Adah Sharma: ‘ಖ್ಯಾತ ನಟರಿಂದಲೂ ಕೇರಳ ಸ್ಟೋರಿ ಯಶಸ್ಸನ್ನು ತಡೆಯಲಾಗಲಿಲ್ಲ’; ಸ್ಟಾರ್ ಹೀರೋನ ಟೀಕಿಸಿದ ಅದಾ ಶರ್ಮಾ

ಕಮಲ್ ಹಾಸನ್ ಅವರಂಥ ಸ್ಟಾರ್ ಹೀರೋಗಳು ವಿರೋಧಿಸಿದ್ದರು. ಶಾಂತಿ ಕದಡುವ ಕೆಲಸ ಈ ಚಿತ್ರದಿಂದ ಆಗುತ್ತಿದೆ ಎಂದಿದ್ದರು. ಸ್ಟಾರ್ ಹೀರೋಗಳ ಹೆಸರನ್ನು ಹೇಳದೇ ಅದಾ ಶರ್ಮಾ ಅವರು ತಿರುಗೇಟು ನೀಡಿದ್ದಾರೆ.

Adah Sharma: ‘ಖ್ಯಾತ ನಟರಿಂದಲೂ ಕೇರಳ ಸ್ಟೋರಿ ಯಶಸ್ಸನ್ನು ತಡೆಯಲಾಗಲಿಲ್ಲ’; ಸ್ಟಾರ್ ಹೀರೋನ ಟೀಕಿಸಿದ ಅದಾ ಶರ್ಮಾ
ಅದಾ ಶರ್ಮಾ-ಕಮಲ್ ಹಾಸನ್
Follow us
ರಾಜೇಶ್ ದುಗ್ಗುಮನೆ
|

Updated on:Jul 14, 2023 | 8:11 AM

ಮೇ ತಿಂಗಳಲ್ಲಿ ರಿಲೀಸ್ ಆದ ‘ದಿ ಕೇರಳ ಸ್ಟೋರಿ’ ಸಿನಿಮಾ (The Kerala Story Movie) ಸಾಕಷ್ಟು ಸದ್ದು ಮಾಡಿತು. ಈ ಚಿತ್ರದ ಸುತ್ತ ವಿವಾದಗಳೂ ಹುಟ್ಟಿಕೊಂಡವು. ಈ ಚಿತ್ರದಿಂದ ನಿರ್ದೇಶಕ ಸುದಿಪ್ತೋ ಸೇನ್ ದೊಡ್ಡ ಯಶಸ್ಸು ಕಂಡರು. ಅದೇ ರೀತಿ ನಟಿ ಅದಾ ಶರ್ಮಾ ಕೂಡ ಗೆದ್ದು ಬೀಗಿದರು. ಈ ಚಿತ್ರವನ್ನು ವಿರೋಧಿಸಿದವರ ಸಂಖ್ಯೆ ದೊಡ್ಡದಿದೆ. ಖ್ಯಾತ ನಟ ಕಮಲ್ ಹಾಸನ್ (Kamal Haasan), ನಸೀರುದ್ದೀನ್ ಶಾ ಸೇರಿ ಅನೇಕರು ಈ ಚಿತ್ರವನ್ನು ವಿರೋಧ ಮಾಡಿದರು. ಈ ವಿಚಾರದ ಬಗ್ಗೆ ನಟಿ ಅದಾ ಶರ್ಮಾ ಮಾತನಾಡಿದ್ದಾರೆ. ‘ಖ್ಯಾತ ನಟರಿಗೂ ನಮ್ಮ ಸಿನಿಮಾ ಯಶಸ್ಸನ್ನು ತಡೆಯಲಾಗಲಿಲ್ಲ’ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಕೇರಳದಲ್ಲಿ ನಡೆದಿದೆ ಎನ್ನಲಾದ ಮತಾಂತರದ ಕುರಿತು ‘ದಿ ಕೇರಳ ಸ್ಟೋರಿ’ ಸಿನಿಮಾ ಇದೆ. ಐಸಿಸ್​ನವರ ಹುನ್ನಾರದ ಬಗ್ಗೆಯೂ ಇಲ್ಲಿ ವಿವರಿಸಲಾಗಿದೆ. ಇದು ಸತ್ಯ ಅಲ್ಲ ಎಂದು ಒಂದಷ್ಟು ಮಂದಿ ಹೇಳಿದರೆ, ಇದು ನಿಜ ಎಂದು ಮತ್ತೊಂದಷ್ಟು ಮಂದಿ ವಾದಿಸುತ್ತಿದ್ದಾರೆ. ಈ ಚಿತ್ರವನ್ನು ಕಮಲ್ ಹಾಸನ್ ಅವರಂಥ ಸ್ಟಾರ್ ಹೀರೋಗಳು ವಿರೋಧಿಸಿದ್ದರು. ಶಾಂತಿ ಕದಡುವ ಕೆಲಸ ಈ ಚಿತ್ರದಿಂದ ಆಗುತ್ತಿದೆ ಎಂದಿದ್ದರು. ಸ್ಟಾರ್ ಹೀರೋಗಳ ಹೆಸರನ್ನು ಹೇಳದೇ ಅದಾ ಶರ್ಮಾ ಅವರು ತಿರುಗೇಟು ನೀಡಿದ್ದಾರೆ.

‘ನಮ್ಮ ದೇಶದಲ್ಲಿ ವಾಕ್ ಸ್ವಾತಂತ್ರ್ಯ ಇದೆ. ಇಲ್ಲಿ ಸಿನಿಮಾ ನೋಡದೆ ಅದರ ಬಗ್ಗೆ ಅಪಪ್ರಚಾರ ಮಾಡಬಹುದು. ಸಾರ್ವಜನಿಕರು ನೋಡದಂತೆ ಅದನ್ನು ತಡೆಯಬಹುದು. ಯಾರು ಯಾರ ಬಗ್ಗೆ ಏನು ಬೇಕಾದರೂ ಹೇಳಿಕೆ ನೀಡಬಹುದು. ಹಾಗೆ ಹೇಳಿದ ಬಳಿಕವೂ ಅವರು ಆರಾಮಾಗಿ ಬದುಕಬಹುದು. ಇದು ಭಾರತದ ಸೌಂದರ್ಯ. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ. ವಿಭಿನ್ನ ಸಿದ್ಧಾಂತಗಳನ್ನು ಹೊಂದಿರುವ ಜನರು ಸಹಬಾಳ್ವೆ ಮಾಡಬಹುದು. ಖ್ಯಾತ ನಟರು ದಿ ಕೇರಳ ಸ್ಟೋರಿ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ಬಳಿಕವೂ ಪ್ರೇಕ್ಷಕರು ಭಯೋತ್ಪಾದನೆಯ ವಿರುದ್ಧ ನಿಂತಿರುವ ಚಿತ್ರವನ್ನು ಬೆಂಬಲಿಸಲು ಚಿತ್ರಮಂದಿರಕ್ಕೆ ತೆರಳಿದರು. ಇದು ನಿಜಕ್ಕೂ ಅದ್ಭುತ’ ಎಂದು ಅವರು ಜಾಗರಣ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: 72 Hoorain: ‘ದಿ ಕೇರಳ ಸ್ಟೋರಿ’, ‘ದಿ ಕಾಶ್ಮೀರ್​ ಫೈಲ್ಸ್​’ ರೀತಿ ತಂತ್ರ ರೂಪಿಸಿದರೂ ಸೋತ ‘72 ಹೂರೇ’ ಸಿನಿಮಾ

‘ಈ ರೀತಿಯ ಪ್ರೊಪೋಗಾಂಡ ಸಿನಿಮಾಗಳನ್ನು ನಿಲ್ಲಿಸಿ. ಇದು ನೈಜ ಘಟನೆ ಆಧಾರಿತ ಎಂದು ನೀವು ಬರೆದುಕೊಂಡರೆ ಸಾಕಾಗುವುದಿಲ್ಲ. ಆ ಸಿನಿಮಾದಲ್ಲಿ ನಿಜಕ್ಕೂ ನೈಜ ಘಟನೆ ಇರಬೇಕು’ ಎಂದು ಕಮಲ್ ಹಾಸನ್ ಈ ಮೊದಲು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿಕ್ಷ

Published On - 7:46 am, Fri, 14 July 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ