ಅಮಿತಾಭ್ ಬಚ್ಚನ್ ಸಹೋದರ ಏನು ಮಾಡ್ತಿದ್ದಾರೆ ಗೊತ್ತಾ?

ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಸಹೋದರ ಅಜಿತಾಭ್ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಅವರ ತಂದೆ ನಿಧನದ ನಂತರ ಮತ್ತು ಅಮಿತಾಭ್ ರಾಜಕೀಯ ಪ್ರವೇಶಿಸಿದಾಗ ಇಬ್ಬರ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಯಿತು. ಅಜಿತಾಭ್ ಕುಟುಂಬ ವಿದೇಶದಲ್ಲಿ ವಾಸಿಸುತ್ತಿದೆ. ಜಯಾ ಬಚ್ಚನ್ ಮತ್ತು ಅಜಿತಾಭ್ ಪತ್ನಿ ರಮೋಲಾ ನಡುವೆಯೂ ಸಮಸ್ಯೆಗಳಿದ್ದವು.

ಅಮಿತಾಭ್ ಬಚ್ಚನ್ ಸಹೋದರ ಏನು ಮಾಡ್ತಿದ್ದಾರೆ ಗೊತ್ತಾ?
ಅಮಿತಾಭ್-ಅಜಿತಾಭ್
Edited By:

Updated on: Jan 13, 2026 | 7:55 AM

ಬಚ್ಚನ್ ಕುಟುಂಬ ತುಂಬಾನೇ ದೊಡ್ಡದು. ಮೆಗಾಸ್ಟಾರ್ ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಶ್ವೇತಾ ಬಚ್ಚನ್ ನಂದಾ, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ಹೆಸರು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಅಭಿಮಾನಿಗಳಲ್ಲಿ ಯಾವಾಗಲೂ ಚರ್ಚೆಯಲ್ಲಿರುತ್ತದೆ. ಅಮಿತಾಭ್ ಬಚ್ಚನ್ ಅವರ ಪೋಷಕರ ಬಗ್ಗೆಯೂ ಹೆಚ್ಚಾಗಿ ಚರ್ಚಿಸಲಾಗುತ್ತದೆ. ಆದರೆ ಬಿಗ್ ಬಿ ಸಹೋದರನ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಬಿಗ್ ಬಿ ಕೂಡ ತನ್ನ ಸಹೋದರನ ಹೆಸರನ್ನು ಎಂದಿಗೂ ಹೇಳೋದಿಲ್ಲ.

ಬಿಗ್ ಬಿ ಸಹೋದರನ ಹೆಸರು ಅಜಿತಾಬ್ ಬಚ್ಚನ್. ಅಮಿತಾಭ್ ಹೀಗೆ ಇರಲು ಅವರ ಸಹೋದರನ ದೊಡ್ಡ ಪಾತ್ರವಿದೆ. ಆದರೆ ಅವರ ತಂದೆಯ ಮರಣದ ನಂತರ, ಇಬ್ಬರು ಸಹೋದರರ ನಡುವಿನ ಅಂತರವು ಮತ್ತಷ್ಟು ಹೆಚ್ಚಾಯಿತು. ಜಯಾ ಬಚ್ಚನ್ ಅವರು ಅಜಿತಾಭ್ ಪತ್ನಿ ರಮೋಲಾ ಜೊತೆ ಜಗಳ ಆಡುತ್ತಿದ್ದರು.

ಅಜಿತಾಭ್ ಬಚ್ಚನ್ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದರು. ಅವರ ತಂದೆ ಹರಿವಂಶ್ ರಾಯ್ ಬಚ್ಚನ್ ಅವರ ಮರಣದ ನಂತರ, ಇಬ್ಬರು ಸಹೋದರರ ನಡುವೆ ಬಿರುಕು ಉತ್ತುಂಗಕ್ಕೇರಿತು. ‘ನಾನು ಕಳೆದ ಹಲವು ವರ್ಷಗಳಿಂದ ವಿದೇಶದಲ್ಲಿ ವಾಸಿಸುತ್ತಿದ್ದೇನೆ. ಅಮಿತಾಭ್ ತನ್ನ ತಂದೆಯನ್ನು ನೋಯಿಸಲು ಬಯಸಲಿಲ್ಲ. ಆದ್ದರಿಂದ ಅವರು ತಮ್ಮ ತಂದೆಗಾಗಿ ಒಟ್ಟಿಗೆ ಇರಲು ಪ್ರಯತ್ನಿಸಿದರು ಮತ್ತು ಒಟ್ಟಿಗೆ ಸಾಕಷ್ಟು ಸಮಯ ಕಳೆದರು’ ಎಂದು ಅಜಿತಾಭ್ ಈ ಮೊದಲು ಹೇಳಿದ್ದರು.

‘ಅಮಿತಾಭ್ ಬಚ್ಚನ್ ರಾಜಕೀಯ ಪ್ರವೇಶಿಸಿದಾಗ ಅವರೊಂದಿಗಿನ ಅಂತರ ಹೆಚ್ಚಾಯಿತು. ರಾಜಕೀಯಕ್ಕೆ ಸಂಬಂಧಿಸಿದ ಸ್ನೇಹಿತರು ಅಮಿತಾಭ್ ಜೀವನದಲ್ಲಿ ಬಂದರು’ ಎಂದಿದ್ದರು ಅವರು. ಅಜಿತಾಭ್ ಕುಟುಂಬದ ಬಗ್ಗೆ ಹೇಳುವುದಾದರೆ, ಅವರಿಗೆ ನಾಲ್ಕು ಮಕ್ಕಳಿದ್ದಾರೆ. ಅವರ ಮಕ್ಕಳ ಹೆಸರುಗಳು ನಯನಾ ಬಚ್ಚನ್, ಭೀಮ್ ಬಚ್ಚನ್, ನಿಲಿಮಾ ಬಚ್ಚನ್ ಮತ್ತು ನಮ್ರತಾ ಬಚ್ಚನ್. ಅಜಿತಾಭ್ ಅವರ ಇಡೀ ಕುಟುಂಬ ವಿದೇಶದಲ್ಲಿ ವಾಸಿಸುತ್ತಿದೆ.

ಇದನ್ನೂ ಓದಿ: ಮಗು ಹುಟ್ಟಿದ ತಕ್ಷಣ ಅಮಿತಾಭ್ ಬಚ್ಚನ್ ಅವರ ಸಿನಿಮಾ ನೋಡುವ ಹಳ್ಳಿ ಇದು

ಅಮಿತಾಭ್  ಅವರ ವಯಸ್ಸು ಈಗ 83. ಅವರು ಈಗಲೂ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ವಿವಿಧ ರೀತಿಯ ಸಿನಿಮಾಗಳನ್ನು ಒಪ್ಪಿಕೊಂಡು ಮಾಡುತ್ತಿದ್ದಾರೆ. ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮ ಹೋಸ್ಟ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.