ಅಕ್ಷಯ್​ ಕುಮಾರ್​ಗೆ ಯಾವುದೇ ಧರ್ಮದ ಮೇಲೆ ನಂಬಿಕೆ ಇಲ್ಲ; ಹಾಗಾದ್ರೆ ಅವರ ನಿಲುವು ಏನು?

|

Updated on: Sep 09, 2023 | 8:14 AM

‘ಸೂರ್ಯವಂಶಿ’ ಸಿನಿಮಾದ ಪ್ರಚಾರದ ವೇಳೆ ಅಕ್ಷಯ್​ ಕುಮಾರ್​ ಅವರಿಗೆ ಧರ್ಮದ ಬಗ್ಗೆ ಪ್ರಶ್ನೆ ಎದುರಾಗಿತ್ತು. ‘ಈ ಸಿನಿಮಾ ಯಾವುದೇ ನಿರ್ದಿಷ್ಟ ಧರ್ಮದ ಬಗ್ಗೆ ತಾರತಮ್ಯ ಮಾಡುವ ರೀತಿಯಲ್ಲಿ ಇದೆಯಾ’ ಎಂದು ಕೇಳಲಾಗಿತ್ತು. ಅದಕ್ಕೆ ಉತ್ತರಿಸಿದ್ದ ಅಕ್ಷಯ್​ ಕುಮಾರ್​ ಅವರು ತಮ್ಮ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಿದ್ದರು.

ಅಕ್ಷಯ್​ ಕುಮಾರ್​ಗೆ ಯಾವುದೇ ಧರ್ಮದ ಮೇಲೆ ನಂಬಿಕೆ ಇಲ್ಲ; ಹಾಗಾದ್ರೆ ಅವರ ನಿಲುವು ಏನು?
ಅಕ್ಷಯ್​ ಕುಮಾರ್​
Follow us on

ನಟ ಅಕ್ಷಯ್​ ಕುಮಾರ್​ (Akshay Kumar) ಅವರು ಬಾಲಿವುಡ್​ನಲ್ಲಿ ಬಹುಬೇಡಿಕೆಯ ಹೀರೋ. ಇತ್ತೀಚಿನ ವರ್ಷಗಳಲ್ಲಿ ಅವರಿಗೆ ನಿರೀಕ್ಷಿತ ಪ್ರಮಾಣದ ಯಶಸ್ಸ ಸಿಕ್ಕಿರಲಿಲ್ಲ. ಈ ವರ್ಷ ಬಿಡುಗಡೆ ಆದ ‘ಒಎಂಜಿ 2’ ಸಿನಿಮಾ ಉತ್ತಮವಾಗಿ ಕಲೆಕ್ಷನ್​ ಮಾಡಿದೆ. ಆದರೆ ಆ ಸಿನಿಮಾದಲ್ಲಿ ಅಕ್ಷಯ್​ ಕುಮಾರ್ ಅವರದ್ದು ಮುಖ್ಯಪಾತ್ರವಲ್ಲ. ಮುಂಬರುವ ಸಿನಿಮಾಗಳಲ್ಲಾದರೂ ಅವರು ದೊಡ್ಡ ಯಶಸ್ಸು ಕಾಣಲಿ ಎಂದು ಫ್ಯಾನ್ಸ್​ ಹಾರೈಸುತ್ತಿದ್ದಾರೆ. ಅಂದಹಾಗೆ, ಇಂದು (ಸೆಪ್ಟೆಂಬರ್​ 9) ಅಕ್ಷಯ್​ ಕುಮಾರ್​ ಅವರಿಗೆ ಜನ್ಮದಿನದ (Akshay Kumar Birthday) ಸಂಭ್ರಮ. ಸೋಶಿಯಲ್​ ಮೀಡಿಯಾದಲ್ಲಿ ಅವರಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ. ಇದರ ಜೊತೆಗೆ ಧರ್ಮದ (Religion) ಬಗ್ಗೆ ಅಕ್ಷಯ್​ ಕುಮಾರ್​ ಹೇಳಿದ್ದ ಒಂದು ಮಾತನ್ನು ನೆನಪಿಸಿಕೊಳ್ಳಲಾಗಿದೆ. ಈ ಕುರಿತು ಚರ್ಚೆ ಆಗುತ್ತಿದೆ.

2021ರಲ್ಲಿ ಅಕ್ಷಯ್​ ಕುಮಾರ್​ ನಟನೆಯ ‘ಸೂರ್ಯವಂಶಿ’ ಸಿನಿಮಾ ಬಿಡುಗಡೆ ಆಗಿತ್ತು. ಆ ಚಿತ್ರದ ಪ್ರಚಾರದ ವೇಳೆ ಅವರಿಗೆ ಧರ್ಮದ ಬಗ್ಗೆ ಪ್ರಶ್ನೆ ಎದುರಾಗಿತ್ತು. ‘ಈ ಸಿನಿಮಾ ಯಾವುದೇ ನಿರ್ದಿಷ್ಟ ಧರ್ಮದ ಬಗ್ಗೆ ತಾರತಮ್ಯ ಮಾಡುವ ರೀತಿಯಲ್ಲಿ ಇದೆಯಾ’ ಎಂದು ಕೇಳಲಾಯಿತು. ಅದಕ್ಕೆ ಉತ್ತರಿಸಿದ್ದ ಅಕ್ಷಯ್​ ಕುಮಾರ್​ ಅವರು ತಮ್ಮ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಿದ್ದರು. ಆಗ ಅವರು ನೀಡಿದ್ದ ಹೇಳಿಕೆಯನ್ನು ಅಭಿಮಾನಿಗಳು ಬೇರೆ ಬೇರೆ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಾರೆ.

ಇದನ್ನೂ ಓದಿ: ಅಕ್ಷಯ್​ ಕುಮಾರ್​ಗಿಂತ ಪಂಕಜ್​ ತ್ರಿಪಾಠಿಗೆ ಹೆಚ್ಚು ಸಂಭಾವನೆ; ‘ಒಎಂಜಿ 2’ ಚಿತ್ರದ ಒಟ್ಟು ಬಜೆಟ್​ ಎಷ್ಟು?

‘ನನಗೆ ಯಾವುದೇ ಧರ್ಮದಲ್ಲಿ ನಂಬಿಕೆ ಇಲ್ಲ. ಭಾರತೀಯನಾಗಿ ಇರುವುದರಲ್ಲಿ ಮಾತ್ರ ನನ್ನ ನಂಬಿಕೆ. ಸಿನಿಮಾದಲ್ಲೂ ಅದನ್ನೇ ತೋರಿಸುತ್ತೇವೆ. ಧರ್ಮದ ಆಧಾರದಲ್ಲಿ ನಾವು ಏನನ್ನೂ ನೋಡಿಲ್ಲ. ಭಾರತೀಯ ಎಂಬ ಪರಿಕಲ್ಪನೆ ಈ ಸಿನಿಮಾದಲ್ಲಿ ಇದೆಯೇ ಹೊರತು ಹಿಂದೂ, ಮುಸ್ಲಿಂ, ಪಾರ್ಸಿ ಎಂಬುದಲ್ಲ’ ಎಂದು ಅಕ್ಷಯ್​ ಕುಮಾರ್​ ಅವರು ಹೇಳಿದ್ದರು. ಸಿನಿಮಾದಲ್ಲಿ ಯಾವುದೇ ಒಂದು ಧರ್ಮದ ವ್ಯಕ್ತಿಯನ್ನು ವಿಲನ್​ ರೀತಿ ತೋರಿಸಿರುವುದು ಪ್ರಜ್ಞಾಪೂರ್ವಕ ನಿರ್ಧಾರ ಅಲ್ಲ ಎಂದು ಅವರು ತಿಳಿಸಿದ್ದರು.

ಇದನ್ನೂ ಓದಿ: ಚಂದ್ರನ ಮೇಲೆ ಹೆಜ್ಜೆಯಿಟ್ಟ ಇಸ್ರೋ ಸಾಧನೆಗೆ ಸೆಲೆಬ್ರಿಟಿಗಳ ಅಭಿನಂದನೆ; ಯಶ್​, ಅಕ್ಷಯ್​ ಕುಮಾರ್​ ಹೇಳಿದ್ದೇನು?

‘ನಾವು ನೆಗೆಟಿವ್​ ಮತ್ತು ಪಾಸಿಟಿವ್​ ಪಾತ್ರಗಳನ್ನು ಹೊಂದಿರುವ ಸಿನಿಮಾವನ್ನು ಮಾಡುತ್ತೇವೆ. ನಾನು ಒಂದು ಪಾತ್ರ ಮಾಡುತ್ತಿರುತ್ತೇನೆ ಅಷ್ಟೇ. ಎಲ್ಲ ಸಿನಿಮಾದಲ್ಲಿ ಒಳ್ಳೆಯ ಮತ್ತು ಕೆಟ್ಟ ಪಾತ್ರಗಳು ಇರುತ್ತವೆ. ಯಾವುದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬ ತಿಳಿವಳಿಕೆ ಪ್ರೇಕ್ಷಕರಿಗೆ ಇದೆ’ ಎಂದು ಅಕ್ಷಯ್​ ಕುಮಾರ್​ ಹೇಳಿದ್ದರು. ಹಲವು ಸಿನಿಮಾಗಳಲ್ಲಿ ಅವರು ಈಗ ಬ್ಯುಸಿ ಆಗಿದ್ದಾರೆ. ಈ ಮೊದಲು ಅವರಿಗೆ ಕೆನಡಾದ ಪೌರತ್ವ ಇತ್ತು. ಈ ವರ್ಷ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಅವರು ಭಾರತದ ಪೌರತ್ವ ಪಡೆದುಕೊಂಡರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.