ಅನುಷ್ಕಾ ಹಾದಿ ತುಳಿದ ಆಲಿಯಾ ಭಟ್​; ಆಪ್ತರಿಗೂ ಸಿಗಲ್ಲ ಮಗುವಿನ ಫೋಟೋ

| Updated By: ರಾಜೇಶ್ ದುಗ್ಗುಮನೆ

Updated on: Nov 10, 2022 | 7:34 PM

ಸಾಮಾನ್ಯವಾಗಿ ಮಗುವಿನ ವಿಚಾರದಲ್ಲಿ ಒಬ್ಬರು ಒಂದೊಂದು ರೀತಿಯ ನಿಯಮ ಪಾಲಿಸುತ್ತಾರೆ. ಕೆಲವರು ಮಗುವಿನ ಫೋಟೋ ಹಂಚಿಕೊಂಡರೆ, ಇನ್ನೂ ಕೆಲವರು ಮಗುವಿನ ಮುಖವನ್ನು ರಿವೀಲ್ ಮಾಡಲು ಇಷ್ಟಪಡುವುದಿಲ್ಲ.

ಅನುಷ್ಕಾ ಹಾದಿ ತುಳಿದ ಆಲಿಯಾ ಭಟ್​; ಆಪ್ತರಿಗೂ ಸಿಗಲ್ಲ ಮಗುವಿನ ಫೋಟೋ
ಆಲಿಯಾ-ಅನುಷ್ಕಾ
Follow us on

ಅನುಷ್ಕಾ ಶರ್ಮಾ (Anushka Sharma) ಹಾಗೂ ವಿರಾಟ್ ಕೊಹ್ಲಿ ಅವರು ಮಗಳ ವಿಚಾರದಲ್ಲಿ ತಾವೇ ಒಂದಷ್ಟು ನಿಯಮಗಳನ್ನು ಹಾಕಿಕೊಂಡಿದ್ದಾರೆ. ಮಗಳು ವಮಿಕಾ ಜನಿಸಿ ಎರಡು ವರ್ಷ ಕಳೆಯುತ್ತಾ ಬಂದರೂ ಆಕೆಯ ಮುಖವನ್ನು ಈ ಜೋಡಿ ರಿವೀಲ್ ಮಾಡಿಲ್ಲ. ಈಗ ಆಲಿಯಾ ಭಟ್ (Alia Bhatt)ರಣಬೀರ್ ಕಪೂರ್​ ದಂಪತಿ ಕೂಡ ಅನುಷ್ಕಾ ಅನುಸರಿಸುತ್ತಿರುವ ನಿಯಮವನ್ನೇ ಪಾಲಿಸಿದ್ದಾರೆ. ಮಗಳ ಮುಖವನ್ನು ರಿವೀಲ್ ಮಾಡಲು ಈ ದಂಪತಿ ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಅನೇಕರು ನಟಿಯ ಪರವಾಗಿ ಬ್ಯಾಟ್ ಬೀಸಿದ್ದಾರೆ.

ಸಾಮಾನ್ಯವಾಗಿ ಮಗುವಿನ ವಿಚಾರದಲ್ಲಿ ಒಬ್ಬರು ಒಂದೊಂದು ರೀತಿಯ ನಿಯಮ ಪಾಲಿಸುತ್ತಾರೆ. ಕೆಲವರು ಮಗುವಿನ ಫೋಟೋ ಹಂಚಿಕೊಂಡರೆ, ಇನ್ನೂ ಕೆಲವರು ಮಗುವಿನ ಮುಖವನ್ನು ರಿವೀಲ್ ಮಾಡಲು ಇಷ್ಟಪಡುವುದಿಲ್ಲ. ಆಲಿಯಾ ಹಾಗೂ ರಣಬೀರ್ ಸದ್ಯಕ್ಕಂತೂ ಮಗಳ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಆಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ ಆಲಿಯಾ ಅವರನ್ನು ನೋಡಲು ಅನೇಕರು ಬಂದಿದ್ದರು. ಆದರೆ, ಎಲ್ಲರಿಗೂ ಅವರನ್ನು ನೋಡಲು ಅವಕಾಶ ಸಿಕ್ಕಿರಲಿಲ್ಲ. ಈಗ ಈ ದಂಪತಿಗೆ ಮನೆಗೆ ಬಂದಿದ್ದು, ಇಲ್ಲಿಗೂ ಅನೇಕರು ಆಗಮಿಸುತ್ತಿದ್ದಾರೆ. ಆದರೆ, ಎಲ್ಲರಿಗೂ ಆಲಿಯಾ ಹಾಗೂ ಮಗುವನ್ನು ನೋಡಲು ಅವಕಾಶ ನೀಡುತ್ತಿಲ್ಲ ಎನ್ನಲಾಗಿದೆ. ಇದಕ್ಕೆ ಎರಡು ಕಾರಣ ಇದೆ.

ಮಗುವಿನ ಫೋಟೋವನ್ನು ಯಾರಾದರೂ ಕ್ಲಿಕ್ ಮಾಡಿಕೊಳ್ಳಬಹುದು ಎಂಬ ಭಯ ಆಲಿಯಾರನ್ನು ಕಾಡುತ್ತಿದೆ. ಆಪ್ತರು ಎನಿಸಿದವರೇ ಕೆಲವೊಮ್ಮೆ ಫೋಟೋ ಕ್ಲಿಕ್ಕಿಸಿ ವೈರಲ್ ಮಾಡಿದ ಉದಾಹರಣೆ ಇದೆ. ಹಾಗಾಗದಿರಲಿ ಅನ್ನೋದು ಈ ದಂಪತಿಯ ಉದ್ದೇಶ. ಮತ್ತೊಂದು ವಿಚಾರ ಎಂದರೆ ಬರುವ ಅತಿಥಿಗಳು ಹೊರ ಜಗತ್ತಿನ ಸಂಪರ್ಕಕ್ಕೆ ಬಂದಿರುತ್ತಾರೆ. ಅವರು ಮಗು ಹಾಗೂ ತಾಯಿಯನ್ನು ಮುಟ್ಟಿದಾಗ ಇನ್​ಫೆಕ್ಷನ್ ಆಗಬಹುದು. ಇನ್ನು, ಕೊವಿಡ್ ಭಯ ಕೊಂಚ ಮಟ್ಟಿಗೆ ಇರುವುದರಿಂದ ಈ ನಿಟ್ಟಿನಲ್ಲೂ ದಂಪತಿ ಎಚ್ಚರಿಕೆ ವಹಿಸಿದ್ದಾರೆ.

ಇದನ್ನೂ ಓದಿ: ಮಗಳು ವಮಿಕಾ ಜತೆ ಕೋಲ್ಕತ್ತ ಸುತ್ತಿದ ನಟಿ ಅನುಷ್ಕಾ ಶರ್ಮಾ; ಫೋಟೋ ವೈರಲ್

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ‘ಬ್ರಹ್ಮಾಸ್ತ್ರ’ ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರ ಸೂಪರ್ ಹಿಟ್ ಆಗಿದೆ. ಈಗ ಈ ಸಿನಿಮಾ ಒಟಿಟಿಯಲ್ಲಿ ತೆರೆಗೆ ಬಂದು ಮೆಚ್ಚುಗೆ ಪಡೆದುಕೊಂಡಿದೆ. ಹೀಗಿರುವಾಗಲೇ ದಂಪತಿ ಹೊಸ ಸದಸ್ಯಳನ್ನು ಬರಮಾಡಿಕೊಂಡಿದ್ದಾರೆ.