ಸುಶಾಂತ್ ಫ್ಲ್ಯಾಟ್​ನಲ್ಲಿರೋ ಎನರ್ಜಿ ಎಂಥದ್ದು? ವಿವರಿಸಿದ ಅದಾ ಶರ್ಮಾ

| Updated By: ರಾಜೇಶ್ ದುಗ್ಗುಮನೆ

Updated on: Oct 16, 2024 | 7:58 AM

ಸುಶಾಂತ್ ಸಿಂಗ್ ಮೃತಪಟ್ಟ ಬಳಿಕ ಆ ಫ್ಲ್ಯಾಟ್​ನಲ್ಲಿ ವಾಸ ಮಾಡಲು ಯಾರೂ ಸಿದ್ಧರಿರಲಿಲ್ಲ. ಏನಾದರೂ ಆದರೆ ಎಂಬ ಭಯ ಅನೇಕರಿಗೆ ಇತ್ತು. ಈ ಕಾರಣದಿಂದಲೇ ಯಾರೂ ಈ ಫ್ಲ್ಯಾಟ್​ಗೆ ಬರುತ್ತಿರಲಿಲ್ಲ ಎಂದು ಇದರ ಮಾಲೀಕರು ಹೇಳಿಕೊಂಡಿದ್ದರು. ನಂತರದಲ್ಲಿ ಅದಾ ಶರ್ಮಾ ಈ ರೀತಿಯ ಧೈರ್ಯ ಮಾಡಿದರು.

ಸುಶಾಂತ್ ಫ್ಲ್ಯಾಟ್​ನಲ್ಲಿರೋ ಎನರ್ಜಿ ಎಂಥದ್ದು? ವಿವರಿಸಿದ ಅದಾ ಶರ್ಮಾ
ಸುಶಾಂತ್-ಅದಾ
Follow us on

ಬಾಲಿವುಡ್ ನಟಿ ಅದಾ ಶರ್ಮಾ ಅವರು ಸುಶಾಂತ್ ಸಿಂಗ್ ಅವರು ಮೃತಪಟ್ಟ ಫ್ಲ್ಯಾಟ್​ಗೆ ಶಿಫ್ಟ್ ಆಗಿದ್ದಾರೆ. ಇದು ನಿಜಕ್ಕೂ ದಿಟ್ಟ ನಿರ್ಧಾರ. ಸುಶಾಂತ್ ವಾಸವಾಗಿದ್ದ ತಮ್ಮ ಫ್ಲ್ಯಾಟ್​ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕಾರಣಕ್ಕೆ ಆರಂಭದಲ್ಲಿ ಆ ಫ್ಲ್ಯಾಟ್​ಗೆ ತೆರಳಲು ಯಾರೂ ಮುಂದೆ ಬಂದಿರಲಿಲ್ಲ. ನಂತರ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು ಅದಾ ಶರ್ಮಾ ಅವರು. ಅವರಿಗೆ ಈ ಮನೆಯಲ್ಲಿ ಸಾಕಷ್ಟು ಎನರ್ಜಿ ಸಿಗುತ್ತಿದೆ.

ಸುಶಾಂತ್ ಸಿಂಗ್ ಮೃತಪಟ್ಟ ಬಳಿಕ ಆ ಫ್ಲ್ಯಾಟ್​ನಲ್ಲಿ ವಾಸ ಮಾಡಲು ಯಾರೂ ಸಿದ್ಧರಿರಲಿಲ್ಲ. ಏನಾದರೂ ಆದರೆ ಎಂಬ ಭಯ ಅನೇಕರಿಗೆ ಇತ್ತು. ಈ ಕಾರಣದಿಂದಲೇ ಯಾರೂ ಈ ಫ್ಲ್ಯಾಟ್​ಗೆ ಬರುತ್ತಿರಲಿಲ್ಲ ಎಂದು ಇದರ ಮಾಲೀಕರು ಹೇಳಿಕೊಂಡಿದ್ದರು. ನಂತರದಲ್ಲಿ ಅದಾ ಶರ್ಮಾ ಈ ರೀತಿಯ ಧೈರ್ಯ ಮಾಡಿದರು. ಅವರು ಹೊಸ ಮನೆಯ ವಾಸದ ಬಗ್ಗೆ ಹೇಳಿಕೊಂಡಿದ್ದರು.

ಅದಾ ಶರ್ಮಾ ಹೊಸ ಮನೆಗೆ ಶಿಫ್ಟ್ ಆದ ಬಗ್ಗೆ ಕೆಲವರು ಟೀಕೆ ಮಾಡಿದ್ದರು. ಈ ಕುರಿತು ಅದಾ ಶರ್ಮಾ ಮಾತನಾಡಿದ್ದಾರೆ. ‘ನಟಿಯಾಗಿ ಹಾಗೂ ಕಲಾವಿದನಾಗಿ ಎಲ್ಲದಕ್ಕೂ ನೀವು ರಿಯಾಕ್ಟ್ ಮಾಡಬೇಕು ಎಂದಿಲ್ಲ. ಜೀವನದಲ್ಲಿ ಸಾಕಷ್ಟು ವಿಚಾರಗಳನ್ನು ಮಾಡೋದು ಇರುತ್ತದೆ. ನಮ್ಮದು ಸ್ವತಂತ್ರ ರಾಷ್ಟ್ರ. ಎಲ್ಲರಿಗೂ ಆಯ್ಕೆಗಳಿವೆ. ಯಾರಿಗಾದರೂ ಏನಾದರೂ ಅನಿಸಿದರೆ ಅದನ್ನು ಮಾಡಲಿ. ನಾನು ಅದಕ್ಕೆ ಉತ್ತರಿಸೋಕೆ ಇಲ್ಲ’ ಎಂದಿದ್ದಾರೆ ಅವರು.

‘ನಾನು ಒಳ್ಳೆಯ ವ್ಯಕ್ತಿ. ನಾನು ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ನನ್ನ ಬಗ್ಗೆ ನನಗೆ ಗೊತ್ತು. ನನಗಾಗಿ ಯಾರೂ ಬದಲಾಗಬೇಕಿಲ್ಲ. ನಾನು ಕೂಡ ಯಾರಿಗೂ ಬದಲಾಗಲ್ಲ’ ಎಂದಿದ್ದಾರೆ ಅವರು. ಫ್ಲ್ಯಾಟ್ ಬಗ್ಗೆ ಮಾತನಾಡಿದ ಅವರು, ‘ನನಗೆ ಮನೆ ಇಷ್ಟ ಆಗಿದೆ. ಆ ಜಾಗ ನನಗೆ ಇಷ್ಟ ಆಗುತ್ತಿದೆ. ಆ ಮನೆಯಲ್ಲಿರೋ ಎನರ್ಜಿ ನಿಜಕ್ಕೂ ಉತ್ತಮವಾಗಿದೆ’ ಎಂದು  ಅದಾ ಶರ್ಮಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಅದಾ ಶರ್ಮಾ ಪಡೆದ ಶಿಕ್ಷಣ ತುಂಬಾನೇ ಕಡಿಮೆ; ಕೈ ಹಿಡಿದ ನಟನೆಯಿಂದ ಕೋಟಿ ಗಳಿಕೆ

ಅದಾ ಶರ್ಮಾ ಅವರು ಗ್ಲಾಮರ್ ಪಾತ್ರಗಳನ್ನು ಮಾಡಿಕೊಂಡಿದ್ದವರು. ‘ದಿ ಕೇರಳ ಸ್ಟೋರಿ’ ಚಿತ್ರ ಅವರ ಬದುಕು ಬದಲಾಯಿಸಿತು. ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಯುವತಿ ನಂತರ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಅವರು ಇರಾನ್​ಗೆ ಹೋಗಿ ಐಸಿಸ್ ಸೇರುವ ಕಥೆಯನ್ನು ಈ ಸಿನಿಮಾ ಹೊದಿದೆ. ಈಗ ಅವರು ‘ರೀತಾ ಸನ್ಯಾಲ್’ ಹೆಸರಿನ ಸೀರಿಸ್ ಮಾಡಿದ್ದಾರೆ. ಡಿಸ್ನಿ+ ಹಾಟ್​ಸ್ಟಾರ್​ನಲ್ಲಿ ಸೀರಿಸ್ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.