AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗು ಹುಟ್ಟಿದ ತಕ್ಷಣ ಅಮಿತಾಭ್ ಬಚ್ಚನ್ ಅವರ ಸಿನಿಮಾ ನೋಡುವ ಹಳ್ಳಿ ಇದು

ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ಅವರ ಅಭಿಮಾನ ಸೀಮಿತವಲ್ಲ. ನಟ ಜೈದೀಪ್ ಅಹ್ಲಾವತ್ ಹಂಚಿಕೊಂಡ ಹೃದಯಸ್ಪರ್ಶಿ ಕಥೆ ಹೇಳಿದ್ದಾರೆ. ಅವರ ಹಳ್ಳಿಯಲ್ಲಿ ಮಗು ಜನಿಸಿದರೆ ಅಮಿತಾಭ್ ಬಚ್ಚನ್ ಚಿತ್ರಗಳನ್ನು ವೀಕ್ಷಿಸುವ ವಿಶಿಷ್ಟ ಸಂಪ್ರದಾಯವಿದೆ. ಜೈದೀಪ್ ಕೆಬಿಸಿಯಲ್ಲಿ ಈ ವಿಷಯ ತಿಳಿಸಿದಾಗ ಬಿಗ್ ಬಿ ಭಾವುಕರಾದರು.

ಮಗು ಹುಟ್ಟಿದ ತಕ್ಷಣ ಅಮಿತಾಭ್ ಬಚ್ಚನ್ ಅವರ ಸಿನಿಮಾ ನೋಡುವ ಹಳ್ಳಿ ಇದು
ಜೈದೀಪ್-ಅಮಿತಾಭ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 21, 2025 | 10:23 AM

Share

ಬಾಲಿವುಡ್‌ನಲ್ಲಿ ಅಮಿತಾಭ್ ಬಚ್ಚನ್ (Amitabh Bachchan) ಓರ್ವ ಸೂಪರ್‌ಸ್ಟಾರ್. ಅವರನ್ನು ಬಿಗ್ ಬಿ ಎಂದೂ ಕರೆಯುತ್ತಾರೆ. ಅಮಿತಾಭ್ ಬಚ್ಚನ್ ಅವರ ಚಿತ್ರಗಳನ್ನು ಇಷ್ಟಪಡದ ವ್ಯಕ್ತಿ ಯಾರೂ ಇಲ್ಲ. ಮಗು ಜನಿಸಿದ ತಕ್ಷಣ ಅಮಿತಾಭ್ ಬಚ್ಚನ್ ಅವರ ಸಿನಿಮಾಗಳನ್ನು ನೋಡುವ ಒಂದು ಹಳ್ಳಿ ಇದೆ.ಈ ಬಗ್ಗೆ ಅಮಿತಾಭ್ ಬಚ್ಚನ್ ಅವರಿಗೆ ತಿಳಿದಾಗ ಅವರು ತುಂಬಾ ಭಾವುಕರಾದರು. ಆ ಬಗ್ಗೆ ಇಲ್ಲಿದೆ ವಿವರ.

ಈ ಗ್ರಾಮ ಬಾಲಿವುಡ್ ನಟ ಜೈದೀಪ್ ಅಹ್ಲಾವತ್ ಅವರದ್ದು. ಅವರ ಗ್ರಾಮದಲ್ಲಿ ಮಗು ಜನಿಸಿದಾಗ, ಅಲ್ಲಿನ ಜನರು ಅಮಿತಾಭ್ ಬಚ್ಚನ್ ಅವರ ಚಿತ್ರವನ್ನು ನೋಡುತ್ತಿದ್ದರು. ಮಗುವಿನ ಜನನದ ಸಂತೋಷವು ಅಮಿತಾಭ್ ಬಚ್ಚನ್ ಅವರ ಚಿತ್ರವನ್ನು ನೋಡದೆ ಪೂರ್ಣಗೊಳ್ಳುವುದಿಲ್ಲ ಎಂದು ಅಹ್ಲಾವತ್ ಹೇಳಿದರು. ಜೈದೀಪ್ ಅಹ್ಲಾವತ್ ‘ಕೌನ್ ಬನೇಗಾ ಕರೋಡ್‌ಪತಿ’ ಸೆಟ್‌ಗೆ ಬಂದಾಗ, ಅವರು ಅಮಿತಾಭ್ ಬಚ್ಚನ್ ಅವರೊಂದಿಗೆ ಮಾತನಾಡುವಾಗ ಈ ಘಟನೆ ಹಂಚಿಕೊಂಡರು.

‘ನನ್ನ ಬಾಲ್ಯದಲ್ಲಿದ್ದಾಗ ಯಾರಿಗಾದರೂ ಮಗು ಜನಿಸಿದಾಗ, ಇಡೀ ಹಳ್ಳಿಯೇ ಸಂತೋಷವನ್ನು ಆಚರಿಸುತ್ತಿತ್ತು. ಅಮಿತಾಭ್ ಬಚ್ಚನ್ ಅವರ ಚಿತ್ರವನ್ನು ನೋಡದೆ ಈ ಆಚರಣೆ ಪೂರ್ಣಗೊಳ್ಳುತ್ತಿರಲಿಲ್ಲ. ಜಂಜೀರ್ ಮತ್ತು ಡಾನ್ ನಂತಹ ಚಲನಚಿತ್ರಗಳನ್ನು ಬಹಳ ಆಸಕ್ತಿಯಿಂದ ವೀಕ್ಷಿಸಲಾಗುತ್ತಿತ್ತು, ಈ ಕಾರಣಕ್ಕಾಗಿ ನಾನು ಅಮಿತಾಭ್ ಅವರ ಅನೇಕ ಚಲನಚಿತ್ರಗಳನ್ನು ನೂರಕ್ಕೂ ಹೆಚ್ಚು ಬಾರಿ ನೋಡಿದ್ದೇನೆ’ ಎಂದಿದ್ದಾರೆ ಅವರು.

‘ಶೋಲೆ ಚಿತ್ರದ ಆಡಿಯೋ ಕ್ಯಾಸೆಟ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿತ್ತು. ಬಾಲ್ಯದಲ್ಲಿ ಹೋಳಿ ಮತ್ತು ದೀಪಾವಳಿಯಂತಹ ದೊಡ್ಡ ಹಬ್ಬಗಳು ಬಂದಾಗ. ನಾವೆಲ್ಲರೂ ಒಟ್ಟಿಗೆ ಸೇರುತ್ತಿದ್ದೆವು ಮತ್ತು ಶೋಲೆ ಚಿತ್ರದ ಆಡಿಯೋ ಕ್ಯಾಸೆಟ್ ಅನ್ನು ಪ್ಲೇ ಮಾಡಲಾಗುತ್ತಿತ್ತು. ಇಡೀ ಹಳ್ಳಿಯೇ ಈ ಕ್ಯಾಸೆಟ್ ಅನ್ನು ಬಹಳ ಆಸಕ್ತಿಯಿಂದ ಕೇಳುತ್ತಿತ್ತು’ ಎಂದು ಅಹ್ಲಾವತ್ ಈ ಸಂದರ್ಭದಲ್ಲಿ ಹೇಳಿದರು.

ಇದನ್ನೂ ಓದಿ: ‘ರಾಜ್​ಕುಮಾರ್ ಆಶೀರ್ವಾದ ನಾನೇ ಧನ್ಯ’; ಅಣ್ಣಾವ್ರ ಬಗ್ಗೆ ಅಮಿತಾಭ್ ಬಚ್ಚನ್ ಮೆಚ್ಚುಗೆಯ ಮಾತು

ಜೈದೀಪ್ ಅಹ್ಲಾವತ್ ಹೇಳಿದ ಈ ಕಥೆಯನ್ನು ಕೇಳಿ ಅಮಿತಾಭ್ ಬಚ್ಚನ್ ಭಾವುಕರಾದರು. ಇದರ ಜೊತೆಗೆ, ಜೈದೀಪ್ ಈ ಸಂದರ್ಭದಲ್ಲಿ ಇತರ ಕೆಲವು ಕಥೆಗಳನ್ನು ಸಹ ಹೇಳಿದರು. ಜೈದೀಪ್ ವಿಲನ್ ಆಗಿ ಕಾಣಿಸಿಕೊಮಡ ‘ಫ್ಯಾಮಿಲಿ ಮ್ಯಾನ್ 3’ ಇಂದಿನಿಂದ ಅಮೇಜಾನ್ ಪ್ರೈಮ್​ನಲ್ಲಿ ಪ್ರಸಾರ ಆರಂಭಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.