ಅಕ್ಷಯ್ ಕುಮಾರ್ ಅವರು ಬಾಲಿವುಡ್ನ ಬೇಡಿಕೆಯ ಹೀರೋ. ಅವರ ಕೈಯಲ್ಲಿ ಹಲವು ಸಿನಿಮಾಗಳು ಇವೆ. ಅವರು ಆ್ಯಕ್ಷನ್ ಸಿನಿಮಾಗಳ ಮೂಲಕ ಫೇಮಸ್ ಆದವರು. ನಂತರ ಕಾಮಿಡಿ ಸಿನಿಮಾ ಮಾಡಿದರು. ಈಗ ಅವರು ಮಾಡ್ತಿರೋ ಸಿನಿಮಾಗಳು ಭಿನ್ನವಾಗಿವೆ. ಸಮಾಜಕ್ಕೆ ಸಂದೇಶ ಸಾರುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಇಂದು (ಸೆಪ್ಟೆಂಬರ್ 9) ಹುಟ್ಟುಹಬ್ಬ. ಅವರಿಗೆ ಈಗ 57 ವರ್ಷ ವಯಸ್ಸು. ಹಾಗಾದರೆ ಅಕ್ಷಯ್ ಕುಮಾರ್ ಅವರು ಮೂರು ದಶಕಗಳಿಂದ ಸಿನಿಮಾ ರಂಗದಲ್ಲಿ ಗಳಿಸಿದ್ದು ಎಷ್ಟು? ಆ ಬಗ್ಗೆ ಇಲ್ಲಿದೆ ವಿವರ.
ಅಕ್ಷಯ್ ಕುಮಾರ್ ಅವರು ಹಲವು ಬಾಕ್ಸ್ ಆಫೀಸ್ ಹಿಟ್ ಕೊಟ್ಟಿದ್ದಾರೆ. ಆದರೆ, ಇತ್ತೀಚೆಗೆ ಅವರ ಪರಿಸ್ಥಿತಿ ಹಾಗಿಲ್ಲ. ಸಾಲು ಸಾಲು ಫ್ಲಾಪ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಕೆಲವು ವರದಿಗಳ ಪ್ರಕಾರ ಅವರ ಆಸ್ತಿ 2500 ಕೋಟಿ ರೂಪಾಯಿ. ಪ್ರತಿ ಬಾರಿ ಅವರು ಅತಿ ಹೆಚ್ಚು ತೆರಿಗೆ ಪಾವತಿಸಿದ ಹೀರೋಗಳ ಸಾಲಿನಲ್ಲಿ ಇರುತ್ತಿದ್ದರು. ಆದರೆ, ಈ ಬಾರಿ ಅವರ ಸ್ಥಾನ ಶಾರುಖ್ ಪಾಲಾಗಿದೆ.
ಅಕ್ಷಯ್ ಕುಮಾರ್ ಅವರು ಪ್ರತಿ ಚಿತ್ರಕ್ಕೆ ನಿಗದಿತ ಸಂಭಾವನೆ ಪಡೆಯಲ್ಲ. ಅವರು 60 ಕೋಟಿ ರೂಪಾಯಿಯಿಂದ 140 ಕೋಟಿ ರೂಪಾಯಿವರೆಗೂ ಸಂಭಾವನೆ ಪಡೆದ ಉದಾಹರಣೆ ಇದೆ. ಇತ್ತೀಚೆಗೆ ರಿಲೀಸ್ ಆದ ‘ಖೇಲ್ ಖೇಲ್ ಮೇ’ ಸಿನಿಮಾಗೆ ಅವರು 60 ಕೋಟಿ ರೂಪಾಯಿ ಪಡೆದುಕೊಂಡಿದ್ದರಂತೆ. ಅವರು ಹಲವು ಬ್ರ್ಯಾಂಡ್ ಪ್ರಚಾರ ಮಾಡುತ್ತಾರೆ. ಇದಕ್ಕಾಗಿ 6 ಕೋಟಿ ರೂಪಾಯಿ ಪಡೆಯುತ್ತಾರೆ. ಈ ಮೊದಲು ಪಾನ್ ಮಸಾಲ ಜಾಹೀರಾತು ಮಾಡಿ ಅಕ್ಷಯ್ ಕುಮಾರ್ ಟೀಕೆ ಎದುರಿಸಬೇಕಾಗಿ ಬಂದಿತ್ತು.
ಅಕ್ಷಯ್ ಕುಮಾರ್ ಅವರು ಜುಹುನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ಅವರ ಪತ್ನಿ ಟ್ವಿಂಕಲ್ ಖನ್ನಾ ಹಾಗೂ ಮಕ್ಕಳ ಜೊತೆ ಇಲ್ಲಿ ವಾಸ ಮಾಡುತ್ತಾರೆ. ಇದರ ಮೌಲ್ಯ 60 ಕೋಟಿ ರೂಪಾಯಿ. ಇದರ ಜೊತೆ ಗೋವಾದಲ್ಲಿ 5 ಕೋಟಿ ರೂಪಾಯಿ ಬೆಲೆಯ ವಿಲ್ಲಾ ಹೊಂದಿದ್ದಾರೆ.
ಅಕ್ಷಯ್ ಬಳಿ ಹಲವು ದುಬಾರಿ ಕಾರುಗಳು ಇವೆ. 10 ಕೋಟಿ ಬೆಲೆಯ ರೋಲ್ಸ್ ರಾಯ್ಸ್ ಪಾಂಥಮ್, 3 ಕೋಟಿ ಬೆಲೆಯ ಬೆಂಟ್ಲಿ ಕಾರು ಇವರ ಬಳಿ ಇವೆ. ಇದರ ಜೊತೆಗೆ ಮರ್ಸೀಡಿಸ್ ಬೆಂಜ್, ಪೋರ್ಷಾ ಸೇರಿ ಅನೇಕ ಕಾರುಗಳು ಇವೆ. 260 ಕೋಟಿ ರೂಪಾಯಿ ಮೌಲ್ಯದ ಪ್ರೈವೆಟ್ ಜೆಟ್ ಕೂಡ ಅಕ್ಷಯ್ ಒಡೆತನದಲ್ಲಿ ಇದೆ.
ಇದನ್ನೂ ಓದಿ: ಹೀರೋ ಆಗಿ ಸಿಗುತ್ತಿಲ್ಲ ಯಶಸ್ಸು; ವಿಲನ್ ಪಾತ್ರ ಒಪ್ಪಿಕೊಂಡ ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್ ನಟನೆಯ ‘ಬಡೇ ಮಿಯಾ ಚೋಟೆ ಮಿಯಾ’ ಸೇರಿ ಮೂರು ಸಿನಿಮಾಗಳು ಈ ವರ್ಷ ರಿಲೀಸ್ ಆಗಿ ಸೋತಿವೆ. ಸದ್ಯ ಅವರು ‘ಸ್ಕೈ ಫೋರ್ಸ್’, ‘ವೆಲ್ಕಮ್ ಟು ದಿ ಜಂಗಲ್, ‘ಹೇರಾ ಫೇರಿ 3’. ಸಿಂಗಂ ಅಗೇನ್, ‘ಜಾಲಿ ಎಲ್ಎಲ್ಬಿ 3’ ಸೇರಿ ಹಲವು ಪ್ರಾಜೆಕ್ಟ್ಗಳು ಬ್ಯುಸಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.