ಈ ಫೋಟೋದಲ್ಲಿ ಇದ್ದಾರೆ ಅಮಿತಾಭ್ ಬಚ್ಚನ್; ಯಾರೆಂದು ಪತ್ತೆ ಹಚ್ಚುವಿರಾ?

ಅಮಿತಾಭ್ ಬಚ್ಚನ್ ಅವರು ಚಿತ್ರರಂಗಕ್ಕೆ ಬರುವುದಕ್ಕೂ ಮೊದಲು ಸಾಮಾನ್ಯ ವ್ಯಕ್ತಿ ಎನಿಸಿಕೊಂಡಿದ್ದರು. ಆದರೆ, ಅವರು ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ಅವರ ಬದುಕು ಬದಲಾಯಿತು. ಈಗ ಫ್ಯಾನ್ಸ್​ಗೋಸ್ಕರ ಅವರು 70 ವರ್ಷಗಳ ಹಿಂದೆ ತೆಗೆದ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ತಾವು ಇರೋದು ಎಲ್ಲಿ ಎಂಬುದನ್ನು ಕೂಡ ತೋರಿಸಿದ್ದಾರೆ.

ಈ ಫೋಟೋದಲ್ಲಿ ಇದ್ದಾರೆ ಅಮಿತಾಭ್ ಬಚ್ಚನ್; ಯಾರೆಂದು ಪತ್ತೆ ಹಚ್ಚುವಿರಾ?
ಅಮಿತಾಭ್ ಬಚ್ಚನ್

Updated on: Aug 02, 2024 | 7:28 AM

ನಟ ಅಮಿತಾಭ್ ಬಚ್ಚನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಅವರು ಅಭಿಮಾನಿಗಳಿಗಾಗಿ ಫೋಟೋ ಹಂಚಿಕೊಳ್ಳುತ್ತಾರೆ. ಅಷ್ಟೇ ಅಲ್ಲ ಮಾಡುವ ಪ್ರತಿ ಟ್ವೀಟ್​ಗೂ ಅವರು ಸಂಖ್ಯೆ ನೀಡುತ್ತಾರೆ. ಇತ್ತೀಚೆಗೆ ಅವರು ಇನ್​ಸ್ಟಾಗ್ರಾಮ್​ನಲ್ಲಿ ಬರೋಬ್ಬರಿ 70 ವರ್ಷಗಳ ಹಿಂದೆ ತೆಗೆದ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ತಾವು ಇರೋದು ಎಲ್ಲಿ ಎಂಬುದನ್ನು ಕೂಡ ತೋರಿಸಿದ್ದಾರೆ.

ಅಮಿತಾಭ್ ಬಚ್ಚನ್ ಅವರು ಚಿತ್ರರಂಗಕ್ಕೆ ಬರುವುದಕ್ಕೂ ಮೊದಲು ಸಾಕಷ್ಟು ಸಣ್ಣ-ಪುಟ್ಟ ಕೆಲಸಗಳನ್ನು ಮಾಡಿದ್ದಾರೆ. ಅವರ ಖ್ಯಾತಿ ಈಗ ದೊಡ್ಡ ಮಟ್ಟದಲ್ಲಿ ಹಬ್ಬಿದೆ. ಇದಕ್ಕೆ ಅವರು ಹಾಕಿರುವ ಶ್ರಮವೇ ಕಾರಣ. ತಮ್ಮ ಕಷ್ಟದ ಸಮಯದ ಬಗ್ಗೆ ಅವರು ಅನೇಕ ಬಾರಿ ಹೇಳಿಕೊಂಡಿದ್ದರು. ಈಗ ಅವರು ಬಾಲ್ಯದಲ್ಲಿ ಹೇಗಿದ್ದೆ ಎಂಬುದನ್ನು ತೋರಿಸಿದ್ದಾರೆ.

ಆಗ ಅಮಿತಾಭ್ ಬಚ್ಚನ್ ಅವರು ಸ್ಕೌಟ್ ಆ್ಯಂಡ್ ಗೈಡ್ಸ್​ನಲ್ಲಿ ಇದ್ದರು. ಮಕ್ಕಳು ನಾಲ್ಕು ಗೋಡೆಗಳ ನಡುವೆ ಓದು-ಬರಹಗಳನ್ನು ಕಲಿಯುವದರ ಜೊತೆಗೆ, ನಿಸರ್ಗದ ಮಡಿಲಲ್ಲಿ ಒಂದಾಗಿ ಬೆರೆತು, ಸಮನ್ವಯದಿಂದ ಬಾಳಲು ಕಲಿಯುವಂತೆ ಪ್ರೇರೇಪಿಸಲಿರುವ ಕಾರ್ಯಕ್ರಮವೇ ಸ್ಕೌಟ್ ಮತ್ತು. ಇದರ ಭಾಗವಾಗಿದ್ದರು ಅಮಿತಾಭ್ ಬಚ್ಚನ್.

1954ರ ಅಲಹಾಬಾದ್ ಜಿಲ್ಲೆಯಲ್ಲಿ ತೆಗೆದ ಫೋಟೋವನ್ನು ಅಮಿತಾಭ್ ಬಚ್ಚನ್ ಹಂಚಿಕೊಂಡಿದ್ದಾರೆ. ‘ಇಂಟರ್​ ಟ್ರೂಪ್ ಚಾಲೆಂಜ್ ಶೀಲ್ಡ್​’ನ ವಿನ್ನರ್ ತಂಡದ ಫೋಟೋ ಇದಾಗಿದೆ. ಅಮಿತಾಭ್ ಅವರು ತಾವು ಎಲ್ಲಿ ನಿಂತಿದ್ದೆ ಎಂಬುದನ್ನು ತೋರಿಸಿದ್ದಾರೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ‘1954ರಲ್ಲಿ ಅಲ್ಲಿದ್ದ ಯಾರಿಗೂ ಅಮಿತಾಭ್ ಅವರ ಭವಿಷ್ಯದ ಬಗ್ಗೆ ಕಲ್ಪನೆಯೂ ಇರಲಿಲ್ಲ. ಈ ಬಾಲಕ ಇಷ್ಟು ದೊಡ್ಡ ವ್ಯಕ್ತಿ ಆಗುತ್ತಾನೆ ಎಂದು ಅಲ್ಲಿದ್ದ ಯಾರಿಗೂ ಗೊತ್ತಾಗುವುದಿಲ್ಲ’ ಎಂದಿದ್ದಾರೆ ಅಮಿತಾಭ್.

ಇದನ್ನೂ ಓದಿ: ಅಮಿತಾಭ್​ ಬಚ್ಚನ್​ ಕಾಲಿಗೆ ನಮಸ್ಕರಿಸಲು ಬಂದ ರಜನಿಕಾಂತ್; ಬಿಗ್​ ಬಿ ಪ್ರತಿಕ್ರಿಯೆ ಏನು?

ಅಮಿತಾಭ್ ಬಚ್ಚನ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಈ ಸಿನಿಮಾ 1100 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರದಿಂದ ಅವರ ಖ್ಯಾತಿ ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 7:27 am, Fri, 2 August 24

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us