ಶಿವರಾತ್ರಿ ಹಬ್ಬದಂದು ಸಿಂಪಲ್​ ಸುನಿ, ರಕ್ಷಿತ್​ ಶೆಟ್ಟಿಗೆ ಎರಡನೇ ಹುಟ್ಟು ದಿನ

ನಿರ್ದೇಶಕ ಸಿಂಪಲ್​ ಸುನಿ ಮತ್ತು ನಟ ರಕ್ಷಿತ್​ ಶೆಟ್ಟಿ ಅವರಿಗೆ ಶಿವರಾತ್ರಿ ಹಬ್ಬದ ದಿನ ‘ಸಿಂಪಲ್ಲಾಗ್​ ಒಂದ್​ ಲವ್​ ಸ್ಟೋರಿ’ ಸಿನಿಮಾ ನೆನಪಾಗಿದೆ. ಈ ಸಿನಿಮಾ ತೆರೆಕಂಡು ಇಂದಿಗೆ (ಮಾರ್ಚ್​ 8) 11 ವರ್ಷಗಳು ತುಂಬಿವೆ. ಈ ಖುಷಿಯಲ್ಲಿ ಆ ದಿನಗಳ ನೆನಪನ್ನು ಸುನಿ ಮತ್ತು ರಕ್ಷಿತ್​ ಶೆಟ್ಟಿ ಅವರು ಮೆಲುಕು ಹಾಕಿದ್ದಾರೆ. ಅಭಿಮಾನಿಗಳು ಕೂಡ ‘ಸಿಂಪಲ್ಲಾಗ್​ ಒಂದ್​ ಲವ್​ ಸ್ಟೋರಿ’ ಸಿನಿಮಾದ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಶಿವರಾತ್ರಿ ಹಬ್ಬದಂದು ಸಿಂಪಲ್​ ಸುನಿ, ರಕ್ಷಿತ್​ ಶೆಟ್ಟಿಗೆ ಎರಡನೇ ಹುಟ್ಟು ದಿನ
ಸಿಂಪಲ್​ ಸುನಿ, ರಕ್ಷಿತ್​ ಶೆಟ್ಟಿ
Follow us
ಮದನ್​ ಕುಮಾರ್​
|

Updated on: Mar 08, 2024 | 3:07 PM

ಶಿವರಾತ್ರಿ ಹಬ್ಬವನ್ನು (Shivaratri) ಇಂದು (ಮಾರ್ಚ್​ 8) ಸಡಗರದಿಂದ ಆಚರಿಸಲಾಗುತ್ತಿದೆ. ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಹಬ್ಬದ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ. ನಟ ರಕ್ಷಿತ್​ ಶೆಟ್ಟಿ (Rakshit Shetty) ಹಾಗೂ ನಿರ್ದೇಶಕ ಸಿಂಪಲ್​ ಸುನಿ ಅವರಿಗೆ ಈ ಬಾರಿಯ ಶಿವರಾತ್ರಿ ಹಬ್ಬ ತುಂಬ ಸ್ಪೆಷಲ್​ ಆಗಿದೆ. ಮಾರ್ಚ್​ 8ರಂದು ಶಿವರಾತ್ರಿ ಹಬ್ಬ ಬಂದಿರುವುದೇ ಅದಕ್ಕೆ ಕಾರಣ. ರಕ್ಷಿತ್​ ಶೆಟ್ಟಿ ಮತ್ತು ಸಿಂಪಲ್​ ಸುನಿ (Simple Suni) ಪಾಲಿಗೆ ಈ ದಿನಾಂಕ ಬಹಳ ಮಹತ್ವದ್ದು. ಯಾಕೆಂದರೆ ‘ಸಿಂಪಲ್ಲಾಗ್​ ಒಂದ್​ ಲವ್​ ಸ್ಟೋರಿ’ ಸಿನಿಮಾ ತೆರೆಕಂಡಿದ್ದು ಮಾರ್ಚ್​ 8ರಂದು. ಹಾಗಾಗಿ ಈ ದಿನವನ್ನು ತಮ್ಮ ಎರಡನೇ ಹುಟ್ಟು ದಿನ ಎಂದು ರಕ್ಷಿತ್​ ಶೆಟ್ಟಿ ಹಾಗೂ ಸಿಂಪಲ್​ ಸುನಿ ಹೇಳಿದ್ದಾರೆ.

‘ಮಾರ್ಚ್ 8 ನನ್ನ ಎರಡನೇ ಹುಟ್ಟು ದಿನ. ಸುನಿಲ್ ಕುಮಾರ್ ಇಂದ ಸಿಂಪಲ್ ಸುನಿ ಆಗಿ ಬದಲಾದ ದಿನಾಂಕ. 2013ರ ಮಾರ್ಚ್ 8. ಸಿಂಪಲ್ಲಾಗೊಂದ್ ಲವ್​ ಸ್ಟೋರಿ ಸಿನಿಮಾ ಬಿಡುಗಡೆಯಾಗಿ ನೀವೆಲ್ಲಾ ಆಶೀರ್ವದಿಸಿದ ದಿನ. ನಿಮಗೂ ಹಾಗೂ ನನ್ನ ಈ ತಂಡಕ್ಕೂ ಚಿರಋಣಿ’ ಎಂದು ಸಿಂಪಲ್​ ಸುನಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ. ಸಿನಿಮಾದ ಕೆಲವು ಪೋಸ್ಟರ್​ಗಳನ್ನು ಅವರು ಹಂಚಿಕೊಂಡಿದ್ದಾರೆ.

ಎಕ್ಸ್​ನಲ್ಲಿ ಸಿಂಪಲ್ ಸುನಿ ಮಾಡಿದ ಪೋಸ್ಟ್​ಗೆ ರಕ್ಷಿತ್​ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ‘ನನ್ನ ಎರಡನೇ ಹುಟ್ಟು ದಿನ ಕೂಡ ಎಂದರೆ ತಪ್ಪಾಗಲಾರದು. ಹನ್ನೊಂದು ವರುಷದ ಸಂಭ್ರಮ ಇವತ್ತು ಶಿವರಾತ್ರಿಯಂದು ಬಂದಿರೋದು ಇನ್ನೂ ಸಂತೋಷದ ವಿಷಯ’ ಎಂದು ರಕ್ಷಿತ್​ ಶೆಟ್ಟಿ ಅವರು ಬರೆದುಕೊಂಡಿದ್ದಾರೆ. ಅಭಿಮಾನಿಗಳು ಕಮೆಂಟ್​ ಮಾಡುವ ಮೂಲಕ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಸುನಿ ನಿರ್ದೇಶಿಸಿದ ಮೊದಲ ಸಿನಿಮಾ ‘ಸಿಂಪಲ್ಲಾಗ್​ ಒಂದ್​ ಲವ್​ಸ್ಟೋರಿ’. ಆ ಸಿನಿಮಾದಿಂದ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತು. ರಕ್ಷಿತ್ ಕೂಡ ಮೊದಲ ಬಾರಿಗೆ ಸಕಸ್ಸ್​ ನೋಡಿದ ಸಿನಿಮಾ ಅದು. ಈ ಸಿನಿಮಾದಲ್ಲಿ ರಕ್ಷಿತ್​ ಶೆಟ್ಟಿ ಅವರಿಗೆ ಜೋಡಿಯಾಗಿ ಶ್ವೇತಾ ಶ್ರೀವಾಸ್ತವ್​ ನಟಿಸಿದ್ದರು. ಭರತ್​ ಬಿ.ಜೆ. ಸಂಗೀತ ನೀಡಿದ ಹಾಡುಗಳು ಸೂಪರ್​ ಹಿಟ್​ ಆದವು. ಸಿನಿಮಾದ ಗೆಲುವಿನಲ್ಲಿ ‘ಬಾನಲಿ ಬದಲಾಗೋ..’ ಹಾಡಿನ ಪಾತ್ರ ಕೂಡ ಇದೆ.

ಇದನ್ನೂ ಓದಿ: ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿನ ರಕ್ಷಿತ್​ ಶೆಟ್ಟಿ ನಟನೆಗೆ ಫ್ಯಾನ್ಸ್​ ಫಿದಾ

ಸಿಂಪಲ್​ ಸುನಿ ಮತ್ತು ರಕ್ಷಿತ್​ ಶೆಟ್ಟಿ ಮಾಡಿರುವ ಪೋಸ್ಟ್​ಗೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡಿದ್ದಾರೆ. ‘ನೀವಿಬ್ಬರೂ ಸೇರಿಕೊಂಡು ಅದ್ದೂರಿಯಾಗ್​ ಒಂದ್​ ಲವ್​ ಸ್ಟೋರಿ ಅಂತ ಸಿನಿಮಾ ಮಾಡಿ’ ಎಂದು ಅಭಿಮಾನಿಯೊಬ್ಬರು ಬೇಡಿಕೆ ಇಟ್ಟಿದ್ದಾರೆ. ಮತ್ತೆ ನಿಮ್ಮಿಬ್ಬರ ಕಾಂಬಿನೇಷನ್​ನಲ್ಲಿ ಸಿನಿಮಾ ನಿರೀಕ್ಷಿಸಬಹುದೇ ಎಂದು ಫ್ಯಾನ್ಸ್​ ಕೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ