AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಾಹದ ಬಳಿಕವೂ ಖ್ಯಾತ ನಟಿ ಜೊತೆ ಸಂಬಂಧ ಹೊಂದಿದ್ದ ಅಕ್ಷಯ್ ಕುಮಾರ್?

ನಟ ಅಕ್ಷಯ್ ಕುಮಾರ್ ಮತ್ತು ಪ್ರಿಯಾಂಕಾ ಚೋಪ್ರಾ ವಿವಾಹದ ನಂತರವೂ ಸಂಬಂಧ ಹೊಂದಿದ್ದರು ಎಂಬ ವದಂತಿಗಳು ಬಾಲಿವುಡ್‌ನಲ್ಲಿ ದೊಡ್ಡ ಸಂಚಲನ ಮೂಡಿಸಿವೆ. ಟ್ವಿಂಕಲ್ ಖನ್ನಾ ಅವರಿಗೆ ಈ ಸಂಬಂಧದ ಬಗ್ಗೆ ತಿಳಿದಾಗ ಅಕ್ಷಯ್ ಅವರ ಜೀವನದಲ್ಲಿ ಬಿರುಗಾಳಿ ಎದ್ದಿತ್ತು. ನಿರ್ದೇಶಕ ಸುನಿಲ್ ದರ್ಶನ್ ಸಂದರ್ಶನವೊಂದರಲ್ಲಿ ಈ ವಿಚಾರವನ್ನು ದೃಢಪಡಿಸಿದ್ದು, ಅಕ್ಷಯ್ ಅವರ ವೃತ್ತಿಜೀವನಕ್ಕೂ ಇದು ಅಡ್ಡಿಯಾಗಿತ್ತು ಎಂದು ಹೇಳಿದ್ದಾರೆ.

ವಿವಾಹದ ಬಳಿಕವೂ ಖ್ಯಾತ ನಟಿ ಜೊತೆ ಸಂಬಂಧ ಹೊಂದಿದ್ದ ಅಕ್ಷಯ್ ಕುಮಾರ್?
ಅಕ್ಷಯ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Apr 16, 2026 | 12:40 PM

Share

ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಖಾಸಗಿ ಜೀವನದ ಕಾರಣಕ್ಕೆ ಆಗಾಗ ಸುದ್ದಿ ಆಗುತ್ತಾರೆ. ಈಗಲೂ ಸಹ, ನಟ ಅಕ್ಷಯ್ ಕುಮಾರ್ ಅವರ ಖಾಸಗಿ ಜೀವನ ಚರ್ಚೆ ಆಗುತ್ತದೆ. ಒಂದು ಕಾಲದಲ್ಲಿ ಅಕ್ಷಯ್ ಕುಮಾರ್ ಒಬ್ಬ ಪ್ರಸಿದ್ಧ ಮತ್ತು ಜನಪ್ರಿಯ ನಟಿಯನ್ನು ಪ್ರೀತಿಸುತ್ತಿದ್ದರು. ಆದರೆ ಅವರ ಪತ್ನಿ ಟ್ವಿಂಕಲ್ ಖನ್ನಾ ಅವರಿಗೆ ಅಕ್ಷಯ್ ಅವರ ಸಂಬಂಧದ ಬಗ್ಗೆ ತಿಳಿದಾಗ, ನಟನ ಜೀವನದಲ್ಲಿ ದೊಡ್ಡ ಬಿರುಗಾಳಿ ಎದ್ದಿತು. ಅಕ್ಷಯ್ ಅವರ ಸಂಬಂಧದದಲ್ಲಿ ಇದ್ದ ನಟಿ ಬೇರೆ ಯಾರೂ ಅಲ್ಲ, ನಟಿ ಪ್ರಿಯಾಂಕಾ ಚೋಪ್ರಾ.

ಪ್ರಿಯಾಂಕಾ ಮತ್ತು ಅಕ್ಷಯ್ ‘ಅಂದಾಜ್’, ‘ಐತ್ರಾಜ್’ ಮತ್ತು ‘ವಕ್ತ್: ದಿ ರೇಸ್ ಎಗೇನ್ಸ್ಟ್ ಟೈಮ್’ ನಂತಹ ಹಲವು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಈ ಜೋಡಿಯ ಜೋಡಿಯನ್ನು ಅಭಿಮಾನಿಗಳು ಕೂಡ ಇಷ್ಟಪಟ್ಟರು. ಏತನ್ಮಧ್ಯೆ, ಅವರ ಪ್ರೇಮ ಸಂಬಂಧದ ವದಂತಿಗಳು ಹಬ್ಬಿದವು. ಇದು ನಟನ ವೈಯಕ್ತಿಕ ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರಿತು.

ನಿರ್ದೇಶಕ ಸುನಿಲ್ ದರ್ಶನ್ ಅವರು ಸಂದರ್ಶನವೊಂದರಲ್ಲಿ ಅಕ್ಷಯ್ ಮತ್ತು ಪ್ರಿಯಾಂಕಾ ಅವರ ಪ್ರೇಮದ ವಿಷಯವನ್ನು ಹೇಳಿದರು. ಇದು ಮತ್ತೆ ಚರ್ಚೆಗೆ ಕಾರಣವಾಗಿಯಿತು. 1995 ರಲ್ಲಿ ಬಿಡುಗಡೆಯಾದ ‘ಬರ್ಸಾತ್’ ಚಿತ್ರದಲ್ಲಿ ನಟಿ ಟ್ವಿಂಕಲ್, ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿದ್ದರು. ಸುನಿಲ್ ದರ್ಶನ್, ಪ್ರಿಯಾಂಕಾ ಮತ್ತು ಬಾಬಿ ಅವರೊಂದಿಗೆ ‘ಬರ್ಸಾತ್’ ಎಂಬ ಶೀರ್ಷಿಕೆಯಡಿಯಲ್ಲಿ ಸಿನಿಮಾ ಮಾಡಿದರು. ಮೊದಲು ಈ ಚಿತ್ರಕ್ಕೆ ಅಕ್ಷಯ್ ಆಯ್ಕೆ ಆಗಿದ್ದರು, ಆದರೆ, ಕುಟುಂಬದಲ್ಲಿ ವಿವಾದ ಎದ್ದಿದ್ದರಿಂದ ಅವರು ಈ ಸಿನಿಮಾ ಬಿಡಬೇಕಾಯಿತು.

ಸುನಿಲ್ ದರ್ಶನ್ ಈ ಬಗ್ಗೆ ಮಾತನಾಡಿದ್ದಾರೆ. ‘ವಿವಾಹಿತ ವ್ಯಕ್ತಿಯ ಜವಾಬ್ದಾರಿ ಹೆಚ್ಚಾಗಿರುತ್ತದೆ. ಉದ್ಯಮದಲ್ಲಿ ಕೆಲಸ ಮಾಡುವ ಜನರಿಗೆ ಪರಿಸ್ಥಿತಿಯ ಅರಿವಿರುತ್ತದೆ. ಆದರೂ, ಅವರು ತಮ್ಮದೇ ಆದ ಮಿತಿಗಳನ್ನು ಮೀರುತ್ತಾರೆ ಮತ್ತು ಅದು ಅವರ ಖಾಸಗಿ ಜೀವನದ ಮೇಲೆ ಪರಿಣಾಮ ಬೀರುತ್ತದೆ’ ಎಂದು ಹೇಳಿದರು.

ಇದನ್ನೂ ಓದಿ: ‘ಭೂತ್ ಬಂಗ್ಲ’ ಅಡ್ವಾನ್ಸ್ ಬುಕ್ಕಿಂಗ್‌: ಅಕ್ಷಯ್ ಕುಮಾರ್ ಸಿನಿಮಾಗೆ 15 ಕೋಟಿ ರೂ. ಓಪನಿಂಗ್ ನಿರೀಕ್ಷೆ

‘ಪ್ರತಿಯೊಬ್ಬ ನಟನೂ ತನ್ನ ವೃತ್ತಿ ಮತ್ತು ಅವಕಾಶಗಳ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ’, ನಿಜ ಹೇಳಬೇಕೆಂದರೆ, ‘ಬರ್ಸಾತ್’ ಚಿತ್ರದ ಸಂಪೂರ್ಣ ಹಾಡನ್ನು ಅಕ್ಷಯ್ ಕುಮಾರ್ ಮತ್ತು ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಚಿತ್ರೀಕರಿಸಲಾಗಿದೆ. ಆದರೆ ಅಕ್ಷಯ್ ಚಿತ್ರವನ್ನು ನಿರಾಕರಿಸಿದ ನಂತರ, ಹಾಡನ್ನು ಮತ್ತೆ ಬಾಬಿ ಮತ್ತು ಪ್ರಿಯಾಂಕಾ ಅವರೊಂದಿಗೆ ಚಿತ್ರೀಕರಿಸಲಾಗಿತ್ತು’ ಎಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us