ರಾಜ್ ಕುಂದ್ರಾಗಿನಿಂತಲೂ ಶ್ರೀಮಂತರು ನನಗಾಗಿ ಕ್ಯೂ ನಿಂತಿದ್ದರು: ಶಿಲ್ಪಾ ಶೆಟ್ಟಿ

Shilpa Shetty: ರಾಜ್ ಕುಂದ್ರಾಗಿಂತಲೂ ಶ್ರೀಮಂತರಾಗಿದ್ದವರು ನನಗಾಗಿ ಕ್ಯೂ ನಲ್ಲಿ ನಿಂತಿದ್ದರು ಎಂದಿದ್ದಾರೆ ನಟಿ ಶಿಲ್ಪಾ ಶೆಟ್ಟಿ.

ರಾಜ್ ಕುಂದ್ರಾಗಿನಿಂತಲೂ ಶ್ರೀಮಂತರು ನನಗಾಗಿ ಕ್ಯೂ ನಿಂತಿದ್ದರು: ಶಿಲ್ಪಾ ಶೆಟ್ಟಿ
Follow us
ಮಂಜುನಾಥ ಸಿ.
|

Updated on: Mar 08, 2024 | 4:38 PM

ರಾಜ್ ಕುಂದ್ರಾ (Raj Kundra) ಹಾಗೂ ಶಿಲ್ಪಾ ಶೆಟ್ಟಿ (Shilpa Shetty) ಕಳೆದ 15 ವರ್ಷದಿಂದಲೂ ದಾಂಪತ್ಯ ನಡೆಸುತ್ತಿದ್ದಾರೆ. 2021 ರಲ್ಲಿ ನೀಲಿ ಚಿತ್ರ ನಿರ್ಮಾಣ ಹಾಗೂ ವಿತರಣೆ ಪ್ರಕರಣದಲ್ಲಿ ರಾಜ್ ಕುಂದ್ರಾ ಬಂಧನವಾಗಿತ್ತು. ಆಗಿನಿಂದಲೂ ಟ್ರೋಲಿಗರು ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ಬಗೆಗೆ ಆಗಾಗ್ಗೆ ಏನಾದರೂ ಟ್ರೋಲ್ ಮಾಡುತ್ತಲೇ ಇರುತ್ತಾರೆ. ಶಿಲ್ಪಾ ಶೆಟ್ಟಿ, ಹಣಕ್ಕಾಗಿ ರಾಜ್ ಕುಂದ್ರಾ ಅವರನ್ನು ವಿವಾಹವಾಗಿದ್ದಾರೆ ಎಂಬುದು ಅದರಲ್ಲೊಂದು. ಆಗಾಗ್ಗೆ ಕೇಳಿ ಬರುತ್ತಲೇ ಇದ್ದ ಈ ಆರೋಪದ ಬಗ್ಗೆ ಶಿಲ್ಪಾ ಶೆಟ್ಟಿ ಮಾತನಾಡಿದ್ದು, ಆರೋಪ ಮಾಡುವವರಿಗೆ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ.

ಇತ್ತೀಚೆಗೆ ಬಾಲಿವುಡ್ ಮ್ಯಾಗಜೀನ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಹಾಗೂ ರಾಜ್ ಕುಂದ್ರಾ ಬಗ್ಗೆ ಮಾತನಾಡಿರುವ ಶಿಲ್ಪಾ ಶೆಟ್ಟಿ, ‘ನಾನು ರಾಜ್ ಕುಂದ್ರಾ ಅನ್ನು ವಿವಾಹವಾದಾಗ ಕುಂದ್ರಾ 108ನೇ ಶ್ರೀಮಂತ ಬ್ರಿಟೀಷ್ ಭಾರತೀಯ ಎನಿಸಿಕೊಂಡಿದ್ದರು. ಆದರೆ ಕೆಲವರು ನನ್ನ ಬಗ್ಗೆ ಗೂಗಲ್ ಮಾಡುವುದು ಮರೆತು ಬಿಡುತ್ತಾರೆ. ಶಿಲ್ಪಾ ಶೆಟ್ಟಿ ಆದ ನಾನು ಈ ಹಿಂದೆಯೂ ಶ್ರೀಮಂತಳಾಗಿದ್ದೆ, ಈಗಲೂ ಶ್ರೀಮಂತಳಾಗಿದ್ದೇನೆ. ನನ್ನ ಎಲ್ಲ ಅವಶ್ಯಕತೆಗಳನ್ನು ನಾನೇ ಪೂರೈಸಿಕೊಳ್ಳುತ್ತೇನೆ. ಎಲ್ಲ ತೆರಿಗೆಗಳನ್ನು ನಾನೇ ಕಟ್ಟುತ್ತೇನೆ’ ಎಂದಿದ್ದಾರೆ.

ಇದನ್ನೂ ಓದಿ:Shilpa Shetty: ಗೋಧಿ ರುಬ್ಬಿದ ಶಿಲ್ಪಾ ಶೆಟ್ಟಿಯ ವಿಡಿಯೋ ವೈರಲ್; ಚಕ್ಕಿ ಚಲಾಸನದ ಪ್ರಯೋಜನಗಳಿವು

ಮುಂದುವರೆದು ಮಾತನಾಡಿರುವ ಶಿಲ್ಪಾ ಶೆಟ್ಟಿ, ‘ಯಶಸ್ವೀ ಮಹಿಳೆಯರು ತಮ್ಮ ಪತಿಯಿಂದ ಹಣವನ್ನು ನಿರೀಕ್ಷೆ ಮಾಡುವುದಿಲ್ಲ. ರಾಜ್ ಆಗ ಶ್ರೀಮಂತ ವ್ಯಕ್ತಿಯಾಗಿದ್ದರೂ ಸಹ ಹಣ ಎಂಬುದು ನಾನು ಅವರನ್ನು ಒಪ್ಪಿಕೊಳ್ಳಲು ಕಾರಣವಾಗಿರಲಿಲ್ಲ. ಅಸಲಿಗೆ ಆ ಸಮಯದಲ್ಲಿ ರಾಜ್​ಗಿಂತಲೂ ಶ್ರೀಮಂತರಾಗಿದ್ದ ಕೆಲವರು ನನ್ನನ್ನು ವರಿಸಲು ಕೇಳಿದ್ದರು. ಆದರೆ ನನಗೆ ಹಣ ಎಂಬುದು ಆಗಲೂ ಮುಖ್ಯವಾಗಿರಲಿಲ್ಲ, ಈಗಲೂ ಮುಖ್ಯವಾಗಿಲ್ಲ’ ಎಂದಿದ್ದಾರೆ.

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕಳೆದ 31 ವರ್ಷಗಳಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ ‘ಪ್ರೀತ್ಸೋದ್ ತಪ್ಪಾ’, ‘ಒಂದಾಗೋಣ ಬಾ’, ‘ಆಟೋ ಶಂಕರ್’ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು ಸಿನಿಮಾಗಳಲ್ಲಿಯೂ ಶಿಲ್ಪಾ ಶೆಟ್ಟಿ ನಟಿಸಿದ್ದಾರೆ. ಇದೀಗ ಕೆಲವು ಹಿಂದಿ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿರುವ ಶಿಲ್ಪಾ, ನಟನೆಯನ್ನೂ ಮುಂದುವರೆಸಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ‘ಇಂಡಿಯನ್ ಪೋಲಿಸ್ ಫೋರ್ಸ್’ ವೆಬ್ ಸರಣಿಯಲ್ಲಿ ಇತ್ತೀಚೆಗಷ್ಟೆ ಶಿಲ್ಪಾ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ