ನಟಿ ಅನುಷ್ಕಾ ಶರ್ಮಾ (Anushka Sharma) ಅವರು ಮದುವೆ ಬಳಿಕ ನಟನೆಯಿಂದ ಕೊಂಚ ದೂರ ಉಳಿದುಕೊಂಡಿದ್ದಾರೆ. ಸಂಸಾರದ ಕಡೆಗೆ ಅವರು ಹೆಚ್ಚು ಗಮನ ಹರಿಸಿದ್ದಾರೆ. ಹೆಣ್ಣು ಮಗುವಿಗೆ ಜನ್ಮ ನೀಡಿರುವ ಅವರು ಮಗಳ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಇಂದು (ಮೇ 1) ಅನುಷ್ಕಾ ಶರ್ಮಾ ಅವರಿಗೆ ಜನ್ಮದಿನದ (Anushka Sharma Birthday) ಸಂಭ್ರಮ. ಬಾಲಿವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರು ಇಂದು 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಖುಷಿಯ ಕ್ಷಣದಲ್ಲಿ ಅಭಿಮಾನಿಗಳು, ಸೆಲೆಬ್ರಿಟಿಗಳು ಅನುಷ್ಕಾ ಶರ್ಮಾ ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. 2008ರಿಂದಲೂ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಈವರೆಗೂ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ನಾಯಕಿ ಪ್ರಧಾನ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ. ನಟನೆ ಮಾತ್ರವಲ್ಲದೇ ನಿರ್ಮಾಪಕಿ ಆಗಿಯೂ ಅನುಷ್ಕಾ ಶರ್ಮಾ ಯಶಸ್ವಿ ಆಗಿದ್ದಾರೆ. ವಿರಾಟ್ ಕೊಹ್ಲಿ ಜೊತೆ ಮದುವೆ ಆದ ನಂತರದಲ್ಲಿ ಅವರ ಸಿನಿಮಾಗಳ (Anushka Sharma Movies) ಸಂಖ್ಯೆ ಕಡಿಮೆ ಆಗಿದೆ. ಆದರೆ ಅವರು ಆದಷ್ಟು ಬೇಗ ಕಮ್ಬ್ಯಾಕ್ ಮಾಡಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ‘ಚಕ್ದಾ ಎಕ್ಸ್ಪ್ರೆಸ್’ ಮೂಲಕ ಅಭಿಮಾನಿಗಳನ್ನು ರಂಜಿಸಲು ಅನುಷ್ಕಾ ಶರ್ಮಾ ಸಜ್ಜಾಗುತ್ತಿದ್ದಾರೆ.
ಅನುಷ್ಕಾ ಶರ್ಮಾ ನಟಿಸಿದ ಮೊದಲ ಸಿನಿಮಾ ‘ರಬ್ ನೇ ಬನಾದಿ ಜೋಡಿ’. ಆ ಚಿತ್ರದಲ್ಲಿ ಅವರು ಶಾರುಖ್ ಖಾನ್ ಜೊತೆ ತೆರೆಹಂಚಿಕೊಂಡಿದ್ದರು. ಆ ಬಳಿಕ ಅವರಿಗೆ ಅನೇಕ ಆಫರ್ಗಳು ಬರಲಾರಂಭಿಸಿದವು. ಆದರೆ ಅನುಷ್ಕಾ ಶರ್ಮಾ ಎಲ್ಲವನ್ನೂ ಒಪ್ಪಿಕೊಳ್ಳಲಿಲ್ಲ. ಸಿನಿಮಾ ಮತ್ತು ಪಾತ್ರಗಳ ಆಯ್ಕೆಯಲ್ಲಿ ತಮ್ಮದೇ ನಿಲುವು ಹೊಂದಿರುವ ಅವರು ಕೆಲವನ್ನು ರಿಜೆಕ್ಟ್ ಮಾಡಿದ್ದುಂಟು. ನಂತರ ಆ ಸಿನಿಮಾಗಳು ಬೇರೆ ನಟಿಯರ ಪಾಲಾದವು. ಆ ಬಗ್ಗೆ ಕೆಲವು ವರದಿಗಳು ಪ್ರಕಟ ಆಗಿವೆ.
‘ಕಿ ಆ್ಯಂಡ್ ಕಾ’ ಸಿನಿಮಾ 2016ರಲ್ಲಿ ತೆರೆಕಂಡಿತು. ಅದರಲ್ಲಿ ಕರೀನಾ ಕಪೂರ್ ನಾಯಕಿ ಆಗಿದ್ದರು. ಅವರಿಗಿಂತಲೂ ಮುನ್ನ ಅನುಷ್ಕಾ ಶರ್ಮಾ ಅವರಿಗೆ ಆಫರ್ ನೀಡಲಾಗಿತ್ತು ಎಂಬ ಮಾತಿದೆ. ಅದೇ ರೀತಿ, ಕರೀನಾ ಕಪೂರ್ ನಟಿಸಿದ ‘3 ಈಡಿಯಟ್ಸ್’ ಚಿತ್ರಕ್ಕೂ ಅನುಷ್ಕಾ ಶರ್ಮಾ ಅವರೇ ಮೊದಲ ಆದ್ಯತೆ ಆಗಿದ್ದರಂತೆ. ಆದರೆ ಅನುಷ್ಕಾ ಒಪ್ಪಿಕೊಳ್ಳದ ಕಾರಣ ಅದು ಕರೀನಾ ಕಪೂರ್ ಪಾಲಾಯಿತು.
ಖ್ಯಾತ ನಿರ್ದೇಶಕ ಇಮ್ತಿಯಾಸ್ ಅಲಿ ನಿರ್ದೇಶನದ ಸಿನಿಮಾದಲ್ಲಿ ನಟಿಸಿಲು ಎಲ್ಲ ನಟಿಯರು ಆಸೆ ವ್ಯಕ್ತಪಡಿಸುತ್ತಾರೆ. ಆದರೆ ಅನುಷ್ಕಾ ಅವರು ಅಂಥ ಅವಕಾಶವನ್ನು ಕೈ ಚೆಲ್ಲಿದ್ದರು. ಇಮ್ತಿಯಾಜ್ ಅಲಿ ನಿರ್ದೇಶನದ ‘ತಮಾಷಾ’ ಚಿತ್ರದಲ್ಲಿ ನಟಿಸುವಂತೆ ಅವರಿಗೆ ಆಫರ್ ನೀಡಲಾಗಿತ್ತು. ಆದರೆ ಅವರು ಒಪ್ಪುಕೊಳ್ಳಲಿಲ್ಲ. ನಂತರ ದೀಪಿಕಾ ಪಡುಕೋಣೆ ನಟಿಸಿದರು.
ಆಲಿಯಾ ಭಟ್ ನಟನೆಯ ‘2 ಸ್ಟೇಟ್ಸ್’ ಸಿನಿಮಾಗೂ ಕೂಡ ಅನುಷ್ಕಾ ಶರ್ಮಾ ಅವರೇ ನಾಯಕಿ ಆಗಬೇಕು ಎಂದು ಚಿತ್ರತಂಡ ನಿರ್ಧರಿಸಿತ್ತು. ಆದರೆ ಆ ಚಿತ್ರವನ್ನು ಅನುಷ್ಕಾ ಒಪ್ಪಿಕೊಳ್ಳಲಿಲ್ಲ. ಅದೇ ರೀತಿ, ‘ಬಾರ್ ಬಾರ್ ದೇಖೋ’ ಸಿನಿಮಾದ ಆಫರ್ ಕೂಡ ಅನುಷ್ಕಾ ಶರ್ಮಾಗೆ ಹೋಗಿತ್ತು. ಅದನ್ನು ಕೂಡ ಅವರು ಕಾರಣಾಂತರಗಳಿಂದ ರಿಜೆಕ್ಟ್ ಮಾಡಿದರು. ನಂತರ ಆ ಚಿತ್ರಕ್ಕೆ ಕತ್ರಿನಾ ಕೈಫ್ ನಾಯಕಿ ಆದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ:
ತಾವೇ ಸ್ಥಾಪಿಸಿದ ನಿರ್ಮಾಣ ಸಂಸ್ಥೆಯಿಂದ ಹೊರನಡೆದ ಅನುಷ್ಕಾ ಶರ್ಮಾ; ಅಂಥದ್ದೇನಾಯ್ತು?
‘ನಮ್ಮ ನಿರ್ಧಾರ ಬದಲಾಗಿಲ್ಲ’; ಮಗಳ ವೈರಲ್ ವಿಡಿಯೋ ಬಗ್ಗೆ ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ಪ್ರತಿಕ್ರಿಯೆ