ಅಂಬಾನಿ ಮನೆ ಮದುವೆಯಲ್ಲಿ ಕುಟುಂಬದಿಂದ ಅಂತರ ಕಾಯ್ದುಕೊಂಡ ಐಶ್ವರ್ಯಾ; ಪ್ರತ್ಯೇಕವಾಗಿ ಪೋಸ್ ಕೊಟ್ಟ ನಟಿ  

ಸೆಲೆಬ್ರಿಟಿಗಳು ತಮ್ಮ ಕುಟುಂಬದ ಜೊತೆ ಅನಂತ್ ಹಾಗೂ ರಾಧಿಕಾ ಮದುವೆಗೆ ಹಾಜರಿ ಹಾಕಿದ್ದಾರೆ. ಆದರೆ, ಐಶ್ವರ್ಯಾ ರೈ ಮಾತ್ರ ಬಚ್ಚನ್ ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದಾರೆ! ಐಶ್ವರ್ಯಾ ರೈ ಬಚ್ಚನ್ ಹಾಗೂ ಮಗಳು ಆರಾಧ್ಯಾ ಪ್ರತ್ಯೇಕವಾಗಿ ಮದುವೆಗೆ ಆಗಮಿಸಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಅಂಬಾನಿ ಮನೆ ಮದುವೆಯಲ್ಲಿ ಕುಟುಂಬದಿಂದ ಅಂತರ ಕಾಯ್ದುಕೊಂಡ ಐಶ್ವರ್ಯಾ; ಪ್ರತ್ಯೇಕವಾಗಿ ಪೋಸ್ ಕೊಟ್ಟ ನಟಿ  
ಅಂಬಾನಿ ಮನೆ ಮದುವೆಯಲ್ಲಿ ಕುಟುಂಬದಿಂದ ಅಂತರ ಕಾಯ್ದುಕೊಂಡ ಐಶ್ವರ್ಯಾ
Follow us
ರಾಜೇಶ್ ದುಗ್ಗುಮನೆ
|

Updated on:Jul 13, 2024 | 10:47 AM

ರಿಲೈನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮಗ ಅನಂತ್ ಅಂಬಾನಿ ಹಾಗೂ ಉದ್ಯಮಿಯ ಮಗಳು ರಾಧಿಕಾ ಮರ್ಚೆಂಟ್ ಮದುವೆ ಅದ್ದೂರಿಯಾಗಿ ಮುಂಬೈನಲ್ಲಿ ನೆರವೇರಿದೆ. ಅನೇಕ ಸೆಲೆಬ್ರಿಟಿಗಳು ಈ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. WWE ಆಟಗಾರ ಜಾನ್ ಸಿನಾ, ಕಿಮ್ ಕರ್ದಾಶಿಯಾ ಸೇರಿ ಅನೇಕರು ಮದುವೆಯಲ್ಲಿ ಭಾಗಿ ಆಗಿದ್ದಾರೆ. ಇಡೀ ಬಾಲಿವುಡ್ ಮದುವೆಗೆ ಹಾಜರಿ ಹಾಕಿದೆ. ಈ ಮದುವೆಯಿಂದ ಮತ್ತೆ ವಿಚ್ಛೇದನದ ವಿಚಾರ ಸದ್ದು ಮಾಡಿದೆ.

ಎಲ್ಲ ಸೆಲೆಬ್ರಿಟಿಗಳು ತಮ್ಮ ಕುಟುಂಬದ ಜೊತೆ ಮದುವೆಗೆ ಹಾಜರಿ ಹಾಕಿದ್ದಾರೆ. ಆದರೆ, ಐಶ್ವರ್ಯಾ ರೈ ಮಾತ್ರ ಬಚ್ಚನ್ ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದಾರೆ! ಹೌದು, ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಅಭಿಷೇಕ್ ಹಾಗೂ ಇತರರು ಒಟ್ಟಾಗಿ ಮದುವೆಗೆ ಆಗಮಿಸಿದ್ದಾರೆ. ಆದರೆ, ಈ ವೇಳೆ ಐಶ್ವರ್ಯಾ ಇರಲಿಲ್ಲ. ಅವರು ಯಾವುದೋ ಕಾರಣಕ್ಕೆ ಮದುವೆಗೆ ಹಾಜರಾಗುತ್ತಿಲ್ಲವೇನೋ ಎಂದು ಕೆಲವರು ಭಾವಿಸಿದರು. ಬಳಿಕ ಅವರು ಮದುವೆಗೆ ಹಾಜರಿ ಹಾಕಿದ್ದಾರೆ.

ಐಶ್ವರ್ಯಾ ರೈ ಬಚ್ಚನ್ ಹಾಗೂ ಮಗಳು ಆರಾಧ್ಯಾ ಪ್ರತ್ಯೇಕವಾಗಿ ಮದುವೆಗೆ ಆಗಮಿಸಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಐಶ್ವರ್ಯಾ ರೈಗೆ ಬಚ್ಚನ್ ಕುಟುಂಬದ ಜೊತೆ ಕಿರಿಕ್ ಇರೋದು ನಿಜ ಎಂದು ಅನೇಕರು ಮಾತನಾಡಿಕೊಂಡಿದ್ದಾರೆ. ಈ ಬಗ್ಗೆ ಬಚ್ಚನ್ ಕುಟುಂಬದವರು ಮೌನವಹಿಸಿದ್ದಾರೆ.

ಇದನ್ನೂ ಓದಿ: ಎಷ್ಟು ಕ್ಯೂಟ್ ಆಗಿ ಕಾಣ್ತಿದ್ದಾರೆ ನೋಡಿ ಐಶ್ವರ್ಯಾ ರೈ ಮಗಳು

ಐಶ್ವರ್ಯಾ ರೈ ಹಾಗೂ ಅಮಿತಾಭ್ ಬಚ್ಚನ್-ಜಯಾ ಬಚ್ಚನ್ ದಂಪತಿ ಮಧ್ಯೆ ಯಾವುದೂ ಸರಿ ಇಲ್ಲ ಎನ್ನುವ ಚರ್ಚೆ ಮೊದಲಿನಿಂದಲೂ ಇದೆ. ಆದರೆ, ಅಷ್ಟಾಗಿ ಇದನ್ನು ತೋರಿಸಿಕೊಳ್ಳುತ್ತಾ ಇರಲಿಲ್ಲ. ಇತ್ತೀಚೆಗೆ ಐಶ್ವರ್ಯಾ ಹಾಗೂ ಅಭಿಷೇಕ್ ಅವರು ವಿಚ್ಛೇದನ ಪಡೆದುಕೊಳ್ಳುತ್ತಾರೆ ಎನ್ನುವ ಸುದ್ದಿ ಕೂಡ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:28 am, Sat, 13 July 24

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ