ನಟ ಅಮಿತಾಭ್ ಬಚ್ಚನ್ ಅವರು 120 ಕೋಟಿ ರೂಪಾಯಿ ತೆರಿಗೆ ಪಾವತಿಸಿದ ವಿಚಾರ ಸಾಕಷ್ಟು ಸುದ್ದಿ ಆಗುತ್ತಿದೆ. ಅಮಿತಾಭ್ ಬಚ್ಚನ್ (Amitabh Bachchan) ಅವರ ವರ್ಷದ ಆದಾಯ ಎಷ್ಟಿರಬಹುದು ಎನ್ನುವ ಚರ್ಚೆಗಳು ನಡೆಯುತ್ತಿವೆ. ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ. ಇದರ ಜೊತೆ ಅವರು ಒಂದು ದಿನದ ಆದಾಯ ಸುಮಾರು ಒಂದು ಕೋಟಿ ರೂಪಾಯಿನಷ್ಟಿದೆ. ಅವರು ಇಷ್ಟೆಲ್ಲ ಗಳಿಕೆ ಮಾಡಲು ಕಾರಣ ಆಗಿದ್ದು ಆ ಒಂದು ಪ್ರಾಜೆಕ್ಟ್ ಎನ್ನಲಾಗುತ್ತಿದೆ.
ಅಮಿತಾಭ್ ಬಚ್ಚನ್ ಅವರು ಭಾರತೀಯ ಚಿತ್ರರಂಗದ ದುಬಾರಿ ನಟರಲ್ಲಿ ಒಬ್ಬರು. ಅವರಿಗೆ 82 ವಸಂತಗಳು ಕಳೆದಿದ್ದು, 83ನೇ ವರ್ಷ ನಡೆಯುತ್ತಿದೆ. ಅವರು 2024-25ನೇ ಆರ್ಥಿಕ ಸಾಲಿನಲ್ಲಿ ಬರೋಬ್ಬರಿ 120 ಕೋಟಿ ರೂಪಾಯಿ ತೆರಿಗೆ ಪಾವತಿ ಮಾಡಿದ್ದಾರೆ. ಈ ಮೂಲಕ ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿ ಮಾಡಿದ ಹೀರೋ ಎನಿಸಿಕೊಂಡಿದ್ದಾರೆ.
T 5321 – Abhishek you being honoured in Tashkent .. the love of the people there for you singing your songs .. a very proud moment for me as a father .. and now trending on number 1 for your latest be happy .. all blessings and love .. @juniorbachchan graces the… pic.twitter.com/P5pFXEuOSA
— Amitabh Bachchan (@SrBachchan) March 18, 2025
ಅಮಿತಾಭ್ ಬಚ್ಚನ್ ಅವರು ಈ ಆರ್ಥಿಕ ಸಾಲಿನಲ್ಲಿ ಬರೋಬ್ಬರಿ 350 ಕೋಟಿ ರೂಪಾಯಿ ಗಳಿಕೆ ಮಾಡಿದ್ದಾರೆ. ಅಂದರೆ ಒಂದು ದಿನಕ್ಕೆ ಅವರ ಆದಾಯ ಬರೋಬ್ಬರಿ 95 ಲಕ್ಷ ರೂಪಾಯಿ. ಇಷ್ಟು ದೊಡ್ಡ ಮೊತ್ತದಲ್ಲಿ ಅವರು ಗಳಿಕೆ ಮಾಡಿರುವುದರಿಂದಲೇ ಅವರು 120 ಕೋಟಿ ರೂಪಾಯಿ ತೆರಿಗೆ ಪಾವತಿ ಮಾಡಿದ್ದಾರೆ.
ಇದನ್ನೂ ಓದಿ: 120 ಕೋಟಿ ರೂ. ತೆರಿಗೆ ಪಾವತಿಸಿದ ಅಮಿತಾಭ್ ಬಚ್ಚನ್; ಹಾಗಾದ್ರೆ ಆದಾಯ ಎಷ್ಟು?
‘ಕೌನ್ ಬನೇಗಾ ಕರೋಡ್ಪತಿ 16’ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಇದಕ್ಕೆ ಅವರು ಪ್ರತಿ ಎಪಿಸೋಡ್‌ಗೆ ತೆಗೆದುಕೊಂಡಿದ್ದು ಬರೋಬ್ಬರಿ 5 ಕೋಟಿ ರೂಪಾಯಿ. ಈ ಮೂಲಕ ಅವರು ಭಾರತದ ದುಬಾರಿ ಹೋಸ್ಟ್ ಎನಿಸಿಕೊಂಡಿದ್ದಾರೆ. ಇದರಿಂದಾಗಿಯೇ ಅವರ ಗಳಿಕೆ ಹೆಚ್ಚಿದೆ. ಇದರ ಜೊತೆಗೆ ಅವರು ಸಿನಿಮಾ ಗಳಿಕೆ, ಬ್ರ್ಯಾಂಡ್ಗಳ ಪ್ರಚಾರಗಳಿಂದ ಹಣ ಮಾಡುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:55 am, Wed, 19 March 25