ನಟ ರಣಬೀರ್ ಕಪೂರ್ (Ranbir Kapoor) ಅವರು ‘ಅನಿಮಲ್’ ಸಿನಿಮಾದಿಂದ ದೊಡ್ಡ ಗೆಲುವು ಕಂಡಿದ್ದಾರೆ. ಡಿಸೆಂಬರ್ 1ರಂದು ಬಿಡುಗಡೆ ಆದ ಈ ಸಿನಿಮಾ ಭರ್ಜರಿಯಾಗಿ ಅಬ್ಬರಿಸಿದೆ. ಈ ವರ್ಷದ ಬ್ಲಾಕ್ ಬಸ್ಟರ್ ಹಿಟ್ ಎನಿಸಿಕೊಂಡ ಸಿನಿಮಾಗಳ ಪಟ್ಟಿಯಲ್ಲಿ ‘ಅನಿಮಲ್’ ಚಿತ್ರ (Animal Movie) ಕೂಡ ಸ್ಥಾನ ಪಡೆದುಕೊಂಡಿದೆ. ಆದರೆ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಲು ಈ ಚಿತ್ರಕ್ಕೆ ಸಾಧ್ಯವಾಗಿಲ್ಲ. ಇನ್ನು ಎರಡೇ ದಿನಗಳಲ್ಲಿ ಈ ಸಿನಿಮಾದ ಹವಾ ಬಹುತೇಕ ಕಡಿಮೆ ಆಗಲಿದೆ. ‘ಡಂಕಿ’ ಮತ್ತು ‘ಸಲಾರ್’ ಸಿನಿಮಾಗಳು ಬಿಡುಗಡೆಯಾದರೆ ‘ಅನಿಮಲ್’ ಕಲೆಕ್ಷನ್ (Animal Box Office Collection) ಗಣನೀಯವಾಗಿ ಕುಸಿಯಲಿದೆ.
17 ದಿನಕ್ಕೆ ಭಾರತದ ಬಾಕ್ಸ್ ಆಫೀಸ್ನಲ್ಲಿ ‘ಅನಿಮಲ್’ ಸಿನಿಮಾ ಬರೋಬ್ಬರಿ 517 ಕೋಟಿ ರೂಪಾಯಿ ಗಳಿಸಿದೆ. ವಿಶ್ವಾದ್ಯಂತ ಈ ಚಿತ್ರಕ್ಕೆ ಆಗಿರುವುದು 853 ಕೋಟಿ ರೂಪಾಯಿ ಕಲೆಕ್ಷನ್. ಸಾವಿರ ಕೋಟಿ ರೂಪಾಯಿ ಗಡಿ ಮುಟ್ಟಬೇಕು ಎಂದರೆ ಇನ್ನೂ ಅನೇಕ ದಿನಗಳ ಕಾಲ ಪ್ರದರ್ಶನ ಕಾಣಬೇಕು. ಆದರೆ ಈಗ ‘ಡಂಕಿ’ ಮತ್ತು ‘ಸಲಾರ್’ ಸಿನಿಮಾ ಚಿತ್ರಮಂದಿರಗಳನ್ನು ಆಕ್ರಮಿಸಿಕೊಳ್ಳುವುದರಿಂದ ‘ಅನಿಮಲ್’ ಚಿತ್ರಕ್ಕೆ ಶೋಗಳ ಸಂಖ್ಯೆ ಕಡಿಮೆ ಆಗಲಿದೆ.
ಇದನ್ನೂ ಓದಿ: ‘ಅನಿಮಲ್’ ಸೂಪರ್ ಹಿಟ್ ಆದ ಬಳಿಕ ಹೆಚ್ಚಿದೆ ಬಾಬಿ ಡಿಯೋಲ್ ಬೇಡಿಕೆ
‘ಅನಿಮಲ್’ ಸಿನಿಮಾದಲ್ಲಿ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅವರು ಜೋಡಿಯಾಗಿ ನಟಿಸಿದ್ದಾರೆ. ಶಕ್ತಿ ಕಪೂರ್, ತೃಪ್ತಿ ದಿಮ್ರಿ, ಬಾಬಿ ಡಿಯೋಲ್ ಮುಂತಾದವರು ಇನ್ನುಳಿದ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಈ ಸಿನಿಮಾಗೆ ವಿಮರ್ಶಕರಿಂದ ಟೀಕೆ ವ್ಯಕ್ತವಾಗಿದೆ. ಆದರೂ ಕೂಡ ಸಿನಿಮಾ ಸೂಪರ್ ಹಿಟ್ ಆಗಿದೆ.
ಇದನ್ನೂ ಓದಿ: ಚಿತ್ರರಂಗಕ್ಕೆ ಕಾಲಿಡಲಿರುವ ಬಾಬಿ ಡಿಯೋಲ್ ಮಕ್ಕಳು; ಆದರೆ ಒಂದು ಷರತ್ತು ಹಾಕಿದ ‘ಅನಿಮಲ್’ ನಟ
2023ರಲ್ಲಿ ತೆರೆಕಂಡ ‘ಜವಾನ್’ ಮತ್ತು ‘ಪಠಾಣ್’ ಸಿನಿಮಾಗಳು ವಿಶ್ವ ಬಾಕ್ಸ್ ಆಫೀಸ್ನಲ್ಲಿ ಸಾವಿರ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿವೆ. 2022ರಲ್ಲಿ ಬಂದಿದ್ದ ‘ಕೆಜಿಎಫ್: ಚಾಪ್ಟರ್ 2’ ಮತ್ತು ‘ಆರ್ಆರ್ಆರ್’ ಚಿತ್ರಗಳು ಕೂಡ ಸಾವಿರ ಕೋಟಿ ಕ್ಲಬ್ ಸೇರಿದ್ದವು. ಆದರೆ ‘ಅನಿಮಲ್’ ಸಿನಿಮಾಗೆ ಇದು ಸಾಧ್ಯವಾಗಿಲ್ಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.