪನ ಬೆಟ್ಟದಲ್ಲಿ ಇಂದು ದೀಪಾವಳಿ ಜಾತ್ರಾ ಮಹೋತ್ಸವ; ಬೆಳಗಿದವು ಲಕ್ಷದೀಪ
ಮಾದಪ್ಪನ ಬೆಟ್ಟದಲ್ಲಿ ಇಂದು ದೀಪಾವಳಿ ಜಾತ್ರಾ ಮಹೋತ್ಸವ; ಬೆಳಗಿದವು ಲಕ್ಷದೀಪ