Aaliyah Kashyap: ಅನುರಾಗ್ ಕಶ್ಯಪ್ ಪುತ್ರಿ ನಿಶ್ಚಿತಾರ್ಥ; ಕಿಸ್​ ಮಾಡುತ್ತಿರುವ ಫೋಟೋ ಹಂಚಿಕೊಂಡ ಆಲಿಯಾ

|

Updated on: May 21, 2023 | 10:15 AM

Aaliyah Kashyap Engagement: ಆಲಿಯಾ ಕಶ್ಯಪ್​ ಎಂಗೇಜ್​ಮೆಂಟ್​ ಮಾಡಿಕೊಂಡು ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ಹಲವು ಬಗೆಯಲ್ಲಿ ಕಮೆಂಟ್​ ಮಾಡಿದ್ದಾರೆ.

Aaliyah Kashyap: ಅನುರಾಗ್ ಕಶ್ಯಪ್ ಪುತ್ರಿ ನಿಶ್ಚಿತಾರ್ಥ; ಕಿಸ್​ ಮಾಡುತ್ತಿರುವ ಫೋಟೋ ಹಂಚಿಕೊಂಡ ಆಲಿಯಾ
ಆಲಿಯಾ ಕಶ್ಯಪ್ ವೈರಲ್​ ಫೋಟೋ
Follow us on

ಬಾಲಿವುಡ್​ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ (Anurag Kashyap) ಅವರ ಮಗಳು ಆಲಿಯಾ ಕಶ್ಯಪ್ ಮೇ20ರಂದು ಬಹುಕಾಲದ ಗೆಳೆಯ ಶೇನ್ ಗ್ರೆಗೊಯಿರ್ (Shane Gregoire) ಅವರೊಂದಿಗೆ ಎಂಜೇಗ್​ಮೆಂಟ್​ ಮಾಡಿಕೊಂಡಿದ್ದಾರೆ. ಯೂಟ್ಯೂಬರ್​ ಆಗಿ ಗುರುತಿಸಿಕೊಂಡಿರುವ ಆಲಿಯಾ ಅವರು ಈ ಖುಷಿಯ ಸುದ್ದಿಯನ್ನು ಇನ್​ಸ್ಟಾಗ್ರಾಮ್​ ಮೂಲಕ ಹಂಚಿಕೊಂಡಿದ್ದಾರೆ. ಸುಂದರ ಕ್ಷಣವನ್ನು ಸೆರೆಹಿಡಿದಿರುವ ಎರಡು ಫೋಟೋಗಳನ್ನು ಅವರು ಪೋಸ್ಟ್ ಮಾಡಿದ್ದಾರೆ. ಒಂದು ಫೋಟೋದಲ್ಲಿ ಅವರ ಎಂಗೇಜ್​ಮೆಂಟ್​ ರಿಂಗ್​ ಹೈಲೈಟ್​ ಆಗಿದೆ. ತಮ್ಮ ಸುಂದರವಾದ ವಜ್ರದ ಉಂಗುರವನ್ನು ಆಲಿಯಾ ಕಶ್ಯಪ್ (Aaliyah Kashyap) ಅವರು ಹೆಮ್ಮೆಯಿಂದ ತೋರಿಸಿದ್ದಾರೆ. ಎರಡನೇ ಫೋಟೋದಲ್ಲಿ ಅವರು ಭಾವಿ ಪತಿಗೆ ಕಿಸ್​ ಮಾಡುತ್ತಿರುವ ದೃಶ್ಯ ಇದೆ. ವಿದೇಶದ ಪ್ರಕೃತಿ ಸೌಂದರ್ಯ ನಡುವೆ ಈ ಜೋಡಿ ಹಕ್ಕಿಗಳು ಕಾಲ ಕಳೆದಿವೆ. ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋ ವೈರಲ್​ ಆಗಿದೆ.

ಇಂಡೋನೇಷ್ಯಾದ ಬಾಲಿಯಲ್ಲಿರುವ ಸುಂದರವಾದ ಪರಿಸರದಲ್ಲಿ ಆಲಿಯಾ ಕಶ್ಯಪ್​ ಮತ್ತು ಶೇನ್ ಗ್ರೆಗೊಯಿರ್ ಅವರು ಪರಸ್ಪರ ಚುಂಬಿಸಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ಹಲವು ಬಗೆಯಲ್ಲಿ ಕಮೆಂಟ್​ ಮಾಡಿದ್ದಾರೆ. ಮಗಳ ಫೋಟೋ ನೋಡಿ ಅನುರಾಗ್​ ಕಶ್ಯಪ್​ ಅವರು ಮೂರು ಹಾರ್ಟ್​ ಸಿಂಬಲ್​ ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: IT Raids: ಬಾಲಿವುಡ್​ ನಿರ್ದೇಶಕ ಅನುರಾಗ್​ ಕಶ್ಯಪ್, ನಟಿ ತಾಪ್ಸಿ ಪನ್ನು ಸೇರಿ ಹಲವರ ಮನೆ, ಕಚೇರಿ ಮೇಲೆ ಐಟಿ ದಾಳಿ

‘ನನ್ನ ಜೀವನದ ಪ್ರೀತಿ ನೀನು. ನಿಜವಾದ ಮತ್ತು ಅಪಾರವಾದ ಪ್ರೀತಿ ಹೇಗಿರುತ್ತದೆ ಎಂದು ನನಗೆ ತೋರಿಸಿದ್ದಕ್ಕಾಗಿ ಧನ್ಯವಾದಗಳು. ನಿನ್ನ ಪ್ರೀತಿಗೆ ಒಪ್ಪಿಗೆ ನೀಡಿದ್ದು ನಾನು ಮಾಡಿದ ಅತ್ಯಂತ ಸುಲಭವಾದ ಕೆಲಸ. ನನ್ನ ಉಳಿದ ಜೀವನವನ್ನು ನಿನ್ನೊಂದಿಗೆ ಕಳೆಯಲು ನಾನು ಕಾತುರಳಾಗಿದ್ದೇನೆ. ನೀನೇ ನನ್ನ ಪ್ರೀತಿ’ ಎಂದು ಆಲಿಯಾ ಕಶ್ಯಪ್​ ಅವರು ಪೋಸ್ಟ್ ಮಾಡಿದ್ದಾರೆ. ಅನುರಾಗ್​ ಕಶ್ಯಪ್ ಅವರು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಮಗಳ ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ. ‘ಆಕೆ ಈಗ ಬೆಳೆದಿದ್ದಾಳೆ. ಎಂಗೇಜ್​ಮೆಂಟ್​ ಆಗುವ ಮಟ್ಟಕೆ ಬೆಳೆದಿದ್ದಾಳೆ’ ಎಂದು ಅವರು ಕ್ಯಾಪ್ಷನ್​ ನೀಡಿದ್ದಾರೆ.

ಇದನ್ನೂ ಓದಿ: Vivek Agnihotri: ಹೆಡ್​ಲೈನ್​ ಓದಿ ಯಾಮಾರಿದ ವಿವೇಕ್​ ಅಗ್ನಿಹೋತ್ರಿ; ‘ಕಾಂತಾರ’ ಬಗ್ಗೆ ಅನುರಾಗ್​ ಕಶ್ಯಪ್ ಹೇಳಿದ್ದೇ ಬೇರೆ

ಆಲಿಯಾ ಅವರು ಜನಪ್ರಿಯ ಯೂಟ್ಯೂಬರ್​ ಆಗಿದ್ದಾರೆ. ಅವರ ಚಾನೆಲ್​ ಅನ್ನು ಸಾಕಷ್ಟು ಜನರು ಫಾಲೋ ಮಾಡುತ್ತಿದ್ದಾರೆ. ತಮ್ಮ ಯೂಟ್ಯೂಬ್​​ ಚಾನೆಲ್​ನಲ್ಲಿ ವೈಯಕ್ತಿಕ ಜೀವನದ ವಿಷಯಗಳನ್ನು ಅವರು ಹಂಚಿಕೊಳ್ಳುತ್ತಾರೆ. ಶೇನ್ ಜೊತೆ ಅವರು ರಿಲೇಷನ್​ಶಿಪ್​ನಲ್ಲಿ ಇದ್ದರು. ಡೇಟಿಂಗ್ ಅಪ್ಲಿಕೇಶನ್‌ ಮೂಲಕ ಅವರಿಬ್ಬರ ಪರಿಚಯ ಆಯಿತು. ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಜೋಡಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.