ವಿವಾದದಲ್ಲಿ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರ; ಕನ್ನಡದ ಖ್ಯಾತ ಗಾಯಕಿಗೆ ಅಪಮಾನ ಆರೋಪ

ಕಾಮಾಟಿಪುರದ ಡಾನ್​ ಆಗುವುದಕ್ಕೂ ಮೊದಲು ಗಂಗೂಬಾಯಿ ವೇಶ್ಯೆ ಆಗಿರುತ್ತಾರೆ. ಇದನ್ನು ಸಂಜಯ್​ ಲೀಲಾ​ ಬನ್ಸಾಲಿ ಹೇಗೆ ಕಟ್ಟಿಕೊಟ್ಟಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳ ವಲಯದಲ್ಲಿದೆ. ಈಗ ಚಿತ್ರ ವಿವಾದದ ಹಾದಿ ಹಿಡಿಯುವ ಸಾಧ್ಯತೆ ಇದೆ.

ವಿವಾದದಲ್ಲಿ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರ; ಕನ್ನಡದ ಖ್ಯಾತ ಗಾಯಕಿಗೆ ಅಪಮಾನ ಆರೋಪ
ಆಲಿಯಾ ಭಟ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Feb 04, 2022 | 3:50 PM

ಖ್ಯಾತ ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ (Sanjay Leela Bhansali) ಆ್ಯಕ್ಷನ್​ ಕಟ್​ ಹೇಳಿದ್ದ ‘ಪದ್ಮಾವತ್​’ ಚಿತ್ರ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಆರಂಭದಲ್ಲಿ ಈ ಸಿನಿಮಾದ ಹೆಸರು ‘ಪದ್ಮಾವತಿ’ ಎಂದಿತ್ತು. ಆದರೆ, ಈ ಟೈಟಲ್​ಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿನಿಮಾದ ಟೈಟಲ್​ ಅನ್ನು ‘ಪದ್ಮಾವತ್​’ ಎಂದು ಬದಲಿಸಲಾಗಿತ್ತು. ಖಿಲ್ಜಿ ಹಾಗೂ ಪದ್ಮಾವತಿ ನಡುವೆ ರೊಮ್ಯಾಂಟಿಕ್​ ದೃಶ್ಯಗಳನ್ನು ಇಡಲಾಗಿದೆ ಎಂಬ ಊಹೆಯೇ ಈ ವಿವಾದ ಹೊತ್ತಿಕೊಳ್ಳಲು ಪ್ರಮುಖ ಕಾರಣವಾಗಿತ್ತು. ಸಿನಿಮಾ ತೆರೆಕಂಡು ದೊಡ್ಡಮಟ್ಟದಲ್ಲಿ ಹಿಟ್​ ಆಗಿದ್ದು ಈಗ ಇತಿಹಾಸ. ಈ ಚಿತ್ರ ತೆರೆಕಂಡು ನಾಲ್ಕು ವರ್ಷಗಳ ಬಳಿಕ ಬನ್ಸಾಲಿ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದ (Gangubai Kathiawadi Movie) ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈ ಸಿನಿಮಾ ತೆರೆಗೆ ಬರುವುದಕ್ಕೂ ಮೊದಲೇ ವಿವಾದ ಸೃಷ್ಟಿಸುವ ಸೂಚನೆ ಸಿಕ್ಕಿದೆ. ಅದೂ ಟೈಟಲ್​ ವಿಚಾರಕ್ಕೆ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ.

ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಾಠಿಯಾವಾಡಿ’ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಪ್ರೇಕ್ಷಕರು. ಕಾಮಾಟಿಪುರದ ಡಾನ್​ ಆಗಿ ಮೆರೆದಿದ್ದ ಗಂಗೂಬಾಯಿ ಅವರ ಜೀವನದ ಕಥೆ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಕಾಮಾಟಿಪುರದ ಡಾನ್​ ಆಗುವುದಕ್ಕೂ ಮೊದಲು ಗಂಗೂಬಾಯಿ ವೇಶ್ಯೆ ಆಗಿರುತ್ತಾರೆ. ಇದನ್ನು ಸಂಜಯ್​ ಲೀಲಾ​ ಬನ್ಸಾಲಿ ಹೇಗೆ ಕಟ್ಟಿಕೊಟ್ಟಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳ ವಲಯದಲ್ಲಿದೆ. ಈಗ ಚಿತ್ರ ವಿವಾದದ ಹಾದಿ ಹಿಡಿಯುವ ಸಾಧ್ಯತೆ ಇದೆ.

ಕರ್ನಾಟಕದ ಹಿರಿಯ ಗಾಯಕಿ ಗಂಗೂಬಾಯಿ ಹಾನ​ಗಲ್​ ಕನ್ನಡದ ಕೀರ್ತಿ. ಸಂಗೀತ ಕ್ಷೇತ್ರದಲ್ಲಿ ಅವರದ್ದು ದೊಡ್ಡ ಹೆಸರು. ಈಗ ಚಿತ್ರದ ಟೈಟಲ್​ ಬಗ್ಗೆ ವಿವಾದ ಆಗುವುದಕ್ಕೂ ಕಾರಣವಾಗಿದ್ದು, ಗಂಗೂಬಾಯಿ ಹೆಸರು. ‘ಸಿನಿಮಾ ಟೈಟಲ್‌ನಿಂದ ಗಂಗೂಬಾಯಿ ಹಾನಗಲ್ ಅವರಿಗೆ ಅಪಮಾನ ಆಗಿದೆ. ಗಂಗೂಬಾಯಿ‌ ಹಾನ್​​ಗಲ್ ಕನ್ನಡದ ಕೀರ್ತಿ. ಸಿನಿಮಾ‌ ಹೆಸರು ಬದಲಿಸಬೇಕು’ ಎಂದು ಕನ್ನಡ ಜಾಗೃತಿ ವೇದಿಕೆ ಆಗ್ರಹಿಸಿದೆ. ಒಂದೊಮ್ಮೆ ಈ ಪ್ರತಿಭಟನೆ ಜೋರಾದರೆ ಕರ್ನಾಟಕದಲ್ಲಿ ಸಿನಿಮಾ ರಿಲೀಸ್​ಗೆ ಅಡ್ಡಿ ಉಂಟಾಗಬಹುದು.

‘ಗಂಗೂಬಾಯಿ ಕಾಠಿಯಾವಾಡಿ’ ಟ್ರೇಲರ್​ ರಿಲೀಸ್​: 

‘ಗಂಗೂಬಾಯಿ ಕಾಠಿಯಾವಾಡಿ’  ಸಿನಿಮಾದಲ್ಲಿ ಏನೆಲ್ಲ ಇದೆ ಎಂಬುದರ ಝಲಕ್ ಇಂದು (ಫೆಬ್ರವರಿ 4) ರಿಲೀಸ್​ ಆದ​ ಟ್ರೇಲರ್​ನಲ್ಲಿದೆ. ಇಡೀ ಟ್ರೇಲರ್​ನಲ್ಲಿ ಆಲಿಯಾ ಭಟ್​ ಅವರ ನಟನೆ, ಬನ್ಸಾಲಿ ಸಿನಿಮಾ ಮೇಕಿಂಗ್​ ಗಮನ ಸೆಳೆಯುತ್ತಿದೆ. ಅಜಯ್​ ದೇವಗನ್​ ಪಾತ್ರ ಕೂಡ ಟ್ರೇಲರ್​ನಲ್ಲಿ ಬಂದು ಹೋಗುತ್ತದೆ. ಅವರ ಪಾತ್ರ ಏನು ಎಂಬ ರಹಸ್ಯವನ್ನು ನಿರ್ದೇಶಕರು ಬಿಟ್ಟುಕೊಟ್ಟಿಲ್ಲ. ಇಡೀ ಚಿತ್ರ ರೆಟ್ರೋ ಶೈಲಿಯಲ್ಲಿ ಮೂಡಿ ಬಂದಿದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷ್ಯ ಸಿಕ್ಕಿದೆ. ಟ್ರೇಲರ್​ ರಿಲೀಸ್​ ಆದ ಗಂಟೆಗಳಲ್ಲಿ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.

ಇದನ್ನೂ ಓದಿ: Alia Bhatt: ವಿಭಿನ್ನ ಗೆಟಪ್​ಗಳಲ್ಲಿ ಆಲಿಯಾ ಭಟ್​; ಇಲ್ಲಿವೆ ಫೋಟೋಗಳು

‘ಗಂಗೂಬಾಯಿ ಕಾಠಿಯಾವಾಡಿ’ ರಿಲೀಸ್​ ದಿನಾಂಕ ಘೋಷಣೆ; ಕೊವಿಡ್​ ಮಧ್ಯೆ ಗೆಲ್ಲಲಿದೆಯೇ ಆಲಿಯಾ ಚಿತ್ರ?

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್