ಸಂಬಂಧಿಯ ಮದುವೆಯಲ್ಲಿ ಧಮ್ ಹೊಡೆಯುತ್ತಾ ನಿಂತ ಅನನ್ಯಾ ಪಾಂಡೆ; ಬಾಯಿಗೆ ಬಂದಂತೆ ಬೈಸಿಕೊಂಡ ನಟಿ

ಜನರು ಗುಂಪುಗುಂಪಾಗಿ ನಿಂತು ಮದುವೆ ಕಾರ್ಯಗಳಲ್ಲಿ ಬ್ಯುಸಿ ಇದ್ದರೆ, ಅನನ್ಯಾ ಮಾತ್ರ ಸಿಗರೇಟ್ ಸೇದುತ್ತಾ ನಿಂತಿದ್ದರು. ಈ ಫೋಟೋ ವೈರಲ್ ಆಗಿದೆ.

ಸಂಬಂಧಿಯ ಮದುವೆಯಲ್ಲಿ ಧಮ್ ಹೊಡೆಯುತ್ತಾ ನಿಂತ ಅನನ್ಯಾ ಪಾಂಡೆ; ಬಾಯಿಗೆ ಬಂದಂತೆ ಬೈಸಿಕೊಂಡ ನಟಿ
ಅನನ್ಯಾ ಪಾಂಡೆ
Follow us
ರಾಜೇಶ್ ದುಗ್ಗುಮನೆ
|

Updated on: Mar 15, 2023 | 11:02 AM

ಸೆಲೆಬ್ರಿಟಿಗಳು ಯಾವುದೇ ಕೆಲಸ ಮಾಡುವಾಗ ತುಂಬಾನೇ ಎಚ್ಚರಿಕೆಯಿಂದ ಇರಬೇಕು. ಅವರನ್ನು ಕ್ಯಾಮೆರಾಗಳು ಹಾಗೂ ಫ್ಯಾನ್ಸ್ ಗಮನಿಸುತ್ತಾ ಇರುತ್ತಾರೆ. ಸ್ವಲ್ಪ ಹೆಚ್ಚು ಕಡಿಮೆ ಆದರೂ ಟ್ರೋಲ್ ಆಗಬೇಕಾಗುತ್ತದೆ. ತಂಬಾಕು, ಮದ್ಯದ ವಿಚಾರಗಳಲ್ಲಂತೂ ಹೆಚ್ಚು ಎಚ್ಚರಿಕೆ ಬೇಕು. ಈಗ ನಟಿ ಅನನ್ಯಾ ಪಾಂಡೆ (Ananya Panday) ಅವರು ಸಿಗರೇಟ್ (Cigarate) ಸೇದಿ ಸಿಕ್ಕಿ ಬಿದ್ದಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅವರಿಗೆ ಬಾಯಿಗೆ ಬಂದಂತೆ ಬೈದು ಟ್ರೋಲ್ ಮಾಡಿದ್ದಾರೆ.

ಅನನ್ಯಾ ಪಾಂಡೆ ಸಂಬಂಧಿ ಅಲನಾ ಪಾಂಡೆ ಅವರು ಮದುವೆ ಆಗುತ್ತಿದ್ದಾರೆ. ಮಂಗಳವಾರ (ಮಾರ್ಚ್ 14) ಮೆಹೆಂದಿ ಕಾರ್ಯಗಳು ನಡೆದಿವೆ. ಮದುವೆಯಲ್ಲಿ ಭಾಗಿಯಾದ ವ್ಯಕ್ತಿಯೋರ್ವ ಅಲ್ಲಿನ ವಾತಾವರಣ ಹೇಗಿದೆ ಎಂಬುದನ್ನು ತೋರಿಸಲು ಫೋಟೋ ಕ್ಲಿಕ್ ಮಾಡಿ ಶೇರ್ ಮಾಡಿಕೊಂಡಿದ್ದರು. ಜನರು ಗುಂಪುಗುಂಪಾಗಿ ನಿಂತು ಮದುವೆ ಕಾರ್ಯಗಳಲ್ಲಿ ಬ್ಯುಸಿ ಇದ್ದರೆ, ಅನನ್ಯಾ ಮಾತ್ರ ಸಿಗರೇಟ್ ಸೇದುತ್ತಾ ನಿಂತಿದ್ದರು. ಈ ಫೋಟೋ ವೈರಲ್ ಆದ ಬೆನ್ನಲ್ಲೇ ಇದನ್ನು ಡಿಲೀಟ್ ಮಾಡಲಾಗಿದೆ. ಆದರೆ, ಫ್ಯಾನ್ಸ್ ಆಗಲೇ ಈ ಸ್ಟೇಟಸ್​ನ ಸ್ಕ್ರೀನ್​ಶಾಟ್ ತೆಗೆದಿಟ್ಟುಕೊಂಡಿದ್ದರು. ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋ ಹಲ್​ಚಲ್​ ಎಬ್ಬಿಸಿದೆ.

ಇದನ್ನೂ ಓದಿ: ‘ಸ್ಕ್ರೀನ್ ಫ್ಲ್ಯಾಟ್ ಆಗಿದೆ ಎಂದು ಟೀಕಿಸುತ್ತಿದ್ದರು’; ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದ ಅನನ್ಯಾ ಪಾಂಡೆ

ಇದನ್ನೂ ಓದಿ
Image
ಗುಳಿಕೆನ್ನೆ ಸುಂದರಿ ಆಲಿಯಾ ಭಟ್; ಇಲ್ಲಿದೆ ಬರ್ತ್​ಡೇ ಗರ್ಲ್​​ನ ಸುಂದರ ಫೋಟೋಸ್
Image
‘ಸ್ಕ್ರೀನ್ ಫ್ಲ್ಯಾಟ್ ಆಗಿದೆ ಎಂದು ಟೀಕಿಸುತ್ತಿದ್ದರು’; ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದ ಅನನ್ಯಾ ಪಾಂಡೆ
Image
‘ಮೇಡಂ ಕೆಳಗಿನ ಬಟ್ಟೆ ಎಲ್ಲಿ?’ ಹಾಟ್ ಫೋಟೋಶೂಟ್ ಮಾಡಿಸಿ ಟ್ರೋಲ್ ಆದ ನಟಿ ಅನನ್ಯಾ ಪಾಂಡೆ

‘ಅನನ್ಯಾ ಪಾಂಡೆ ಒಳ್ಳೆಯ ನಟಿಯಲ್ಲ ಎಂಬುದು ಗೊತ್ತಿತ್ತು. ಆದರೆ, ಸ್ಮೋಕರ್ ಅನ್ನೋದು ಗೊತ್ತಿರಲಿಲ್ಲ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಅನನ್ಯಾಗೆ ಛೀಮಾರಿ ಹಾಕಿದ್ದಾರೆ. ‘ಎಲ್ಲರೂ ಮದುವೆ ಸಂಭ್ರಮದಲ್ಲಿ ಬ್ಯುಸಿ ಆದರೆ ನಮ್ಮ ಅನನ್ಯಾ ಪಾಂಡೆ ಮಾತ್ರ ಸಿಗರೇಟ್ ಸೇದುವುದರಲ್ಲಿ ಬ್ಯುಸಿ ಇದ್ದರು’ ಎಂದು ಟೀಕೆ ಮಾಡಿದ್ದಾರೆ. ‘ಅನನ್ಯಾ ಪಾಂಡೆ ನೋಡೋಕೆ ಅಷ್ಟೇ ಸೈಲೆಂಟ್​. ಈ ರೀತಿ ಸಿಗರೇಟ್​ಗೆ ಅಡಿಕ್ಟ್ ಆಗಿದ್ದಾರೆಂದು ಗೊತ್ತಿರಲಿಲ್ಲ. ಪಾಪ ಎಷ್ಟಂದರೂ ಸ್ಟ್ರಗಲ್ ಮಾಡಿ ಬಂದವರಲ್ಲವೇ’ ಎನ್ನುವ ಕಮೆಂಟ್ ಕೂಡ ಬಂದಿದೆ. ಈ ಫೋಟೋದಿಂದ ಅನನ್ಯಾ ಸಾಕಷ್ಟು ಟ್ರೋಲ್ ಆಗಿದ್ದಾರೆ.

ಇದನ್ನೂ ಓದಿ: ‘ಮೇಡಂ ಕೆಳಗಿನ ಬಟ್ಟೆ ಎಲ್ಲಿ?’ ಹಾಟ್ ಫೋಟೋಶೂಟ್ ಮಾಡಿಸಿ ಟ್ರೋಲ್ ಆದ ನಟಿ ಅನನ್ಯಾ ಪಾಂಡೆ

ಸ್ಟಾರ್ ಕಿಡ್​ ಆದ ಕಾರಣ ಅನನ್ಯಾ ಪಾಂಡೆಗೆ ಬಾಲಿವುಡ್​ನಲ್ಲಿ ಅನಾಯಾಸವಾಗಿ ಅವಕಾಶ ಸಿಕ್ಕವು. ಆದರೆ, ಯಶಸ್ಸು ಮಾತ್ರ ಸಿಕ್ಕಿಲ್ಲ. ಸಂದರ್ಶನ ಒಂದರಲ್ಲಿ ಮಾತನಾಡುತ್ತಾ ಅನನ್ಯಾ ಪಾಂಡೆ ಅವರು ‘ನಾನು ತುಂಬಾನೇ ಸ್ಟ್ರಗಲ್ ಮಾಡಿದ್ದೆ’ ಎಂದು ಹೇಳಿಕೊಂಡಿದ್ದರು. ಇದರಿಂದ ಅವರು ಸಾಕಷ್ಟು ಟೀಕೆಗೆ ಒಳಗಾಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ