ನೆಹರುಗೆ ಸಂಬಂಧಿಸಿದ ಎರಡು ದೃಶ್ಯಗಳಿಗೆ ಸೆನ್ಸಾರ್​ ಕತ್ತರಿ; ‘ಗಂಗೂಬಾಯಿ..’ ಚಿತ್ರಕ್ಕೆ ಸಿಕ್ಕ ಪ್ರಮಾಣ ಪತ್ರ ಯಾವುದು?

| Updated By: ಮದನ್​ ಕುಮಾರ್​

Updated on: Feb 10, 2022 | 3:47 PM

ಮುಂಬೈನ ಕಾಮಾಟಿಪುರದ ಡಾನ್​ ಆಗಿ ಮೆರೆದ ಗಂಗೂಬಾಯಿ ಜೀವನದ ವಿವರಗಳನ್ನು ಆಧರಿಸಿ ಈ ಸಿನಿಮಾ ನಿರ್ಮಾಣ ಆಗಿದೆ. ಫೆ.25ರಂದು ಅದ್ದೂರಿಯಾಗಿ ರಿಲೀಸ್​ ಆಗಲಿದೆ.

ನೆಹರುಗೆ ಸಂಬಂಧಿಸಿದ ಎರಡು ದೃಶ್ಯಗಳಿಗೆ ಸೆನ್ಸಾರ್​ ಕತ್ತರಿ; ‘ಗಂಗೂಬಾಯಿ..’ ಚಿತ್ರಕ್ಕೆ ಸಿಕ್ಕ ಪ್ರಮಾಣ ಪತ್ರ ಯಾವುದು?
ಆಲಿಯಾ ಭಟ್​
Follow us on

ಆಲಿಯಾ ಭಟ್​ (Alia Bhatt) ನಟನೆಯ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಆದರೆ ಹೈಪ್​ ಸೃಷ್ಟಿ ಮಾಡುವುದರ ಜೊತೆ ಕೆಲವು ವಿವಾದಗಳನ್ನೂ ಮಾಡಿಕೊಳ್ಳುತ್ತಿದೆ. ಸಂಜಯ್​ ಲೀಲಾ ಬನ್ಸಾಲಿ ಅವರ ಎಲ್ಲ ಸಿನಿಮಾಗಳು ಕೂಡ ರಿಲೀಸ್​ ಸಮಯದಲ್ಲಿ ಕಿರಿಕ್​ ಮಾಡಿಕೊಳ್ಳುತ್ತವೆ. ‘ಗಂಗೂಬಾಯಿ ಕಾಠಿಯಾವಾಡಿ’ (Gangubai Kathiawadi) ಕೂಡ ಕೆಲವರ ಅಸಮಾಧಾನಕ್ಕೆ ಕಾರಣ ಆಗಿದೆ. ಇಷ್ಟೆಲ್ಲ ವಿವಾದಗಳನ್ನು ಮಾಡಿಕೊಂಡಿರುವ ಈ ಚಿತ್ರಕ್ಕೆ ಸೆನ್ಸಾರ್​ ಮಂಡಳಿಯಿಂದ ಯಾವ ಪ್ರಮಾಣ ಪತ್ರ ಸಿಗಬಹುದು ಎಂಬ ಕುತೂಹಲ ಮೂಡಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಚರ್ಚೆಯ ವಿಚಾರ ಏನೆಂದರೆ, ಈ ಸಿನಿಮಾದಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್​ ನೆಹರು (Jawaharlal Nehru) ಕುರಿತ ಕೆಲವು ದೃಶ್ಯಗಳು ಇವೆ ಎನ್ನಲಾಗಿದೆ. ಈ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೆನ್ಸಾರ್​ ಮಂಡಳಿ ಸದಸ್ಯರು ಸೂಚಿಸಿದ್ದಾರೆ. ಬಳಿಕ ಚಿತ್ರಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡಲಾಗಿದೆ. ಸಂಜಯ್​ ಲೀಲಾ ಬನ್ಸಾಲಿ ಅಭಿಮಾನಿಗಳು ಈ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಫೆ.25ರಂದು ಅದ್ದೂರಿಯಾಗಿ ರಿಲೀಸ್​ ಆಗಲಿದೆ. 

‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದ ದೃಶ್ಯವೊಂದರಲ್ಲಿ ಸಣ್ಣದೊಂದು ಬದಲಾವಣೆ ಮಾಡಬೇಕು ಮತ್ತು ನಾಲ್ಕು ಕಡೆಗಳಲ್ಲಿ ಕತ್ತರಿ ಹಾಕಬೇಕು ಎಂದು ಸೆನ್ಸಾರ್​ ಮಂಡಳಿಯು ನಿರ್ದೇಶಕರಿಗೆ ಸೂಚಿಸಿದೆ. ಅಲ್ಲದೇ, ನೆಹರು ಅವರ ಬಗ್ಗೆ ಪ್ರಸ್ತಾಪಿಸಲಾಗಿರುವ ದೃಶ್ಯಗಳನ್ನು ತೆಗೆದುಹಾಕಬೇಕು ಎಂದು ಆದೇಶಿಸಲಾಗಿದೆ ಎಂದು ‘ಬಾಲಿವುಡ್​ ಲೈಫ್​’ ವರದಿ ಮಾಡಿದೆ. ಸೆನ್ಸಾರ್​ ಮಂಡಳಿ ಸೂಚಿಸಿರುವ ಈ ಎಲ್ಲ ಬದಲಾವಣೆಗಳನ್ನು ಮಾಡಿದರೆ ಚಿತ್ರದ ಅವಧಿ ಕೊಂಚ ಕಡಿಮೆ ಆಗಲಿದೆ.

ಮುಂಬೈನ ಕಾಮಾಟಿಪುರದ ಡಾನ್​ ಆಗಿ ಮೆರೆದ ಗಂಗೂಬಾಯಿ ಜೀವನದ ವಿವರಗಳನ್ನು ಆಧರಿಸಿ ಈ ಸಿನಿಮಾ ನಿರ್ಮಾಣ ಆಗಿದೆ. ಆಲಿಯಾ ಜೊತೆ ವಿಜಯ್​ ರಾಝ್​, ಹುಮಾ ಖುರೇಶಿ ಮತ್ತು ಅಜಯ್​ ದೇವಗನ್​ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್​ ಗಮನ ಸೆಳೆದಿದೆ. ಈವರೆಗೂ 5 ಕೋಟಿಗೂ ಹೆಚ್ಚು ಬಾರಿ ಈ ಟ್ರೇಲರ್​ ವೀಕ್ಷಣೆ ಕಂಡಿದೆ.

ಸಂಜಯ್​ ಲೀಲಾ ಬನ್ಸಾಲಿ ಸಿನಿಮಾಗಳಲ್ಲಿ ಹಾಡುಗಳಿಗೆ ಹೆಚ್ಚು ಮಹತ್ವ ನೀಡಲಾಗಿರುತ್ತದೆ. ಈ ಬಾರಿ ಕೂಡ ಅದು ಮುಂದುವರಿದಿದೆ. ಆಲಿಯಾ ಭಟ್​ ಭರ್ಜರಿಯಾಗಿ ಸ್ಟೆಪ್​ ಹಾಕಿರುವ ‘ಡೋಲಿಡಾ..’ ಹಾಡು ಇಂದು (ಫೆ.10) ಬಿಡುಗಡೆ ಆಗಿದೆ. ಯೂಟ್ಯೂಬ್​ನಲ್ಲಿ ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ಈ ಹಾಡು 5 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ ಕಂಡಿದೆ.

ಇದನ್ನೂ ಓದಿ:

Alia Bhatt: ರಿಲೀಸ್​ಗೂ ಮುನ್ನವೇ ‘ಗಂಗೂಬಾಯಿ ಕಾಠಿಯಾವಾಡಿ’ ವಿರುದ್ಧ ಆಕ್ರೋಶದ ಸುರಿಮಳೆ; ಕಾರಣ ಒಂದೆರಡಲ್ಲ!

ವಿವಾದದಲ್ಲಿ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರ; ಕನ್ನಡದ ಖ್ಯಾತ ಗಾಯಕಿಗೆ ಅಪಮಾನ ಆರೋಪ