Anushka Sharma: ಪ್ಯಾರಿಸ್​ನಿಂದ ಫೋಟೋ ಹಂಚಿಕೊಂಡ ಅನುಷ್ಕಾ ಶರ್ಮಾ; ಲಂಡನ್​ನಿಂದ ಪರಿಣೀತಿ ಚೋಪ್ರಾ ವಿಶೇಷ ಮನವಿ

ಅನುಷ್ಕಾ ಶರ್ಮಾ ಅವರು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ಸೋಶಿಯಲ್​ ಮೀಡಿಯಾ ಬಳಸುತ್ತಾರೆ. ತಮ್ಮ ದಿನಚರಿಯ ಬಗ್ಗೆ ಅವರು ಮಾಹಿತಿ ಹಂಚಿಕೊಳ್ಳುತ್ತಾರೆ.

Anushka Sharma: ಪ್ಯಾರಿಸ್​ನಿಂದ ಫೋಟೋ ಹಂಚಿಕೊಂಡ ಅನುಷ್ಕಾ ಶರ್ಮಾ; ಲಂಡನ್​ನಿಂದ ಪರಿಣೀತಿ ಚೋಪ್ರಾ ವಿಶೇಷ ಮನವಿ
ಅನುಷ್ಕಾ ಶರ್ಮಾ
Edited By:

Updated on: Jul 22, 2022 | 11:43 AM

ನಟಿ ಅನುಷ್ಕಾ ಶರ್ಮಾ (Anushka Sharma) ಅವರು ಮದುವೆ ಬಳಿಕ ನಟನೆಯಿಂದ ದೂರ ಸರಿದರು. ಮದುವೆಗೂ ಮುನ್ನ ಒಪ್ಪಿಕೊಂಡ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದು ಬಿಟ್ಟರೆ ಬೇರೆ ಯಾವುದೇ ಹೊಸ ಸಿನಿಮಾವನ್ನು ಒಪ್ಪಿಕೊಳ್ಳುವಲ್ಲಿ ಅವರು ಆಸಕ್ತಿ ತೋರಿಸಲಿಲ್ಲ. ವಿರಾಟ್​ ಕೊಹ್ಲಿ (Virat Kohli) ಜತೆ ಅವರು ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಈ ದಂಪತಿಗೆ ಮುದ್ದಾದ ಹೆಣ್ಣು ಮಗು ಜನಿಸಿದೆ. ಮಗುವಿನ ಆರೈಕೆಯಲ್ಲಿ ಅನುಷ್ಕಾ ಶರ್ಮಾ ತೊಡಗಿಕೊಂಡಿದ್ದಾರೆ. ಆದಷ್ಟು ಬೇಗ ಅವರನ್ನು ಮತ್ತೆ ದೊಡ್ಡ ಪರದೆಯಲ್ಲಿ ನೋಡಬೇಕು ಎಂದು ಅಭಿಮಾನಿಗಳು ಕಾದಿದ್ದಾರೆ. ಅನುಷ್ಕಾ ಶರ್ಮಾ ಅವರು ಪ್ಯಾರಿಸ್ (Paris) ಪ್ರವಾಸದಲ್ಲಿದ್ದಾರೆ. ಅಲ್ಲಿನ ಕೆಲವು ಫೋಟೋಗಳನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅವುಗಳನ್ನು ಕಂಡು ಬಾಲಿವುಡ್​ ಸೆಲೆಬ್ರಿಟಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡಿದ್ದಾರೆ.

ಪ್ಯಾರಿಸ್​ನಲ್ಲಿ ಫೋಟೋಶೂಟ್​ ಮತ್ತು ಜಾಹೀರಾತು ಚಿತ್ರೀಕರಣದಲ್ಲಿ ಅನುಷ್ಕಾ ಶರ್ಮಾ ಭಾಗಿ ಆಗಿದ್ದಾರೆ. ಅಲ್ಲದೇ ಅಲ್ಲಿನ ತಿನಿಸುಗಳನ್ನು ಸವಿದು ಎಂಜಾಯ್​ ಮಾಡಿದ್ದಾರೆ. ಕಿಟಕಿ ಪಕ್ಕದಲ್ಲಿ ಕುಳಿತು ಆಹಾರ ಸೇವಿಸುತ್ತಿರುವ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಅದನ್ನು ಕಂಡು ನಟಿ ಪರಿಣೀತಿ ಚೋಪ್ರಾ ಅವರು, ‘ನಮಗಾಗಿ ಲಂಡನ್​ಗೂ ಸ್ವಲ್ಪ ಕಳಿಸಿಕೊಡಿ’ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ
ಆರ್​ಸಿಬಿ ಮ್ಯಾಚ್ ನಡೆಯುವಾಗ ಅನುಷ್ಕಾ ಶರ್ಮಾ ಏನು ಮಾಡುತ್ತಿದ್ದರು? ಇಲ್ಲಿವೆ ಫೋಟೋಗಳು
Happy Birthday Anushka Sharma: ಅನುಷ್ಕಾ ಶರ್ಮಾ ಜನ್ಮದಿನ: ಅನುಷ್ಕಾ ರಿಜೆಕ್ಟ್​ ಮಾಡಿದ್ದ ಈ ಚಿತ್ರಗಳು ಯಾವ ನಟಿಯರ ಪಾಲಾದವು?
ಅನುಷ್ಕಾ ಶರ್ಮಾ ಚಿತ್ರರಂಗ ತೊರೆಯುತ್ತಾರಾ? ಅವರು ಒಪ್ಪಿಕೊಂಡ ಸಿನಿಮಾ ಬಗ್ಗೆ ಕೇಳಿ ಬರ್ತಿದೆ ಹೊಸ ಅಪ್​ಡೇಟ್​
ವಿರಾಟ್​ ಕೊಹ್ಲಿ ಹಾಡು ಕೇಳಿ ಅನುಷ್ಕಾ ಶರ್ಮಾ ಆನಂದಭಾಷ್ಪ; ವಿಡಿಯೋ ವೈರಲ್

ಅನುಷ್ಕಾ ಶರ್ಮಾ ಅವರು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ಸೋಶಿಯಲ್​ ಮೀಡಿಯಾ ಬಳಸುತ್ತಾರೆ. ಅವರು ನಟನೆಯಿಂದ ದೂರ ಉಳಿದುಕೊಂಡಿದ್ದರೂ ಸಿನಿಮಾ ಸಹವಾಸ ಕಡಿಮೆ ಮಾಡಿಕೊಂಡಿಲ್ಲ. ನಿರ್ಮಾಪಕಿಯಾಗಿ ಅವರು ಕೆಲವು ಪ್ರಾಜೆಕ್ಟ್​ಗಳಿಗೆ ಬಂಡವಾಳ ಹೂಡಿದ್ದಾರೆ. ‘ಬುಲ್​ಬುಲ್​’ ಸಿನಿಮಾ ಹಾಗೂ ‘ಪಾತಾಳ್​ ಲೋಕ್’ ವೆಬ್​ ಸರಣಿಯನ್ನು ಅವರು ನಿರ್ಮಾಣ ಮಾಡಿದ್ದಾರೆ. ಇನ್ನೂ ಹಲವು ಚಿತ್ರಗಳಿಗೆ ಅವರು ಹಣ ಹೂಡುತ್ತಿದ್ದಾರೆ.

ಅನುಷ್ಕಾ ಶರ್ಮಾ ನಟಿಸಿರುವ ‘ಚಕ್ದಾ ಎಕ್ಸ್​ಪ್ರೆಸ್​’ ಸಿನಿಮಾ ಸಖತ್​ ನಿರೀಕ್ಷೆ ಮೂಡಿಸಿದೆ. ಈ ಚಿತ್ರದಲ್ಲಿ ಅವರು ಮಹಿಳಾ ಕ್ರಿಕೆಟರ್​ ಜೂಲನ್​ ಗೋಸ್ವಾಮಿ ಪಾತ್ರವನ್ನು ಮಾಡುತ್ತಿದ್ದಾರೆ. ಕ್ರಿಕೆಟ್​ ಕುರಿತ ಈ ಚಿತ್ರಕ್ಕಾಗಿ ಅನುಷ್ಕಾ ಸಾಕಷ್ಟು ತರಬೇತಿ ಪಡೆದುಕೊಂಡು ಕ್ಯಾಮೆರಾ ಎದುರಿಸಿದ್ದಾರೆ. ಈ ಚಿತ್ರವನ್ನು ನೋಡಲು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಮೊದಲಿನ ರೀತಿಯೇ ಅನುಷ್ಕಾ ಶರ್ಮಾ ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ಒಪ್ಪಿಕೊಳ್ಳಬೇಕು ಎಂಬುದು ಫ್ಯಾನ್ಸ್​ ಆಸೆ. 2018ರಲ್ಲಿ ಬಂದ ‘ಜೀರೋ’ ಚಿತ್ರದ ಬಳಿಕ ಅನುಷ್ಕಾ ಅವರು ದೊಡ್ಡ ಪರದೆ ಮೇಲೆ ಕಾಣಿಸಿಕೊಂಡಿಲ್ಲ.

Published On - 11:43 am, Fri, 22 July 22