‘ಆರ್ಟಿಕಲ್ 370’ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

‘ಆರ್ಟಿಕಲ್ 370’ನ್ನು 2019ರ ಆಗಸ್ಟ್ 5ರಂದು ತೆಗೆಯಲಾಯಿತು. ನಂತರ ಅದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಯಿತು. ಈ ಸಿನಿಮಾ ಇದನ್ನೇ ಆಧರಿಸಿದೆ. ಈ ಚಿತ್ರದಲ್ಲಿ ಯಾಮಿ ಗೌತಮ್ ಮುಖ್ಯ ಪಾತ್ರ ಮಾಡಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನ ಚಿತ್ರ ರಿಲೀಸ್ ಆಗಿದೆ.

‘ಆರ್ಟಿಕಲ್ 370’ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ರಾಜನಾಥ್-ಯಾಮಿ

Updated on: Mar 09, 2024 | 9:05 AM

ಇತ್ತೀಚೆಗೆ ರಿಲೀಸ್ ಆದ ನಟಿ ಯಾಮಿ ಗೌತಮ್ (Yami Gautam) ನಟನೆಯ ‘ಆರ್ಟಿಕಲ್ 370’ ಸಿನಿಮಾ ಮೆಚ್ಚುಗೆ ಪಡೆದಿದೆ. ಬಾಕ್ಸ್ ಆಫೀಸ್​ನಲ್ಲೂ ಈ ಚಿತ್ರ ಒಳ್ಳೆಯ ಗಳಿಕೆ ಮಾಡುತ್ತಿದೆ. ಈ ಚಿತ್ರವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವೀಕ್ಷಿಸಿದ್ದಾರೆ. ಈ ಸಿನಿಮಾ ತಂಡದ ಬಗ್ಗೆ, ಚಿತ್ರವನ್ನು ನಿರೂಪಿಸಿದ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಇದರಿಂದ ತಂಡಕ್ಕೆ ಹೊಸ ಬಲ ಸಿಕ್ಕಂತೆ ಆಗಿದೆ. ಚಿತ್ರದ ಗಳಿಕೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

‘ನಾನು ನನ್ನ ಕುಟುಂಬದೊಂದಿಗೆ ದೆಹಲಿಯ ಥಿಯೇಟರ್​ಗೆ ಹೋಗಿ ಆರ್ಟಿಕಲ್ 370 ಸಿನಿಮಾ ವೀಕ್ಷಿಸಿದೆ. ಈ ಚಿತ್ರದ ಬಗ್ಗೆ ನಾನು ಅನೇಕರಿಂದ ಮೆಚ್ಚುಗೆಯನ್ನು ಕೇಳಿದೆ. ಈ ಸಿನಿಮಾ ನೈಜ ಘಟನೆಗಳಿಂದ ಪ್ರೇರಿತವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ತೆಗೆದುಹಾಕುವ ಘಟನೆಗಳನ್ನು ಅತ್ಯಂತ ಪರಿಣಾಮಕಾರಿ ರೀತಿಯಲ್ಲಿ ಪ್ರಸ್ತುತಪಡಿಸಲಾಗಿದೆ’ ಎಂದು ಅವರು ಬರೆದಿದ್ದಾರೆ.

‘ಈ ಸಿನಿಮಾ ಸಮಸ್ಯೆ ಎಷ್ಟು ಸಂಕೀರ್ಣವಾಗಿತ್ತು ಮತ್ತು ಅದನ್ನು ಪರಿಹರಿಸುವುದು ಎಷ್ಟು ಸವಾಲಾಗಿತ್ತು ಎಂಬುದನ್ನು ತೋರಿಸುತ್ತದೆ. ಇದು ಮಹಿಳಾ ಸಬಲೀಕರಣಕ್ಕೆ ಉತ್ತಮ ಉದಾಹರಣೆ. ಈ ಚಿತ್ರದ ನಿರ್ಮಾಪಕ-ನಿರ್ದೇಶಕರು ಮತ್ತು ಎಲ್ಲಾ ಕಲಾವಿದರ ಕೆಲಸಕ್ಕೆ ನಾನು ಅಭಿನಂದಿಸುತ್ತೇನೆ’ ಎಂದಿದ್ದಾರೆ ರಾಜನಾಥ್ ಸಿಂಗ್.

ಇದನ್ನೂ ಓದಿ: ‘ಆರ್ಟಿಕಲ್ 370’ ಸಿನಿಮಾದಲ್ಲಿ ಮಿಂಚಿದ ನಟಿ ಯಾಮಿ ಗೌತಮ್

‘ಆರ್ಟಿಕಲ್ 370’ನ್ನು 2019ರ ಆಗಸ್ಟ್ 5ರಂದು ತೆಗೆಯಲಾಯಿತು. ನಂತರ ಅದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಯಿತು. ಈ ಸಿನಿಮಾ ಇದನ್ನೇ ಆಧರಿಸಿದೆ. ಈ ಚಿತ್ರದಲ್ಲಿ ಯಾಮಿ ಗೌತಮ್ ಮುಖ್ಯ ಪಾತ್ರ ಮಾಡಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನ ಚಿತ್ರ ರಿಲೀಸ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ