ಅಕ್ಷಯ್ ಕುಮಾರ್ ಸೋಲಿನ ಸಾಲಿಗೆ ಮತ್ತೊಂದು ಸಿನಿಮಾ; ಹೊಸ ಚಿತ್ರದ ಗಳಿಕೆ 2 ಕೋಟಿ ರೂ.!

|

Updated on: Jul 13, 2024 | 12:57 PM

ಅಕ್ಷಯ್ ಕುಮಾರ್ ಅವರಿಗೆ ಇತ್ತೀಚೆಗೆ ಒಂದಾದಮೇಲೆ ಒಂದರಂತೆ ಸೋಲುಗಳೇ ಎದುರಾಗುತ್ತಿವೆ. ಅವರು 50-100 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಆದರೆ, ಸಿನಿಮಾಗಳು ಮಾತ್ರ ಅಷ್ಟು ದೊಡ್ಡ ಮೊತ್ತದ ಗಳಿಕೆ ಮಾಡುವುದಿಲ್ಲ. ಈಗ ಮತ್ತೆ ಅದು ಮರುಕಳಿಸಿದೆ.

ಅಕ್ಷಯ್ ಕುಮಾರ್ ಸೋಲಿನ ಸಾಲಿಗೆ ಮತ್ತೊಂದು ಸಿನಿಮಾ; ಹೊಸ ಚಿತ್ರದ ಗಳಿಕೆ 2 ಕೋಟಿ ರೂ.!
ಅಕ್ಷಯ್
Follow us on

ಸುಧಾ ಕೊಂಗರಾ ಅವರು ನಿರ್ದೇಶನ ಮಾಡಿದ ‘ಸೂರರೈ ಪೊಟ್ರು’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಮೆಚ್ಚುಗೆ ಪಡೆಯಿತು. ಈ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಕೂಡ ಸಿಕ್ಕಿತ್ತು. ಈಗ ಈ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಲಾಗಿದೆ. ‘ಸರ್ಫಿರಾ’ ಹೆಸರಲ್ಲಿ ಈ ಚಿತ್ರವನ್ನು ರಿಮೇಕ್ ಮಾಡಲಾಗಿದ್ದು, ಅಕ್ಷಯ್ ಕುಮಾರ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮೊದಲ ದಿನ ಗಳಿಸಿದ್ದು ಕೇವಲ 2.40 ಕೋಟಿ ರೂಪಾಯಿ. ಇದರಿಂದ ಚಿತ್ರಕ್ಕೆ ಭರ್ಜರಿ ಹಿನ್ನಡೆ ಆಗಿದೆ.

ಅಕ್ಷಯ್ ಕುಮಾರ್ ಅವರಿಗೆ ಇತ್ತೀಚೆಗೆ ಒಂದಾದಮೇಲೆ ಒಂದರಂತೆ ಸೋಲುಗಳೇ ಎದುರಾಗುತ್ತಿವೆ. ಅವರು 50-100 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಆದರೆ, ಸಿನಿಮಾಗಳು ಮಾತ್ರ ಅಷ್ಟು ದೊಡ್ಡ ಮೊತ್ತದ ಗಳಿಕೆ ಮಾಡುವುದಿಲ್ಲ. ಈಗ ಮತ್ತೆ ಅದು ಮರುಕಳಿಸಿದೆ. ಈ ವರ್ಷ ರಿಲೀಸ್ ಆಗಿರುವ ಅಕ್ಷಯ್ ನಟನೆಯ ಎರಡನೇ ಸಿನಿಮಾ ಇದು. ಎರಡೂ ಚಿತ್ರಗಳು ಸೋಲು ಕಂಡಿವೆ.

ಅಕ್ಷಯ್ ಕುಮಾರ್ ಅವರ ಸಿನಿಮಾಗಳು ಈ ಮೊದಲು ಫಸ್ಟ್ ಡೇ 15-30 ಕೋಟಿ ರೂಪಾಯಿ ಮಿನಿಮಮ್ ಗಳಿಕೆ ಮಾಡುತ್ತಿದ್ದವು. ಹೀಗಾಗಿ, ಅಕ್ಷಯ್ ಸಿನಿಮಾಗೆ ಬಂಡವಾಳ ಹೂಡಿದ ನಿರ್ಮಾಪಕ ಸೇಫ್ ಎನ್ನುವ ನಂಬಿಕೆ ಈ ಮೊದಲು ಇತ್ತು. ಆದರೆ, ಈಗ ಎಲ್ಲವೂ ಸುಳ್ಳಾಗುತ್ತಿದೆ.

‘ಸೂರರೈ ಪೋಟ್ರು’ ತಮಿಳಿನಲ್ಲಿ ಮೆಚ್ಚುಗೆ ಪಡೆಯಿತು ನಿಜ. ಹಾಗಂತ ಇದನ್ನು ಹಿಂದಿಗೆ ರಿಮೇಕ್ ಮಾಡಿದರೆ ಯಾರೂ ಕೂಡ ಅದನ್ನು ನೋಡುವುದಿಲ್ಲ. ಇದು ಅಕ್ಷಯ್ ಸಿನಿಮಾ ಸೋಲಲು ಮೂಲಕ ಕಾರಣ. ಅಕ್ಷಯ್ ಕುಮಾರ್ ನಟನೆಯ ಕೊನೆಯ 10 ಸಿನಿಮಾಗಳನ್ನು ತೆಗೆದುಕೊಂಡರೆ ಈ ಪೈಕಿ 8 ಸಿನಿಮಾಗಳು ಮಾತ್ರ ಹಿಟ್ ಆಗಿವೆ. ಈ ಸಾಲಿಗೆ ಮತ್ತೊಂದು ಸಿನಿಮಾ ಸೇರ್ಪಡೆ ಆಗುತ್ತಿದೆ.

ಇದನ್ನೂ ಓದಿ: ಅಕ್ಷಯ್ ಕುಮಾರ್​ಗೆ ಕೊವಿಡ್ ಪಾಸಿಟಿವ್; ಅಂಬಾನಿ ಮನೆ ಮದುವೆ ಮಿಸ್

ಸರ್ಫಿರಾ ಬಳಿಕ ಅಕ್ಷಯ್ ಕುಮಾರ್ ಅವರು ‘ಖೇಲ್ ಖೇಲ್ ಮೇ’, ‘ಸ್ಕೈ ಫೋರ್ಸ್’, ‘ಸಿಂಗಂ ಅಗೇನ್’, ‘ಜಾಲಿ ಎಲ್​ಎಲ್​ಬಿ 3’ ಮೊದಲಾದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.