ಹೇಮಾ ಮಾಲಿನಿ ಅವರನ್ನು ಹಿಂದಿ ಚಿತ್ರರಂಗದಲ್ಲಿ ‘ಡ್ರೀಮ್ ಗರ್ಲ್’ ಎಂದು ಕರೆಯಲಾಗುತ್ತಿತ್ತು. 70 ಹಾಗೂ 80ರ ದಶಕದಲ್ಲಿ ಅವರ ವೃತ್ತಿ ಜೀವನ ಉನ್ನತ ಸ್ಥಾನದಲ್ಲಿ ಇತ್ತು. ಅವರಿಗೆ ದೊಡ್ಡ ಅಭಿಮಾನಿ ಬಳಗ ಇತ್ತು. ಅವರ ಹಳೆಯ ಫೋಟೋಗಳು ಈಗಲೂ ಆಗಾಗ ವೈರಲ್ ಆಗುತ್ತವೆ. ಅವರು ಈಗಲೂ ಅನೇಕರ ಫೇವರಿಟ್ ಎನಿಸಿಕೊಂಡಿದ್ದಾರೆ. ಜಿತೇಂದ್ರ ಹಾಗೂ ಸಂಜೀವ್ ಕುಮಾರ್ ಅವರುಗಳು ಹೇಮಾ ಮಾಲಿನಿಯ ಅಭಿಮಾನಿ ಆಗಿದ್ದರು. ಅವರು ಹೇಮಾ ಮಾಲಿನಿಗೆ ಪ್ರೀತಿ ತೋರಿಸಿದ್ದರು. ಹೇಮಾ ಹಾಗೂ ಜೀತೇಂದ್ರ ಇಬ್ಬರೂ ಮದುವೆ ಆಗಬೇಕಿತ್ತು. ಆದರೆ, ಹೇಮಾ ಅವರು ಧರ್ಮೆಂದ್ರ ಜೊತೆ ಪ್ರಿತಿಯಲ್ಲಿ ಬಿದ್ದರು. ಅವರನ್ನೇ ವರಿಸಿದರು
ಜೀತೇಂದ್ರ ಹಾಗೂ ಹೇಮಾ ಮಾಲಿನಿ ಕುಟುಂಬದಲ್ಲಿ ಮದುವೆಗೆ ಸಾಕಷ್ಟು ಒತ್ತಡಗಳು ಇದ್ದವು. ಈ ಸಂದರ್ಭದಲ್ಲಿ ಹೇಮಾ ಮಾಲಿನಿ ಅವರು ಧರ್ಮೇಂದ್ರ ಅವರ ಜೊತೆ ಸಂಬಂಧ ಬೆಳೆಸಿಕೊಂಡಿದ್ದರು ಎನ್ನಲಾಗಿದೆ. ಹೇಮಾ ಪಾಲಕರಾದ ಜಯಾ ಚಕ್ರವರ್ತಿ ಹಾಗೂ ರಾಮಾಜುನಮ್ ಚಕ್ರವರ್ತಿ ಅವರು ಇದನ್ನು ವಿರೋಧಿಸಿದ್ದರು. ಏಕೆಂದರೆ ಹೇಮಾ ಮಾಲಿನಿಗೆ ಆಗಲೇ ಒಂದು ಮದುವೆ ಆಗಿತ್ತು.
ಜಯಾ ಅವರು ಹೇಮಾ ಬಗ್ಗೆ ಚಿಂತೆಗೆ ಒಳಗಾಗಿದ್ದರು. 1974ರಲ್ಲಿ ಹೇಮಾ ಮಾಲಿನಿ ಕುಟುಂಬದವರು ಜಿತೇಂದ್ರ ಅವರನ್ನು ಭೇಟಿ ಮಾಡುವ ಒತ್ತಾಯ ಮಾಡಿದ್ದರು. ಆದರೆ, ಜಿತೇಂದ್ರ ಅವರಿಗೆ ಮದುವೆ ಆಗುವ ಯಾವುದೇ ಆಲೋಚನೆ ಇರಲಿಲ್ಲ. ‘ನಾನು ಹೇಮಾನ ಮದುವೆ ಆಗಲ್ಲ. ನನಗೆ ಅವಳ ಮೇಲೆ ಪ್ರೀತಿ ಇಲ್ಲ. ಅವಳೂ ನನ್ನನ್ನು ಪ್ರೀತಿಸುತ್ತಿಲ್ಲ. ನನ್ನ ಕುಟುಂಬಕ್ಕೆ ಬೇಕಿದೆ. ಹಾಗಾಗಿ ನಾನು ಮದುವೆ ಆಗುತ್ತೇನೆ. ಅವಳು ಒಳ್ಳೆಯ ಹುಡುಗಿ’ ಎಂದಿದ್ದರು ಅವರು.
ಇದನ್ನೂ ಓದಿ:‘100 ಗ್ರಾಂ ತೂಕವೂ ಮುಖ್ಯ, ಮಹಿಳೆಯರಿಗೆ ಇದು ಪಾಠ’ ಎಂದು ಟ್ರೋಲ್ ಆದ ಹೇಮಾ ಮಾಲಿನಿ
ಮದುವೆ ಮಾತುಕತೆಗೆ ಹೇಮಾ ಕುಟುಂಬ ಚೆನ್ನೈಗೆ ತೆರಳಿತ್ತು. ಸುದ್ದಿ ಸಾರ್ವಜನಿಕವಾಗಿ ಲೀಕ್ ಆಯಿತು. ಮದುವೆ ವಿಚಾರ ತಿಳಿದು ಧರ್ಮೇಂದ್ರ ಕೂಡ ತೆರಳಿದರು. ಹೇಮಾ ತಂದೆ ಅವರು ಧರ್ಮೇಂದ್ರ ಬಳಿ ಮಾತನಾಡಿದ್ದರು. ‘ನನ್ನ ಮಗಳನ್ನು ಯಾಕೆ ಬಿಡಬಾರದು? ನೀವು ವಿವಾಹಿತ ವ್ಯಕ್ತಿ; ನೀವು ಅವಳನ್ನು ಮದುವೆಯಾಗಲು ಸಾಧ್ಯವಿಲ್ಲ’ ಎಂದಿದ್ದರು. ಆದರೆ, ಧರ್ಮೇಂದ್ರ ಒಪ್ಪಲಿಲ್ಲ. ಆ ಬಳಿಕ ಜಿತೇಂದ್ರ ಕುಮಾರ್ ಕುಟುಂಬ ಅಲ್ಲಿಂದ ನಡೆಯಿತು. ಅಂದು ಇವರ ಮದುವೆ ನಡೆಯಲಿಲ್ಲ. ಇವರು 1980ರಂದು ಮದುವೆ ಆದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ