Ananya Panday: ಬಿಕಿನಿ ಧರಿಸಿ ಪೋಸ್​ ನೀಡಿದ ಅನನ್ಯಾ ಪಾಂಡೆ; ನೈಟ್​ ಮ್ಯಾನೇಜರ್ ಎಲ್ಲಿ ಎಂದು ಕೇಳಿದ ನೆಟ್ಟಿಗರು

|

Updated on: Jul 23, 2023 | 10:42 AM

Aditya Roy Kapur: ಅನೇಕ ದಿನಗಳಿಂದ ಆದಿತ್ಯ ರಾಯ್​ ಕಪೂರ್​ ಮತ್ತು ಅನನ್ಯಾ ಪಾಂಡೆ ಅವರು ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ದಿನದಿಂದ ದಿನಕ್ಕೆ ಈ ಪ್ರೇಮಿಗಳ ನಡುವಿನ ಆಪ್ತತೆ ಹೆಚ್ಚಾಗುತ್ತಿದೆ.

Ananya Panday: ಬಿಕಿನಿ ಧರಿಸಿ ಪೋಸ್​ ನೀಡಿದ ಅನನ್ಯಾ ಪಾಂಡೆ; ನೈಟ್​ ಮ್ಯಾನೇಜರ್ ಎಲ್ಲಿ ಎಂದು ಕೇಳಿದ ನೆಟ್ಟಿಗರು
ಅನನ್ಯಾ ಪಾಂಡೆ
Follow us on

ಬಾಲಿವುಡ್​ ನಟಿ ಅನನ್ಯಾ ಪಾಂಡೆ (Ananya Panday) ಅವರು ವಿದೇಶಕ್ಕೆ ತೆರಳಿದ್ದಾರೆ. ಪ್ರವಾಸದಲ್ಲಿ ಎಂಜಾಯ್​ ಮಾಡುತ್ತಿದ್ದಾರೆ. ಅಲ್ಲಿನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಿಕಿನಿ (Bikini) ಧರಿಸಿ ಅವರು ಫೋಟೋ ಕ್ಲಿಕ್ಕಿಸಿಕೊಂಡಿರುವುದು ಅಭಿಮಾನಿಗಳ ಕಣ್ಣು ಕುಕ್ಕಿದೆ. ಅಷ್ಟೇ ಅಲ್ಲ, ಈ ಫೋಟೋ ತೆಗೆದಿದ್ದು ಆದಿತ್ಯ ರಾಯ್​ ಕಪೂರ್​ (Aditya Roy Kapur) ಎಂದು ಕೆಲವರು ಊಹಿಸಿದ್ದಾರೆ. ‘ನೈಟ್​ ಮ್ಯಾನೇಜರ್​ ಎಲ್ಲಿ’ ಎಂದು ಅನೇಕರು ಕಮೆಂಟ್​ ಮಾಡುತ್ತಿದ್ದಾರೆ. ಇವುಗಳಿಗೆ ಅನನ್ಯಾ ಪಾಂಡೆ ಇನ್ನಷ್ಟೇ ಉತ್ತರ ನೀಡಿಬೇಕಿದೆ. ಸದ್ಯಕ್ಕೆ ಈ ಫೋಟೋಗಳು ವೈರಲ್​ ಆಗಿವೆ. ಆದಿತ್ಯ ರಾಯ್​ ಕಪೂರ್​ ಮತ್ತು ಅನನ್ಯಾ ಪಾಂಡೆ ಅವರು ಜೊತೆಯಾಗಿ ಫಾರಿನ್​ ಟ್ರಿಪ್​ ಮಾಡುತ್ತಿದ್ದಾರೆ. ಆದರೆ ಆ ಸತ್ಯವನ್ನು ಈ ಜೋಡಿ ಹಕ್ಕಿಗಳು ಒಪ್ಪಿಕೊಂಡಿಲ್ಲ.

ಅನೇಕ ದಿನಗಳಿಂದ ಆದಿತ್ಯ ರಾಯ್​ ಕಪೂರ್​ ಮತ್ತು ಅನನ್ಯಾ ಪಾಂಡೆ ಅವರು ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ದಿನದಿಂದ ದಿನಕ್ಕೆ ಈ ಪ್ರೇಮಿಗಳ ನಡುವಿನ ಆಪ್ತತೆ ಹೆಚ್ಚಾಗುತ್ತಿದೆ. ‘ನೈಟ್​ ಮ್ಯಾನೇಜರ್​’ ವೆಬ್​ ಸಿರೀಸ್​ನಲ್ಲಿ ನಟಿಸಿದ ಆದಿತ್ಯ ರಾಯ್​ ಕಪೂರ್​ ಅವರಿಗೆ ಜನಪ್ರಿಯತೆ ಹೆಚ್ಚಿದೆ. ಆ ಕಾರಣದಿಂದ ಕಮೆಂಟ್​ ಬಾಕ್ಸ್​ನಲ್ಲಿ ಅವರನ್ನು ನೈಟ್​ ಮ್ಯಾನೇಜರ್​ ಎಂದೇ ಜನರು ಕರೆಯುತ್ತಿದ್ದಾರೆ.

ಬಾಲಿವುಡ್​ನ ಪ್ರಸಿದ್ಧ ನಟ ಚಂಕಿ ಪಾಂಡೆ ಅವರ ಪುತ್ರಿ ಅನನ್ಯಾ ಪಾಂಡೆ. ಫಿಲ್ಮಿ ಕುಟುಂಬದಿಂದ ಬಂದ ನಟಿ ಎಂಬ ಕಾರಣಕ್ಕೆ ಅನನ್ಯಾ ಪಾಂಡೆಗೆ ಸುಲಭವಾಗಿ ಸಿನಿಮಾದ ಅವಕಾಶಗಳು ಸಿಕ್ಕವು. ನೆಪೋಟಿಸಂ ಮೂಲಕ ಅವಕಾಶ ಪಡೆದುಕೊಂಡ ನಟಿ ಎಂದು ಎಲ್ಲರೂ ಟ್ರೋಲ್​ ಮಾಡುತ್ತಾರೆ. ಆದರೆ ಅಂಥ ಮಾತುಗಳ ಬಗ್ಗೆ ಅನನ್ಯಾ ಪಾಂಡೆ ಅವರು ತಲೆ ಕೆಡಿಸಿಕೊಂಡಿಲ್ಲ. ವಿಜಯ್​ ದೇವರಕೊಂಡ ನಾಯಕತ್ವದ ‘ಲೈಗರ್​’ ಸಿನಿಮಾದಲ್ಲಿ ಅನನ್ಯಾ ನಟಿಸಿದ್ದರು. ಆದರೆ ಆ ಸಿನಿಮಾ ಹೀನಾಯವಾಗಿ ಸೋತಿತು. ಆ ಚಿಂತೆ ಮರೆತು ಅವರೀಗ ಬಾಯ್​ಫ್ರೆಂಡ್​ ಜೊತೆ ಸುತ್ತಾಡುತ್ತಿದ್ದಾರೆ.

ಇದನ್ನೂ ಓದಿ: Ananya Pandey: ವಿಕೇಂಡ್​ ಜಾಲಿ ಮೂಡ್​​ನಲ್ಲಿ ಅನನ್ಯಾ ಪಾಂಡೆ, ಇಲ್ಲಿದೆ ಫೋಟೋ

ಆದಿತ್ಯ ರಾಯ್​ ಕಪೂರ್​ ಅವರು ಹಿಂದಿ ಚಿತ್ರರಂಗದಲ್ಲಿ ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ‘ಆಶಿಕಿ 2’ ಚಿತ್ರದಿಂದ ಅವರು ಹೆಚ್ಚು ಜನಪ್ರಿಯತೆ ಪಡೆದರು. ಈಗ ‘ದಿ ನೈಟ್​ ಮ್ಯಾನೇಜರ್​’ ವೆಬ್​ ಸಿರೀಸ್​ನಲ್ಲಿನ ಅವರ ನಟನೆ ಗಮನ ಸೆಳೆದಿದೆ. ಅನನ್ಯಾ ಪಾಂಡೆ ಜೊತೆಗಿನ ತಮ್ಮ ರಿಲೇಷನ್​ಶಿಪ್​ ಬಗ್ಗೆ ಅದಿತ್ಯ ರಾಯ್​ ಕಪೂರ್​ ಅವರು ಬಹಿರಂಗವಾಗಿ ಒಪ್ಪಿಕೊಳ್ಳುವುದು ಬಾಕಿ ಇದೆ.

ಇದನ್ನೂ ಓದಿ: ‘ಲೈಗರ್’ ಸೋಲಿನ ಬಳಿಕ ಏನ್​ ಮಾಡ್ತಿದ್ದಾರೆ ನಟಿ ಅನನ್ಯಾ ಪಾಂಡೆ?

ಕೆಲವೇ ದಿನಗಳ ಹಿಂದೆ ಸ್ಪೇನ್​ನಲ್ಲಿ ನಡೆದ ಒಂದು ಸಂಗೀತ ಕಾರ್ಯಕ್ರಮಕ್ಕೆ ಆದಿತ್ಯ ರಾಯ್​ ಕಪೂರ್​ ಅವರು ಹಾಜರಿ ಹಾಕಿದ್ದರು. ಸೋಶಿಯಲ್​ ಮೀಡಿಯಾದಲ್ಲಿ ಅನನ್ಯಾ ಪಾಂಡೆ ಮತ್ತು ಆದಿತ್ಯ ರಾಯ್​ ಕಪೂರ್​ ಅವರು ಪ್ರತ್ಯೇಕ ಸ್ಟೋರಿಗಳನ್ನು ಅಪ್​ಲೋಡ್​ ಮಾಡಿಕೊಂಡಿದ್ದರು. ಆದರೆ ಇಬ್ಬರ ಸ್ಟೋರಿಯಲ್ಲೂ ಸಾಮ್ಯತೆ ಇದ್ದಿದ್ದರಿಂದ ಅವರು ಒಂದೇ ಸ್ಥಳದಲ್ಲಿ ಇದ್ದಾರೆ ಎಂಬುದು ಅಭಿಮಾನಿಗಳಿಗೆ ಸ್ಪಷ್ಟವಾಯಿತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.