ಅಮಿತಾಭ್​ಗೆ ಕೊನೆಯಾಗುವುದಿಲ್ಲ ಸೊಸೆಯ ಮೇಲಿನ ಮುನಿಸು? ಐಶ್ವರ್ಯಾ ಬಗ್ಗೆ ಏಕಿಷ್ಟು ನಿರ್ಲಕ್ಷ್ಯ?

ಈ ಸಿನಿಮಾದಲ್ಲಿ ಐಶ್ವರ್ಯಾ ಐಶ್ವರ್ಯಾ ರೈ ಕೂಡ ನಟಿಸಿದ್ದಾರೆ. ಮಾತಿಗೂ ಅಮಿತಾಭ್ ಅವರು ಐಶ್ವರ್ಯಾ ಬಗ್ಗೆ ಒಂದೇ ಒಂದು ಮೆಚ್ಚುಗೆಯ ಮಾತನ್ನು ಆಡಿಲ್ಲ ಎಂದು ಅನೇಕರು ಕಿಡಿಕಾರಿದ್ದಾರೆ. ಐಶ್ವರ್ಯಾ ಬಗ್ಗೆ ಅಸಮಾಧಾನ ಇದೆ ಅನ್ನೋದಕ್ಕೆ ಇದುವೇ ಸಾಕ್ಷಿ ಎಂದು ಕೆಲವರು ಹೇಳಿದ್ದಾರೆ.

ಅಮಿತಾಭ್​ಗೆ ಕೊನೆಯಾಗುವುದಿಲ್ಲ ಸೊಸೆಯ ಮೇಲಿನ ಮುನಿಸು? ಐಶ್ವರ್ಯಾ ಬಗ್ಗೆ ಏಕಿಷ್ಟು ನಿರ್ಲಕ್ಷ್ಯ?
ಅಮಿತಾಭ್-ಐಶ್ವರ್ಯಾ
Edited By:

Updated on: Jun 21, 2024 | 9:48 AM

ಅಮಿತಾಭ್ ಬಚ್ಚನ (Amitabh Bahchan) ಅವರ ಕುಟುಂಬ ವಿಚಾರ ಆಗಗ ಚರ್ಚೆ ಆಗುತ್ತಲೇ ಇರುತ್ತದೆ. ಅಮಿತಾಭ್ ಬಚ್ಚನ್ ಹಾಗೂ ಸೊಸೆ ಐಶ್ವರ್ಯಾ ರೈ ಬಚ್ಚನ್ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ಸುದ್ದಿ ಈ ಮೊದಲು ಹರಿದಾಡಿತ್ತು. ಅಭಿಷೇಕ್ ಮತ್ತು ಐಶ್ವರ್ಯಾ ವಿಚ್ಛೇದನ ಪಡೆಯುತ್ತಾರೆ ಎಂದು ವರದಿ ಆಗಿತ್ತು. ಆದರೆ, ಕುಟುಂಬದವರು ಹಲವು ಬಾರಿ ಒಟ್ಟಾಗಿ ಕಾಣಿಸಿಕೊಂಡ ಬಳಿಕ ಈ ಸುದ್ದಿ ತಣ್ಣಗಾಯಿತು. ಆದರೆ, ಅಮಿತಾಭ್​ಗೆ ಇರೋ ಕೋಪ ಸಂಪೂರ್ಣ ಶಮನವಾದಂತೆ ಕಾಣುತ್ತಿಲ್ಲ. ಇದಕ್ಕೆ ಕಾರಣವಾಗಿರೋದು ಅಮಿತಾಭ್ ಅವರ ಪೋಸ್ಟ್.

‘ರಾವಣ್’ ಸಿನಿಮಾ 2010ರ ಜೂನ್ 18ರಂದು ರಿಲೀಸ್ ಆಯಿತು. ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದರು. ಸಿನಿಮಾ ರಿಲೀಸ್ ಆಗಿ 14 ವರ್ಷ ಕಳೆದಿದೆ. ಇದನ್ನು ಅಭಿಮಾನಿಯೋರ್ವ ಸಂಭ್ರಮಿಸಿದ್ದ. ಇದನ್ನು ರೀಟ್ವೀಟ್ ಮಾಡಿರೋ ಅಮಿತಾಭ್ ಅವರು, ‘ಅಭಿಷೇಕ್ ಅವರ ನಟನೆ ಮರೆಯಲು ಸಾಧ್ಯವಿಲ್ಲ. ಅವರ ಎಲ್ಲಾ ಸಿನಿಮಾಗಳಿಗಿಂತ ಈ ಚಿತ್ರ ಭಿನ್ನವಾದುದು. ಕಲಾವಿದನ ನಿಜವಾದ ಮೌಲ್ಯ ಇದು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಐಶ್ವರ್ಯಾ ರೈಯಿಂದ ಸಲ್ಮಾನ್ ಖಾನ್​ವರೆಗೆ; ಜಾಹೀರಾತುಗಳಿಂದ ಬಣ್ಣದ ಬದುಕು ಆರಂಭಿಸಿದವರು..

ಈ ಸಿನಿಮಾದಲ್ಲಿ ಐಶ್ವರ್ಯಾ ಐಶ್ವರ್ಯಾ ರೈ ಕೂಡ ನಟಿಸಿದ್ದಾರೆ. ಮಾತಿಗೂ ಅಮಿತಾಭ್ ಅವರು ಐಶ್ವರ್ಯಾ ಬಗ್ಗೆ ಒಂದೇ ಒಂದು ಮೆಚ್ಚುಗೆಯ ಮಾತನ್ನು ಆಡಿಲ್ಲ ಎಂದು ಅನೇಕರು ಕಿಡಿಕಾರಿದ್ದಾರೆ. ಐಶ್ವರ್ಯಾ ಬಗ್ಗೆ ಅಸಮಾಧಾನ ಇದೆ ಅನ್ನೋದಕ್ಕೆ ಇದುವೇ ಸಾಕ್ಷಿ ಎಂದು ಕೆಲವರು ಹೇಳಿದ್ದಾರೆ.

ಈ ಮೊದಲು ಕೂಡ..

‘ಕಜರಾ ರೇ..’ ಸಾಂಗ್ ಸೂಪರ್ ಹಿಟ್ ಆಗಿತ್ತು. ಈ ಹಾಡಿನಲ್ಲಿ ಅಭಿಷೇಕ್ ಬಚ್ಚನ್, ಅಮಿತಾಭ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಸ್ಟೆಪ್ ಹಾಕಿದ್ದರು. ಈ ಹಾಡಿನಲ್ಲಿ ಸಾಕಷ್ಟು ಎನರ್ಜಿಯೊಂದಿಗೆ ಈ ಮೂವರು ಡ್ಯಾನ್ಸ್ ಮಾಡಿದ್ದರು. ಇದು ‘ಬಂಟಿ ಔರ್ ಬಬ್ಲಿ’ ಚಿತ್ರದ ಹಾಡು. ಈ ಸಿನಿಮಾ 2005ರ ಮೇ 27ರಂದು ರಿಲೀಸ್ ಆಗಿತ್ತು. ಈ ಚಿತ್ರ ಬಿಡುಗಡೆ ಆಗಿ 19 ವರ್ಷ ಕಳೆದ ಹಿನ್ನೆಲೆಯಲ್ಲಿ ಫ್ಯಾನ್ಸ್ ಈ ಚಿತ್ರವನ್ನು, ಸಿನಿಮಾದ ಹಾಡನ್ನು ನೆನಪಿಸಿಕೊಂಡಿದ್ದರು. ಈ ಸಂದರ್ಭದಲ್ಲೂ ಅಮಿತಾಭ್ ಅವರು ಐಶ್ವರ್ಯಾನ ನೆಗ್ಲೆಕ್ಟ್ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:02 pm, Thu, 20 June 24