AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Alia Bhatt: ಬೆಂಗಳೂರಲ್ಲಿ ಜೂನಿಯರ್​ ಆಲಿಯಾ ಭಟ್​; ವಿಡಿಯೋ ನೋಡಿ ವಾವ್​ ಎಂದ ನೆಟ್ಟಿಗರು

Alia Bhatt Lookalike: ರೋಷನಿ ಅನ್ಸಾರಿ ಅವರ ವಿಡಿಯೋಗಳು ಇನ್​ಸ್ಟಾಗ್ರಾಮ್​ನಲ್ಲಿ ವೈರಲ್​ ಆಗಿವೆ. ಅವರನ್ನು ಒಂದು ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.

Alia Bhatt: ಬೆಂಗಳೂರಲ್ಲಿ ಜೂನಿಯರ್​ ಆಲಿಯಾ ಭಟ್​; ವಿಡಿಯೋ ನೋಡಿ ವಾವ್​ ಎಂದ ನೆಟ್ಟಿಗರು
ರೋಷನಿ ಅನ್ಸಾರಿ
TV9 Web
| Edited By: |

Updated on:Oct 10, 2022 | 8:38 AM

Share

ಪ್ರಪಂಚದಲ್ಲಿ ಒಬ್ಬರ ರೀತಿ 7 ಜನರು ಇರುತ್ತಾರೆ ಎಂಬ ನಂಬಿಕೆ ಹಲವರಿಗೆ ಇದೆ. ಫೇಮಸ್​ ಸೆಲೆಬ್ರಿಟಿಗಳ ರೀತಿ ಕಾಣುವ ವ್ಯಕ್ತಿಗಳು ಆಗಾಗ ಗಮನ ಸೆಳೆಯುತ್ತಾರೆ. ಅನುಷ್ಕಾ ಶರ್ಮಾ, ಶಾರುಖ್​ ಖಾನ್​, ಸಲ್ಮಾನ್​ ಖಾನ್​ ರೀತಿ ಕಾಣುವ ಅನೇಕರು ಈಗಾಗಲೇ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದುಂಟು. ಈಗ ಆಲಿಯಾ ಭಟ್​ (Alia Bhatt Lookalike) ರೀತಿಯೇ ಇರುವ ಯುವತಿಯೊಬ್ಬರು ಅಚ್ಚರಿ ಮೂಡಿಸಿದ್ದಾರೆ. ಬೆಂಗಳೂರಿನ ರೋಷನಿ ಸೋನಿ ಅಲಿಯಾಸ್​ ರೋಷನಿ ಅನ್ಸಾರಿ (Roshni Ansari) ಎಂಬ ಈ ಯುವತಿಯ ವಿಡಿಯೋಗಳನ್ನು ನೋಡಿ ಆಲಿಯಾ ಭಟ್​ ಅಭಿಮಾನಿಗಳು ವಾವ್​ ಎನ್ನುತ್ತಿದ್ದಾರೆ. ‘ಆಲಿಯಾ ಭಟ್​ ತಂಗಿ, ಜೂನಿಯರ್ ಆಲಿಯಾ ಭಟ್​’ (Alia Bhatt) ಎಂದೆಲ್ಲ ಜನರು ಕಮೆಂಟ್​ ಮಾಡುತ್ತಿದ್ದಾರೆ.

ರೋಷನಿ ಅನ್ಸಾರಿ ಅವರ ವಿಡಿಯೋಗಳು ಇನ್​ಸ್ಟಾಗ್ರಾಮ್​ನಲ್ಲಿ ವೈರಲ್​ ಆಗಿವೆ. ಇವರನ್ನು ಒಂದು ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ. ಆಲಿಯಾ ಭಟ್​ ರೀತಿಯೇ ಅವರು ಫೋಟೋಶೂಟ್​ ಮಾಡಿದ್ದಾರೆ. ಅನೇಕ ರೀಲ್ಸ್​ ಮಾಡಿ ಹಂಚಿಕೊಂಡಿದ್ದಾರೆ. ಅವುಗಳನ್ನು ಕಂಡು ಎಲ್ಲರಿಗೂ ಅಚ್ಚರಿ ಆಗಿದೆ. ಥೇಟ್​ ಆಲಿಯಾ ರೀತಿ ಕಾಣುವ ಈ ಯುವತಿಗೆ ದಿನದಿಂದ ದಿನಕ್ಕೆ ಫಾಲೋವರ್ಸ್​ ಸಂಖ್ಯೆ ಹೆಚ್ಚುತ್ತಿದೆ.

ಇದನ್ನೂ ಓದಿ
Image
ಆಲಿಯಾ ಭಟ್​ಗೆ ಸೀಮಂತ ಶಾಸ್ತ್ರ; ಇಲ್ಲಿವೆ ಕ್ಯೂಟ್ ಫೋಟೋಗಳು
Image
ಆಲಿಯಾ ಎಲ್ಲಿದ್ದಾಳೆ ಎಂದು ತಿಳಿಯದೆ ಊಟ ಮಾಡಲ್ಲ, ಬಾತ್​ರೂಮ್ ಹೋಗಲ್ಲ ಎಂದ ರಣಬೀರ್ ಕಪೂರ್
Image
ರಣಬೀರ್ ನಟನೆಯ ‘ಬ್ರಹ್ಮಾಸ್ತ್ರ’ ಗೆಲುವಿನಲ್ಲಿ ಆಲಿಯಾ ಭಟ್​ಗಿಲ್ಲ ಪಾಲು; ಯಾಕೀ ತಾರತಮ್ಯ?
Image
‘ಶೀಘ್ರದಲ್ಲೇ ನಾನು ಆಲಿಯಾ ಕಪೂರ್ ಆಗ್ತೀನಿ’: ರಣಬೀರ್ ಪತ್ನಿ ಹೀಗೆ ಹೇಳಿದ್ದೇಕೆ?

ಸದ್ಯಕ್ಕೆ ಸಿಕ್ಕಾಪಟ್ಟೆ ವೈರಲ್​ ಆಗುತ್ತಿರುವ ರೋಷನಿ ಅನ್ಸಾರಿ ವಿಡಿಯೋಗಳು ಆಲಿಯಾ ಭಟ್​ ಅವರ ಕಣ್ಣಿಗೆ ಬಿದ್ದರೆ ಅವರು ಯಾವ ರೀತಿ ಪ್ರತಿಕ್ರಿಯಿಸಬಹುದು ಎಂಬ ಕೌತುಕ ಅಭಿಮಾನಿಗಳಿಗೆ ಇದೆ. ಆಲಿಯಾ ಭಟ್​ ಈಗ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇದ್ದಾರೆ. ಈ ವರ್ಷ ಅವರ ಪಾಲಿಗೆ ತುಂಬ ವಿಶೇಷವಾಗಿದೆ.

ಬಾಲಿವುಡ್​ ಮಾತ್ರವಲ್ಲದೇ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಆಲಿಯಾ ಭಟ್​ ಮಿಂಚುತ್ತಿದ್ದಾರೆ. ‘ಆರ್​ಆರ್​ಆರ್​’ ಸಿನಿಮಾದಲ್ಲಿ ನಟಿಸಿದ ಬಳಿಕ ದಕ್ಷಿಣ ಭಾರತದಲ್ಲೂ ಅವರ ಜನಪ್ರಿಯತೆ ಹೆಚ್ಚಾಗಿದೆ. ‘ಗಂಗೂಬಾಯಿ ಕಾಠಿಯಾವಾಡಿ’, ‘ಆರ್​ಆರ್​ಆರ್​’ ಹಾಗೂ ‘ಬ್ರಹ್ಮಾಸ್ತ್ರ’ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ಯಶಸ್ಸು ಕಂಡ ಬಳಿಕ ಆಲಿಯಾ ಅವರ ವೃತ್ತಿಜೀವನಕ್ಕೆ ದೊಡ್ಡ ಮೈಲೇಜ್​ ಸಿಕ್ಕಂತಾಗಿದೆ.

ಪ್ರಿಯಕರ ರಣಬೀರ್​ ಕಪೂರ್​ ಜೊತೆ ಆಲಿಯಾ ಭಟ್ ಅವರು ಏಪ್ರಿಲ್​ 14ರಂದು ಹಸೆಮಣೆ ಏರಿದರು. ಎರಡೂವರೆ ತಿಂಗಳು ಕಳೆಯುವುದರೊಳಗೆ ತಾವು ಪ್ರೆಗ್ನೆಂಟ್​ ಎಂಬುದನ್ನು ಆಲಿಯಾ ಘೋಷಿಸಿದರು. ಈಗ ಅವರು ತಾಯಿ ಆಗುತ್ತಿರುವ ಸಂಭ್ರಮದಲ್ಲಿದ್ದಾರೆ. ಸದ್ಯಕ್ಕೆ ಸಿನಿಮಾ ಕೆಲಸಗಳನ್ನು ಸಣ್ಣ ಬಿಡುವು ಪಡೆದುಕೊಂಡು ಆರೋಗ್ಯದ ಕಡೆಗೆ ಗಮನ ಹರಿಸಿದ್ದಾರೆ. ಆದಷ್ಟು ಬೇಗ ಅವರ ಕಡೆಯಿಂದ ಶುಭ ಸಮಾಚಾರ ಕೇಳಿಬರಲಿದೆ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:38 am, Mon, 10 October 22

Follow Us
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!