Bholaa Movie Trailer: ಐಮ್ಯಾಕ್ಸ್​ 3ಡಿ ರೂಪದಲ್ಲಿ ಬರಲಿದೆ ‘ಭೋಲಾ’ ಟ್ರೇಲರ್​; ಹಿಂದಿ ಚಿತ್ರರಂಗದಲ್ಲಿ ಇದೇ ಮೊದಲು

Ajay Devgn | Bholaa Movie: ಮಾರ್ಚ್​ 6ರಂದು ಮುಂಬೈನಲ್ಲಿ ಅದ್ದೂರಿ ಇವೆಂಟ್​ ಮಾಡಿ ‘ಭೋಲಾ’ ಟ್ರೇಲರ್ ಅನಾವರಣಗೊಳಿಸಲಾಗುವುದು. ಆ ಕಾರ್ಯಕ್ರಮಕ್ಕೆ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಲಿದ್ದಾರೆ.

Bholaa Movie Trailer: ಐಮ್ಯಾಕ್ಸ್​ 3ಡಿ ರೂಪದಲ್ಲಿ ಬರಲಿದೆ ‘ಭೋಲಾ’ ಟ್ರೇಲರ್​; ಹಿಂದಿ ಚಿತ್ರರಂಗದಲ್ಲಿ ಇದೇ ಮೊದಲು
‘ಭೋಲಾ’ ಚಿತ್ರದಲ್ಲಿ ನಟಿ ಟಬು

Updated on: Mar 01, 2023 | 8:00 AM

ಅಜಯ್​ ದೇವಗನ್​ (Ajay Devgn) ನಟಿಸಿದ್ದ 5 ಸಿನಿಮಾಗಳು 2022ರಲ್ಲಿ ತೆರೆ ಕಂಡಿದ್ದವು. 2023ರಲ್ಲಿ ಅವರ ನಟನೆಯ ಮೊದಲ ಸಿನಿಮಾ ‘ಭೋಲಾ’ ಈಗ ಬಿಡುಗಡೆಗೆ ಸಜ್ಜಾಗಿದೆ. ಮಾರ್ಚ್​ 30ರಂದು ಈ ಚಿತ್ರ ತೆರೆಕಾಣಲಿದೆ. ವಿಶೇಷ ಏನೆಂದರೆ ಈ ಸಿನಿಮಾ 3ಡಿಯಲ್ಲಿ ಮೂಡಿಬರುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ‘ಭೋಲಾ’ ಚಿತ್ರದ ಟ್ರೇಲರ್​ (Bholaa Movie Trailer) ಅನಾವರಣ ಆಗಲಿದೆ. ಐಮ್ಯಾಕ್ಸ್​ 3ಡಿ ರೂಪದಲ್ಲಿ ಟ್ರೇಲರ್​ ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನಿಸಿದೆ. ಈ ರೀತಿ ಮಾಡುತ್ತಿರುವ ಮೊದಲ ಹಿಂದಿ ಸಿನಿಮಾ ಎಂಬ ಖ್ಯಾತಿಗೆ ‘ಭೋಲಾ’ ಸಿನಿಮಾ (Bholaa Movie) ಪಾತ್ರವಾಗುತ್ತಿದೆ.

‘ಭೋಲಾ’ ಚಿತ್ರಕ್ಕೆ ಅಜಯ್​ ದೇವಗನ್​ ನಿರ್ದೇಶನ ಮಾಡಿದ್ದಾರೆ. ಮಾರ್ಚ್​ 6ರಂದು ಮುಂಬೈನಲ್ಲಿ ಅದ್ದೂರಿ ಇವೆಂಟ್​ ಮಾಡಿ ಟ್ರೇಲರ್ ಅನಾವರಣಗೊಳಿಸಲಾಗುವುದು. ಆ ಕಾರ್ಯಕ್ರಮಕ್ಕೆ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಲಿದ್ದಾರೆ. ಐಮ್ಯಾಕ್ಸ್​ 3ಡಿ ರೂಪದಲ್ಲಿ ‘ಭೋಲಾ’ ಟ್ರೇಲರ್​ ಬಿತ್ತರ ಆಗಲಿದೆ.

ಇದನ್ನೂ ಓದಿ: Bholaa: ತ್ರಿಶೂಲ ಹಿಡಿದು ಬಂದ ಅಜಯ್​ ದೇವಗನ್​; ಕೌತುಕ ಮೂಡಿಸಿದೆ ‘ಭೋಲಾ’ ಚಿತ್ರದ ಪೋಸ್ಟರ್​

ಇದನ್ನೂ ಓದಿ
ಬಾಲಿವುಡ್​ನವರೂ ಕೆಟ್ಟ ಸಿನಿಮಾ ಮಾಡ್ತಾರೆ, ನಾವ್ಯಾಕೆ ಅವರಿಗೆ ರೇಂಜ್​ ಕೊಡಬೇಕು? ಸುದೀಪ್ ನೇರ ಪ್ರಶ್ನೆ
ಬಾಲಿವುಡ್​ಗಿತ್ತು ಅಂಡರ್​​ವರ್ಲ್ಡ್​​ ಸಂಪರ್ಕ; ಕರಾಳ ಸತ್ಯ ಬಿಚ್ಚಿಟ್ಟ ಖ್ಯಾತ ನಟಿ
ಬಾಲಿವುಡ್​ vs ಸೌತ್ ಎಂದರೆ ನನಗೆ ಸಿಟ್ಟೇ ಬರುತ್ತದೆ; ಅಕ್ಷಯ್ ಕುಮಾರ್ ನೇರ ನುಡಿ
ಸೌತ್​ ಚಿತ್ರಗಳ ಎದುರು ಬಾಲಿವುಡ್​ ಎಡವಿದ್ದು ಎಲ್ಲಿ? ಉತ್ತರ ಹುಡುಕಿದ ‘ಕೆಜಿಎಫ್​ 2’ ಅಧೀರ ಸಂಜಯ್​ ದತ್​

ಮಾರ್ಚ್​ 8ರಂದು ರಣಬೀರ್​ ಕಪೂರ್​ ಮತ್ತು ಶ್ರದ್ಧಾ ಕಪೂರ್​ ನಟನೆಯ ‘ತು ಜೂಟಿ ಮೈ ಮಕ್ಕಾರ್​’ ಸಿನಿಮಾ ರಿಲೀಸ್​ ಆಗಲಿದೆ. ಈ ಸಿನಿಮಾದ ಜೊತೆಯಲ್ಲಿ ‘ಭೋಲಾ’ ಚಿತ್ರದ ಟ್ರೇಲರ್​ ಕೂಡ ಬಿತ್ತರ ಆಗಲಿದೆ. ಅಂದಹಾಗೆ ಇದು ತಮಿಳಿನ ‘ಕೈದಿ’ ಸಿನಿಮಾದ ಹಿಂದಿ ರಿಮೇಕ್​. ಮೂಲ ಕಥೆಗೆ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡು ಅಜಯ್​ ದೇವಗನ್​ ನಿರ್ದೇಶನ ಮಾಡಿ​ದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ‘ಭೋಲಾ’ ರಿಲೀಸ್​ ಡೇಟ್​ ಅನೌನ್ಸ್​; ಇದು ಸೌತ್​ ಚಿತ್ರದ ರಿಮೇಕ್​ ಅಂತ ಹೆಮ್ಮೆಯಿಂದ ಹೇಳಿದ ಅಜಯ್​ ದೇವಗನ್​

ಸದ್ಯಕ್ಕೆ ಬಾಲಿವುಡ್​ನಲ್ಲಿ ರಿಮೇಕ್​ ಸಿನಿಮಾಗಳು ಸಾಲು ಸಾಲಾಗಿ ಸೋಲುತ್ತಿವೆ. ‘ಅಲಾ ವೈಕುಂಠಪುರಮುಲೋ’ ಚಿತ್ರದ ರಿಮೇಕ್​ ಆಗಿ ಮೂಡಿಬಂದ ‘ಶೆಹಜಾದಾ’ ಚಿತ್ರ ಹೀನಾಯವಾಗಿ ಸೋತಿದೆ. ಮಲಯಾಳಂನ ‘ಡ್ರೈವಿಂಗ್​ ಲೈಸೆನ್ಸ್​’ ಸಿನಿಮಾವನ್ನು ಹಿಂದಿಯಲ್ಲಿ ‘ಸೆಲ್ಫೀ’ ಎಂದು ರಿಮೇಕ್​ ಮಾಡಲಾಯಿತು. ಅಕ್ಷಯ್​ಕುಮಾರ್​ ಮತ್ತು ಇಮ್ರಾಜ್​ ಹಷ್ಮಿ ನಟಿಸಿದ ಆ ಚಿತ್ರ ಕೂಡ ಸೋತಿತು. ‘ಭೋಲಾ’ ಕೂಡ ರಿಮೇಕ್​ ಸಿನಿಮಾ ಆದ್ದರಿಂದ ಅದರ ಬಾಕ್ಸ್​ ಆಫೀಸ್​ ಭವಿಷ್ಯದ ಬಗ್ಗೆ ಅನುಮಾನ ಮೂಡಿದೆ.

ಇದನ್ನೂ ಓದಿ: Nysa Devgan: ಬೋಲ್ಡ್​ ಬಟ್ಟೆ ಧರಿಸಿ ಟ್ರೋಲ್​ ಆದ ಅಜಯ್​ ದೇವಗನ್​-ಕಾಜೋಲ್​ ದಂಪತಿ ಮಗಳು ನಿಸಾ

2022ರಲ್ಲಿ ಅಜಯ್​ ದೇವಗನ್​ ನಟನೆಯ ‘ದೃಶ್ಯಂ 2’ ಚಿತ್ರ ತೆರೆಕಂಡಿತ್ತು. ಅದು ಕೂಡ ರಿಮೇಕ್​ ಆಗಿದ್ದರೂ ಸಹ ಉತ್ತಮ ಕಮಾಯಿ ಮಾಡಿತು. ಈಗ ‘ಭೋಲಾ’ ಸಿನಿಮಾ 3ಡಿ ಅವತರಣಿಕೆಯಲ್ಲಿ ಬರುತ್ತಿರುವುದರಿಂದ ಜನರು ಇಷ್ಟಪಡಬಹುದು ಎಂಬ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಟಬು, ಸಂಜಯ್ ಮಿಶ್ರಾ, ಗಜರಾಜ್​ ರಾವ್​ ಮುಂತಾದವರು ನಟಿಸಿದ್ದಾರೆ. ಕನ್ನಡಿಗ ರವಿ ಬಸ್ರೂರು ಅವರು ‘ಭೋಲಾ’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿರುವುದು ವಿಶೇಷ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us