Deepfake: ರಶ್ಮಿಕಾ ಮಂದಣ್ಣ, ಕಾಜೋಲ್​ ಬಳಿಕ ನಟಿ ಆಲಿಯಾ ಭಟ್​ಗೆ ಶುರುವಾಯ್ತು ಡೀಪ್​ಫೇಕ್​ ಕಾಟ

Alia Bhatt Deepfake Video: ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್​ಫೇಕ್​ ವಿಡಿಯೋ ನೋಡಿ ಅನೇಕರು ಕಿಡಿಕಾರಿದ್ದರು. ಬಾಲಿವುಡ್​ ನಟಿ ಕಾಜೋಲ್​ ಅವರ ಡೀಪ್​ಫೇಕ್​ ವಿಡಿಯೋ ವೈರಲ್​ ಆದಾಗಲೂ ನೆಟ್ಟಿಗರು ಗರಂ ಆಗಿದ್ದರು. ಈಗ ಆಲಿಯಾ ಭಟ್​ ಕೂಡ ಡೀಪ್​ಫೇಕ್​ ಹಾವಳಿಗೆ ಸಿಲುಕಿದ್ದಾರೆ. ಅವರ ವಿಡಿಯೋ ವೈರಲ್​ ಆಗಿದೆ.

Deepfake: ರಶ್ಮಿಕಾ ಮಂದಣ್ಣ, ಕಾಜೋಲ್​ ಬಳಿಕ ನಟಿ ಆಲಿಯಾ ಭಟ್​ಗೆ ಶುರುವಾಯ್ತು ಡೀಪ್​ಫೇಕ್​ ಕಾಟ
ಆಲಿಯಾ ಭಟ್​ ಡೀಪ್​ಫೇಕ್​

Updated on: Nov 27, 2023 | 4:40 PM

ತಂತ್ರಜ್ಞಾನದ ದುರ್ಬಳಕೆಯಿಂದ ನಟಿಯರಿಗೆ ತೊಂದರೆ ಆಗುತ್ತಿದೆ. ಕೆಲವೇ ದಿನಗಳ ಹಿಂದೆ ರಶ್ಮಿಕಾ ಮಂದಣ್ಣ (Rashmika Mandanna), ಕಾಜೋಲ್​ ಅವರ ಡೀಪ್​ಫೇಕ್​ ವಿಡಿಯೋ ವೈರಲ್​ ಆಗಿತ್ತು. ಈಗ ನಟಿ ಆಲಿಯಾ ಭಟ್​ ಕೂಡ ಡೀಪ್​ಫೇಕ್​ ಕಾಟಕ್ಕೆ ಒಳಗಾಗಿದ್ದಾರೆ. ಬೇರೆ ಯಾವುದೋ ಮಹಿಳೆಯ ದೇಹಕ್ಕೆ ಆಲಿಯಾ ಭಟ್ (Alia Bhatt)​ ಅವರ ಮುಖವನ್ನು ಎಡಿಟ್​ ಮಾಡಿ ಒಂದು ವಿಡಿಯೋ ವೈರಲ್​ ಮಾಡಲಾಗಿದೆ. ಈ ಬಗ್ಗೆ ಆಲಿಯಾ ಭಟ್​ ಅವರು ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಈ ರೀತಿ ಡೀಪ್​ಫೇಕ್​ (Deepfake) ವಿಡಿಯೋ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅನೇಕರು ಒತ್ತಾಯಿಸುತ್ತಿದ್ದಾರೆ. ಅದರ ನಡುವೆಯೂ ಸೈಬರ್​ ಕಿಡಿಗೇಡಿಗಳು ಇಂಥ ಕೃತ್ಯ ಮುಂದುವರಿಸಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಎಲ್ಲವೂ ವೈರಲ್​ ಆಗುತ್ತವೆ. ಯಾವುದು ನಿಜ, ಯಾವುದು ಸುಳ್ಳು ಎಂಬುದನ್ನು ತಿಳಿದುಕೊಳ್ಳುವುದಕ್ಕೂ ಮುನ್ನವೇ ಜನರು ಕಮೆಂಟ್ ಮಾಡುತ್ತಾರೆ. ಅದರಿಂದ ಸೆಲೆಬ್ರಿಟಿಗಳಿಗೆ ಹೆಚ್ಚು ತೊಂದರೆ ಆಗುತ್ತಿದೆ. ರಶ್ಮಿಕಾ ಮಂದಣ್ಣ ಅವರ ಡೀಪ್​ಫೇಕ್​ ವಿಡಿಯೋ ನೋಡಿ ಅನೇಕರು ಕಿಡಿಕಾರಿದ್ದರು. ಕಾಜೋಲ್​ ಅವರ ಡೀಪ್​ಫೇಕ್​ ವಿಡಿಯೋ ವೈರಲ್​ ಆದಾಗಲೂ ನೆಟ್ಟಿಗರು ಗರಂ ಆಗಿದ್ದರು. ಈಗ ಆಲಿಯಾ ಭಟ್​ ಕೂಡ ಡೀಪ್​ಫೇಕ್​ ಹಾವಳಿಗೆ ಸಿಲುಕಿದ್ದಾರೆ. ಅವರ ವಿಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ: Kajol Viral Video: ಕ್ಯಾಮೆರಾ ಎದುರಲ್ಲೇ ಡ್ರೆಸ್​ ಚೇಂಜ್​ ಮಾಡಿದ್ರಾ ಕಾಜೋಲ್​? ನೆಟ್ಟಿಗರ ದಾರಿ ತಪ್ಪಿಸಿದ ಡೀಪ್​ಫೇಕ್ ವಿಡಿಯೋ

ರಶ್ಮಿಕಾ ಮಂದಣ್ಣ ಅವರು ತುಂಬ ಹಾಟ್​ ಆದಂತಹ ಅವತಾರದಲ್ಲಿ ಲಿಫ್ಟ್​ ಪ್ರವೇಶಿಸುತ್ತಿರುವ ರೀತಿಯಲ್ಲಿ ಡೀಪ್​ಫೇಕ್​ ವಿಡಿಯೋ ಮಾಡಲಾಗಿತ್ತು. ಕಾಜೋಲ್​ ಅವರು ಕ್ಯಾಮೆರಾ ಎದುರಿನಲ್ಲೇ ಬಟ್ಟೆ ಬದಲಿಸುತ್ತಿರುವ ಹಾಗೆ ಡೀಪ್​ಫೇಕ್​ ವಿಡಿಯೋ ವೈರಲ್​ ಆಗಿತ್ತು. ರಶ್ಮಿಕಾ ಅವರ ವಿಡಿಯೋ ಮೊದಲ ಬಾರಿಗೆ ವೈರಲ್​ ಆದಾಗ ಅಮಿತಾಭ್​ ಬಚ್ಚನ್​ ಕೂಡ ಟ್ವೀಟ್​ ಮಾಡಿ ಕಿಡಿಗೇಡಿಗಳಿಗೆ ಸೂಕ್ತ ಶಿಕ್ಷೆ ಆಗಬೇಕು ಎಂದಿದ್ದರು. ವಿಜಯ್​ ದೇವರಕೊಂಡ, ನಾಗ ಚೈತನ್ಯ ಮುಂತಾದ ಸೆಲೆಬ್ರಿಟಿಗಳು ಕೂಡ ಗರಂ ಆಗಿದ್ದರು.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ: ಆರೋಪಿ ಸೆರೆ

ಸದ್ಯ ಆಲಿಯಾ ಭಟ್​ ಅವರು ಸಂಸಾರ ಮತ್ತು ಸಿನಿಮಾ ಎರಡಕ್ಕೂ ಸಮಯ ನೀಡುತ್ತಿದ್ದಾರೆ. ನಟಿಯಾಗಿ ಸಖತ್ ಬೇಡಿಕೆ ಇರುವಾಗಲೇ ಅವರು ಮದುವೆ, ಮಕ್ಕಳು ಮಾಡಿಕೊಂಡು ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ. ಅವರು ನಟಿಸಿರುವ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾ ಸೂಪರ್​ ಹಿಟ್​ ಆಗಿದೆ. ಆ ಮೂಲಕ ಅವರಿಗೆ ಇದ್ದ ಬೇಡಿಕೆ ಹೆಚ್ಚಾಗಿದೆ. ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದ ನಟನೆಗೆ ಅವರು ‘ರಾಷ್ಟ್ರ ಪ್ರಶಸ್ತಿ’ ಪಡೆದು ಮಿಂಚಿದ್ದಾರೆ. ದಿನದಿಂದ ದಿನಕ್ಕೆ ಅವರ ಅಭಿಮಾನಿ ಬಳಗ ದೊಡ್ಡದಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us