ನಟಿ ಆಲಿಯಾ ಭಟ್ (Alia Bhatt) ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಯಶಸ್ಸು ಕಂಡಿದ್ದಾರೆ. ಅವರು ಅಭಿನಯಿಸಿರುವ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ (Rocky Aur Rani Ki Prem Kahaani) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜಲೈ 28ರಂದು ಅದ್ದೂರಿಯಾಗಿ ಈ ಸಿನಿಮಾ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ರಣವೀರ್ ಸಿಂಗ್ ಅಭಿನಯಿಸಿದ್ದಾರೆ. ಕರಣ್ ಜೋಹರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿರುವುದರಿಂದ ಹೈಪ್ ಸೃಷ್ಟಿ ಆಗಿದೆ. ಕೆಲವೇ ದಿನಗಳ ಹಿಂದೆ ರಿಲೀಸ್ ಆದ ಟ್ರೇಲರ್ ನೋಡಿ ಸಿನಿಪ್ರಿಯರು ಖುಷಿಪಟ್ಟಿದ್ದಾರೆ. ಬಹಳ ಗ್ರ್ಯಾಂಡ್ ಆಗಿ ಈ ಸಿನಿಮಾ ಸಿದ್ಧವಾಗಿದೆ ಎಂಬುದನ್ನು ಟ್ರೇಲರ್ ವಿವರಿಸಿದೆ. ಲವ್ಸ್ಟೋರಿ ಹಾಗೂ ಫ್ಯಾಮಿಲಿ ಡ್ರಾಮಾ ಹೈಲೈಟ್ ಆಗಿರುವ ಈ ಸಿನಿಮಾವನ್ನು ನೋಡಲು ಪ್ರೇಕ್ಷಕರು ಕಾದಿದ್ದಾರೆ. ಈ ನಡುವೆ ಆಲಿಯಾ ಭಟ್ ಅವರು ಒಂದು ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ. ಇದರಿಂದ ಅವರ ಸಿನಿಮಾಗಳ (Alia Bhatt Movies) ಸಂಖ್ಯೆ ಇನ್ಮುಂದೆ ಕಡಿಮೆ ಆಗಬಹುದು.
ಆಲಿಯಾ ಭಟ್ ಅವರ ಬದುಕು ಈಗ ಮೊದಲಿನಂತಿಲ್ಲ. ಅವರಿಗೆ ಮದುವೆ ಆಗಿದೆ. ಅವರು ಹೆಣ್ಣು ಮಗುವಿಗೆ ತಾಯಿ ಆಗಿದ್ದಾರೆ. ಹಾಗಾಗಿ ಗಂಡ, ಮನೆ, ಮಗು ಸಲುವಾಗಿ ಸಮಯ ನೀಡಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಇನ್ಮುಂದೆ ಅವರು ಸಿನಿಮಾಗಳ ಸಲುವಾಗಿ ಕುಟುಂಬದ ಸಮಯವನ್ನು ಹಾಳು ಮಾಡಿಕೊಳ್ಳುವುದಿಲ್ಲ ಎಂದು ತೀರ್ಮಾನಿಸಿದ್ದಾರೆ. ಹಾಗಾಗಿ ಭವಿಷ್ಯದಲ್ಲಿ ಅವರಿಗೆ ಹೆಚ್ಚು ಸಿನಿಮಾಗಳಲ್ಲಿ ನಟಿಸಲು ಸಾಧ್ಯವಾಗಲಿಕ್ಕಿಲ್ಲ.
ಇದನ್ನೂ ಓದಿ: Alia Bhatt: ‘ಪ್ರಚಾರಕ್ಕಾಗಿ ಏನೆಲ್ಲ ಮಾಡ್ತಾರಪ್ಪ’: ಕಂಡವರ ಚಪ್ಪಲಿ ಎತ್ತಿಕೊಟ್ಟ ಆಲಿಯಾ ಭಟ್ ಬಗ್ಗೆ ನೆಟ್ಟಿಗರ ಟೀಕೆ
ಆಲಿಯಾ ಅವರು ಕುಟುಂಬಕ್ಕೆ ಹೆಚ್ಚು ಸಮಯ ಮೀಸಲಿಡಬೇಕು ಎಂದುಕೊಂಡಿದ್ದಾರೆ ಎಂಬುದು ನಿಜ. ಹಾಗಂತ ಅವರು ನಿವೃತ್ತಿ ಪಡೆಯುವ ನಿರ್ಧಾರಕ್ಕೆ ಬಂದಿಲ್ಲ. ಸಿನಿಮಾಗಳ ಆಯ್ಕೆಯಲ್ಲಿ ಅವರು ಚ್ಯೂಸಿ ಆಗಬಹುದು ಅಷ್ಟೇ. ಸದ್ಯ ಅವರು ಬಾಲಿವುಡ್ಗೆ ಮಾತ್ರ ಸೀಮಿತ ಆಗಿಲ್ಲ. ಹಾಲಿವುಡ್ನಿಂದಲೂ ಅವರಿಗೆ ಅವಕಾಶಗಳು ಬರುತ್ತಿವೆ. ಹಾಲಿವುಡ್ನ‘ಹಾರ್ಟ್ ಆಫ್ ಸ್ಟೋನ್’ ಸಿನಿಮಾದಲ್ಲಿ ಅವರು ನಟಿಸಿದ್ದು, ಆಗಸ್ಟ್ 11ರಂದು ಬಿಡುಗಡೆ ಆಗಲಿದೆ.
ಇದನ್ನೂ ಓದಿ: Alia Bhatt: ಆಲಿಯಾ ಭಟ್ ತಾಳಿಸರದಲ್ಲಿ ಇದೆ ಒಂದು ವಿಶೇಷ; ವೈರಲ್ ಆಗಿದೆ ಫೋಟೋ
ಆಲಿಯಾ ಭಟ್ ಅವರು ಚಿತ್ರರಂಗಕ್ಕೆ ಕಾಲಿಟ್ಟು ದಶಕ ಕಳೆದಿದೆ. ಈ 11 ವರ್ಷಗಳಲ್ಲಿ ಅವರು ಸಾಕಷ್ಟು ಸಾಧನೆ ಮಾಡಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಬಹುಬೇಡಿಕೆ ಇರುವಾಗಲೇ ಅವರು ಮದುವೆ, ಮಗು ಮಾಡಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಕುಟುಂಬದ ಸಲುವಾಗಿ ಅವರು ಈಗ ಆಯ್ಕೆಗಳಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.