ನಟಿ ಆಲಿಯಾ ಭಟ್ (Alia Bhatt) ಅವರು ಸಖತ್ ಖುಷಿಯಲ್ಲಿದ್ದಾರೆ. ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇರುವ ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಈ ನಡುವೆ ಆಲಿಯಾಗೆ ವಿಪರೀತ ಕೋಪ ಬಂದಿದೆ. ಅದಕ್ಕೆ ಕಾರಣ ಆಗಿರುವುದು ಪತಿ ರಣಬೀರ್ ಕಪೂರ್ (Ranbir Kapoor) ಬಗ್ಗೆ ಕೇಳಿಬಂದ ಗಾಸಿಪ್. ಸೆಲೆಬ್ರಿಟಿಗಳು ಎಂದಮೇಲೆ ಗಾಸಿಪ್ ಸಹಜ. ಅದು ಆಲಿಯಾಗೂ ಹೊಸದಲ್ಲ. ಆದರೆ ಈ ಬಾರಿ ಅವರು ಕೊಂಚ ಸೀರಿಯಸ್ ಆಗಿದ್ದಾರೆ. ತಮ್ಮನ್ನು ಕೇವಲವಾಗಿ ನೋಡುತ್ತಿರುವ ಜನರಿಗೆ ಅವರು ಖಡಕ್ ತಿರುಗೇಟು ನೀಡಿದ್ದಾರೆ. ಆಲಿಯಾ ಭಟ್ ಗರ್ಭಿಣಿ (Alia Bhatt Pregnant) ಆಗಿರುವುದರಿಂದ ಅವರ ಸಿನಿಮಾ ಕೆಲಸಗಳು ತಡ ಆಗುತ್ತಿವೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಅದೂ ಅಲ್ಲದೇ, ಸದ್ಯ ವಿದೇಶದಲ್ಲಿ ಶೂಟಿಂಗ್ ಮಾಡುತ್ತಿರುವ ಆಲಿಯಾರನ್ನು ವಾಪಸ್ ಭಾರತಕ್ಕೆ ಕರೆತರಲು ರಣಬೀರ್ ಕಪೂರ್ ಹೋಗುತ್ತಿದ್ದಾರೆ ಎಂದು ಬರೆಯಲಾಗಿದೆ. ಇದನ್ನು ಕಂಡು ಆಲಿಯಾ ಭಟ್ ಗರಂ ಆಗಿದ್ದಾರೆ.
ತಮ್ಮ ಬಗ್ಗೆ ಹರಡಿರುವ ಇಂಥ ಗಾಸಿಪ್ನ ವರದಿಯನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಆಲಿಯಾ ಶೇರ್ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ‘ನನ್ನಿಂದ ಯಾವುದೇ ಸಿನಿಮಾದ ಕೆಲಸ ವಿಳಂಬವಾಗಿಲ್ಲ. ನಾನು ಮಹಿಳೆಯೇ ಹೊರತು ಪಾರ್ಸೆಲ್ ಅಲ್ಲ. ಹಾಗಾಗಿ ನನ್ನನ್ನು ಯಾರೂ ಪಿಕ್ ಮಾಡುವ ಅನಿವಾರ್ಯತೆ ಇಲ್ಲ. ನನಗೆ ವಿಶ್ರಾಂತಿಯ ಅವಶ್ಯಕತೆ ಇಲ್ಲ. ಆದರೆ ನಿಮಗೆ ಖಂಡಿತವಾಗಿ ವೈದ್ಯರ ಸರ್ಟಿಫಿಕೇಟ್ ಬೇಕು’ ಎಂದು ಆಲಿಯಾ ಭಟ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
‘ನಾವಿನ್ನೂ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಇದು 2022. ನಾವು ಹಳೇ ಕಾಲದ ಆಲೋಚನೆಯಿಂದ ಹೊರಬರಬಹುದೇ?’ ಎಂದು ಆಲಿಯಾ ಭಟ್ ಅವರು ಗುಡುಗಿದ್ದಾರೆ. ಇದರ ಜೊತೆಗೆ, ತಮಗೆ ಅಭಿನಂದನೆ ತಿಳಿಸಿದ ಎಲ್ಲರಿಗೂ ಅವರು ಧನ್ಯವಾದ ಅರ್ಪಿಸಿದ್ದಾರೆ. ಸದ್ಯ ಆಲಿಯಾ ಭಟ್ ಅವರು ಲಂಡನ್ನಲ್ಲಿ ಇದ್ದಾರೆ. ತಮ್ಮ ಮೊದಲ ಹಾಲಿವುಡ್ ಸಿನಿಮಾ ‘ಹಾರ್ಟ್ ಆಫ್ ಸ್ಟೋನ್’ ಚಿತ್ರೀಕರಣದಲ್ಲಿ ಅವರು ಬ್ಯುಸಿ ಆಗಿದ್ದಾರೆ.
ಕೆಲವು ವರ್ಷಗಳಿಂದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಪರಸ್ಪರ ಪ್ರೀತಿಸುತ್ತಿದ್ದರು. ಈ ವರ್ಷ ಏಪ್ರಿಲ್ 14ರಂದು ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆ ಆಗಿ ಎರಡೂವರೆ ತಿಂಗಳಿಗೆ ತಾವು ಗರ್ಭಿಣಿ ಎಂಬುದನ್ನು ಆಲಿಯಾ ಭಟ್ ತಿಳಿಸಿದ್ದಾರೆ. ಈ ಸುದ್ದಿ ಕೇಳಿ ಅವರ ಫ್ಯಾನ್ಸ್ ಖುಷಿ ಆಗಿದ್ದಾರೆ.
ಇದನ್ನೂ ಓದಿ: Alia Bhatt Pregnant: ಆಲಿಯಾ ಭಟ್ ಪ್ರೆಗ್ನೆಂಟ್; ರಣಬೀರ್ ಕಪೂರ್ ಜತೆ ಮದುವೆ ಆಗಿ ಎರಡೂವರೆ ತಿಂಗಳಲ್ಲಿ ಗುಡ್ ನ್ಯೂಸ್
ಪ್ರೆಗ್ನೆನ್ಸಿ ಘೋಷಣೆಗೂ ಮೊದಲು ಆಲಿಯಾ ಭಟ್ ತೆಗೆದುಕೊಂಡಿದ್ರು ಒಂದು ಮಹತ್ವದ ನಿರ್ಧಾರ
Published On - 8:32 am, Wed, 29 June 22