AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಯಸ್ಸಲ್ಲಿ 15 ವರ್ಷ ಕಿರಿಯವಳ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಅರ್ಜುನ್ ರಾಮ್​ಪಾಲ್

ಬಾಲಿವುಡ್ ನಟ ಅರ್ಜುನ್ ರಾಮ್​ಪಾಲ್ ಅವರು ಗೇಬ್ರಿಯೆಲಾ ಡೆಮೆಟ್ರಿಯಾಡ್ಸ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರಿಯಾ ಚಕ್ರವರ್ತಿ ಪಾಡ್​ಕಾಸ್ಟ್​ನಲ್ಲಿ ಈ ವಿಷಯವನ್ನು ಖಚಿತಪಡಿಸಲಾಗಿದೆ. 15 ವರ್ಷಗಳ ವಯಸ್ಸಿನ ಅಂತರವಿದ್ದರೂ, ಇವರ ಆರು ವರ್ಷಗಳ ಸಂಬಂಧ ಪ್ರೀತಿಗೆ ಅಡ್ಡಿಯಾಗಿಲ್ಲ. ಸದ್ಯಕ್ಕೆ ವಿವಾಹವಾಗಿಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ.

ವಯಸ್ಸಲ್ಲಿ 15 ವರ್ಷ ಕಿರಿಯವಳ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಅರ್ಜುನ್ ರಾಮ್​ಪಾಲ್
ಅರ್ಜುನ್ ರಾಮ್​ಪಾಲ್
ರಾಜೇಶ್ ದುಗ್ಗುಮನೆ
|

Updated on: Dec 15, 2025 | 11:59 AM

Share

ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದ ಅರ್ಜುನ್ ರಾಮ್​ಪಾಲ್ ಅವರು ಈಗ ವೈಯಕ್ತಿಕ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಬಾಲಿವುಡ್​ನ ಬ್ಲಾಕ್​ಬಸ್ಟರ್ ಚಿತ್ರ ‘ಧುರಂಧರ್’ ಸಿನಿಮಾದಲ್ಲಿ ಅವರು ನಟಿಸಿದ್ದರು. ಈ ಚಿತ್ರ ಹಿಟ್ ಆದ ಬಳಿಕ ಅವರು ಒಂದು ಖುಷಿ ಸುದ್ದಿ ಹಂಚಿಕೊಂಡಿದ್ದಾರೆ. ನಟ ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಅವರ ಪಾಡ್​ಕಾಸ್ಟ್​ನಲ್ಲಿ ಈ ವಿಷಯವನ್ನು ಅವರು ಖಚಿತಪಡಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಅರ್ಜುನ್ ರಾಮ್​ಪಾಲ್ ಅವರು ಕಳೆದ ಆರು ವರ್ಷಗಳಿಂದ ಗೇಬ್ರಿಯೆಲಾ ಡೆಮೆಟ್ರಿಯಾಡ್ಸ್ ಜೊತೆ ಸುತ್ತಾಡುತ್ತಿದ್ದರು. ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ವಿಷಯವನ್ನು ಅರ್ಜುನ್ ಖಚಿತಪಡಿಸಿದ್ದಾರೆ. ಈ ಶೋನ ಟೀಸರ್​ನ ರಿಯಾ ಹಂಚಿಕೊಂಡಿದ್ದಾರೆ. ಇದರಲ್ಲಿ ಇಬ್ಬರೂ ನಿಶ್ಚಿತಾರ್ಥದ ವಿಷ ಖಚಿಪಡಿಸಿದ್ದಾರೆ. ಆದರೆ, ಇನ್ನೂ ವಿವಾಹ ಆಗಿಲ್ಲ ಎಂಬುದನ್ನು ಕೂಡ ಸ್ಪಷ್ಟಪಡಿಸಲಾಗಿದೆ. ಗೇಬ್ರಿಯೆಲಾ ಅವರು ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್.

ಅರ್ಜುನ್ ಅವರು 1998ರಲ್ಲಿ ಮಾಡೆಲ್ ಹಾಗೂ ನಿರ್ಮಾಪಕಿ ಮೆಹರ್ ಜೆಸಿಯಾ ಅವರನ್ನು ವಿವಾಹ ಆದರು. 2018ರಲ್ಲಿ ಇವರ ಸಂಬಂಧ ಕೊನೆ ಆಯಿತು. ವಿಚ್ಛೇದನದ ಬಳಿಕವೂ ಮಕ್ಕಳಿಗಾಗಿ ಇವರು ಆಗಾಗ ಒಟ್ಟಿಗೆ ಸೇರುತ್ತಿದ್ದರು. 2019ರಲ್ಲಿ ಅರ್ಜುನ್ ಅವರು ಗೇಬ್ರಿಯೆಲಾ ಡೆಮೆಟ್ರಿಯಾಡ್ಸ್ ಜೊತೆ ಸುತ್ತಾಡುತ್ತಿರುವ ಸುದ್ದಿ ಹೊರಬಿತ್ತು. ಈಗ ಅವರೇ ವಿಷಯವನ್ನು ಖಚಿಪಡಿಸಿದ್ದಾರೆ.

ಇನ್ನು, ಇವರ ವಯಸ್ಸಿ ಅಂತರವೂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಏಕೆಂದರೆ, ಅರ್ಜುನ್ ವಯಸ್ಸು 53, ಗೇಬ್ರಿಯೆಲಾ ಡೆಮೆಟ್ರಿಯಾಡ್ಸ್ ವಯಸ್ಸು 38. ಇವರ ಮಧ್ಯೆ ಸುಮಾರು 15 ವರ್ಷಗಳ ವಯಸ್ಸಿನ ಅಂತರ ಇದೆ. ಆದರೆ, ಇದು ಇವರ ಪ್ರೀತಿಗೆ ಅಡ್ಡಿ ಆಗಿಲ್ಲ. ಇಷ್ಟು ವರ್ಷ ಇವರ ಸಂಬಂಧದ ಬಗ್ಗೆ ಸುದ್ದಿ ಹಬ್ಬಿದ್ದರೂ ಅವರು ಇದರಲ್ಲಿ ಗೌಪ್ಯತೆ ಕಾಪಾಡಿಕೊಂಡು ಬಂದಿದ್ದರು.

ಇದನ್ನೂ ಓದಿ: ಬಾಲಿವುಡ್​ಗೆ ಎಂಟ್ರಿ ನೀಡಲಿದ್ದಾರೆ ನಟ ಅರ್ಜುನ್ ರಾಮ್​ಪಾಲ್ ಮೈರಾ

ಅರ್ಜುನ್ ಅವರು ಚಿತ್ರರಂಗಕ್ಕೆ ಬಂದಿದ್ದು 2001ರಲ್ಲಿ. ‘ಪ್ಯಾರ್ ಇಷ್ಕ್ ಔರ್ ಮೊಹಾಬತ್’ ಅವರ ಮೊದಲ ಸಿನಿಮಾ. ವಿಲನ್ ಪಾತ್ರಗಳ ಮೂಲಕ ಅವರು ಹೆಚ್ಚು ಗಮನ ಸೆಳೆದಿದ್ದಾರೆ.‘ಓಂ ಶಾಂತಿ ಓಂ’ನಲ್ಲಿ ಅವರು ಮಾಡಿದ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ‘ಧುರಂಧರ್’ ಸಿನಿಮಾದಲ್ಲಿ ಮಜೋರ್ ಇಕ್ಬಾಲ್ ಹೆಸರಿನ ಪಾತ್ರ ಮಾಡಿದ್ದಾರೆ.ಈ ಚಿತ್ರ 350 ಕೋಟಿ ರೂಪಾಯಿ ಬಾಚಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್