ನಟಿ ಐಶ್ವರ್ಯಾ ರೈ ಅವರು ಪ್ಯಾರಿಸ್ ಫ್ಯಾಷನ್ ವೀಕ್ಗೆ ತೆರಳಿದ್ದಾರೆ. ಅವರ ಜೊತೆ ಮಗಳು ಕೂಡ ಕಾಣಿಸಿಕೊಂಡಿದ್ದಾರೆ. ಲೋರಿಯಾಲ್ ಪ್ಯಾರಿಸ್ ಫ್ಯಾಷನ್ ವೀಕ್ನಲ್ಲಿ ಅವರು ಗಮನ ಸೆಳೆಯಲಿದ್ದಾರೆ. ಐಶ್ವರ್ಯಾ ಹಾಗೂ ಆರಾಧ್ಯಾ ಒಟ್ಟಾಗಿ ಸಾಗುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಈ ವಿಡಿಯೋ ಮೂಲಕ ಅವರು ಗಮನ ಸೆಳೆದಿದ್ದಾರೆ. ಈ ವಿಡಿಯೋ ಮೂಲಕ ಅವರು ವಿಚ್ಛೇದನದ ವಿಚಾರಕ್ಕೆ ಬ್ರೇಕ್ ಹಾಕಿದ್ದಾರೆ.
ಐಶ್ವರ್ಯಾ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಈ ಮೊದಲಿನಿಂದಲೂ ಇದೆ. ಈ ವಿಚಾರ ಅನೇಕರಿಗೆ ಶಾಕಿಂಗ್ ಎನಿಸಿದೆ. ಈ ಬಗ್ಗೆ ಅನೇಕ ವದಂತಿಗಳು ಹುಟ್ಟಿಕೊಂಡಿವೆ. ಆದರೆ, ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕಿಲ್ಲ. ಈ ಬಗ್ಗೆ ಅವರು ಮಾತನಾಡುವ ಗೋಜಿಗೆ ಹೋಗಿಲ್ಲ. ಹೀಗಿರುವಾಗಲೇ ಇತ್ತೀಚೆಗೆ ಐಶ್ವರ್ಯಾ ಅವರು ವೆಡ್ಡಿಂಗ್ ರಿಂಗ್ನ ತೆಗೆದಿಟ್ಟು ಓಡಾಡಿದ್ದ ವಿಡಿಯೋ ವೈರಲ್ ಆಗಿತ್ತು. ಆದರೆ, ಈಗ ಅವರು ಮತ್ತೆ ಉಂಗುರ ಧರಿಸಿದ್ದಾರೆ.
ಹೌದು, ಐಶ್ವರ್ಯಾ ರೈ ಅವರು ವೆಡ್ಡಿಂಗ್ ರಿಂಗ್ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಮೂಲಕ ಐಶ್ವರ್ಯಾ-ಅಭಿಷೇಕ್ ಬೇರೆ ಆಗಿಲ್ಲ ಅನ್ನೋದು ಅಭಿಮಾನಿಗಳಿಗೆ ಮನವರಿಕೆ ಆದಂತೆ ಆಗಿದೆ. ಆದರೆ, ಇನ್ನಷ್ಟು ಸ್ಪಷ್ಟನೆ ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
ಈ ಮೊದಲು ಐಶ್ವರ್ಯಾ ಅವರು ‘ಸೈಮಾ 2024’ಗಾಗಿ ದುಬೈ ತೆರಳಿದ್ದರು. ಐಶ್ವರ್ಯಾಗೆ ಅತ್ಯುತ್ತಮ ನಟಿ ಪ್ರಶಸ್ತಿ (ಪೊನ್ನಿಯಿನ್ ಸೆಲ್ವನ್ 2) ಸಿಕ್ಕಿದೆ. ಆ ಬಳಿಕ ವಿಕ್ರಮ್ ಹಾಗೂ ಐಶ್ವರ್ಯಾ ಜೊತೆಯಾಗಿ ಕಾಣಿಸಿಕೊಂಡಿದ್ದರು.
ಐಶ್ವರ್ಯಾ ರೈ ಎಲ್ಲೇ ಹೋದರು ಮಗಳ ಜೊತೆ ಮಾತ್ರ ತೆರಳುತ್ತಿದ್ದಾರೆ. ಇದು ಅವರ ವಿಚ್ಛೇದನದ ಸುದ್ದಿ ಹುಟ್ಟಲು ಮೂಲ ಕಾರಣ. ಇದು ನಿಜ ಇದ್ದರೂ ಇರಬಹುದು ಎಂಬುದು ಅನೇಕರ ಊಹೆ. ಆದರೆ, ಈ ಬಗ್ಗೆ ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕ ಬಳಿಕವೇ ಎಲ್ಲವೂ ತಿಳಿಯಲಿದೆ.
ಇನ್ನು ಪ್ಯಾರಿಸ್ ಫ್ಯಾಷನ್ ವೀಕ್ ವಿಚಾರಕ್ಕೆ ಬರೋದಾದರೆ ಐಶ್ವರ್ಯಾ ಅವರು ಇದರಲ್ಲಿ ಭಾಗಿ ಆಗುತ್ತಾರೆ. ಅವರು ಕಳೆದ ವರ್ಷ ಇಲ್ಲಿಗೆ ಆಗಮಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದರು. ಐಶ್ವರ್ಯಾ ರೈ ಅವರು ‘ಪೊನ್ನಿಯಿನ್ ಸೆಲ್ವನ್ 1 ಹಾಗೂ 2’ನಲ್ಲಿ ನಟಿಸಿದ್ದರು. ಇದಾದ ಬಳಿಕ ಅವರು ಯಾವುದೇ ಪ್ರಾಜೆಕ್ಟ್ ಘೋಷಣೆ ಮಾಡಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ