ಆರ್ಯನ್​ ಖಾನ್​ ಜತೆ ಬಂಧನಕ್ಕೊಳಗಾದ ಈ ಗ್ಲಾಮರ್ ಬೆಡಗಿ ಯಾರು?

| Updated By: ರಾಜೇಶ್ ದುಗ್ಗುಮನೆ

Updated on: Oct 04, 2021 | 8:39 PM

ಪಾರ್ಟಿ ನಡೆಯುವಾಗ ಆರ್ಯನ್​ ಜತೆ ಮುನ್​ಮುನ್​, ಅರ್ಬಾಜ್​ ಸೇರಿ 8 ಜನರು ಇದ್ದರು. ಇಂದು ನಡೆದ ವಿಚಾರಣೆ ವೇಳೆ ಅಕ್ಟೋಬರ್​ 7ರವರೆಗೆ ಇವರನ್ನು ಎನ್​ಸಿಬಿ ಕಸ್ಟಡಿಗೆ ನೀಡಲಾಗಿದೆ.

ಆರ್ಯನ್​ ಖಾನ್​ ಜತೆ ಬಂಧನಕ್ಕೊಳಗಾದ ಈ ಗ್ಲಾಮರ್ ಬೆಡಗಿ ಯಾರು?
ಮುನ್​​ಮುನ್​-ಶಾರುಖ್​,ಆರ್ಯನ್​​
Follow us on

ಕ್ರೂಸ್​ ಶಿಪ್​ನಲ್ಲಿ ನಡೆಯುತ್ತಿದ್ದ ಡ್ರಗ್ಸ್​ ಪಾರ್ಟಿ ಪ್ರಕರಣದಲ್ಲಿ ಶಾರುಖ್​ ಖಾನ್​ ಮಗ ಆರ್ಯನ್​ ಖಾನ್​ ಜತೆಗೆ ಇನ್ನೂ ಕೆಲವರ ಬಂಧನವಾಗಿದೆ. ಇವರು ಯಾರು ಎನ್ನುವ ಪ್ರಶ್ನೆ ಜನರಲ್ಲಿ ಮೂಡುತ್ತಿದೆ. ಆರ್ಯನ್​ ಖಾನ್​ ಜತೆ ಬಂಧನಕ್ಕೆ ಒಳಗಾದವರು ಮುನ್​ಮುನ್​ ಧಮೆಚಾ ಮತ್ತು ಅರ್ಬಾಜ್ ಸೇತ್​ ಮರ್ಚಂಟ್​.

ಪಾರ್ಟಿ ನಡೆಯುವಾಗ ಆರ್ಯನ್​ ಜತೆ ಮುನ್​ಮುನ್​, ಅರ್ಬಾಜ್​ ಸೇರಿ 8 ಜನರು ಇದ್ದರು. ಇಂದು ನಡೆದ ವಿಚಾರಣೆ ವೇಳೆ ಅಕ್ಟೋಬರ್​ 7ರವರೆಗೆ ಇವರನ್ನು ಎನ್​ಸಿಬಿ ಕಸ್ಟಡಿಗೆ ನೀಡಲಾಗಿದೆ. ಹಾಗಾದರೆ ಮುನ್​ಮುನ್​ ಮತ್ತು ಅರ್ಬಾಜ್​ ಯಾರು? ಈ ಪ್ರಶ್ನೆಗೆ ಇಲ್ಲಿದೆ ಉತ್ತರ.  ಆರ್ಯನ್​ ಅವರು ಬಾಲಿವುಡ್​ ಸ್ಟಾರ್​ ನಟ ಶಾರುಖ್​ ಖಾನ್​ ಮಗ. ಅರ್ಬಾಜ್​ ಎಂಬುವವರು ಆರ್ಯನ್​​ ಅವರ ಆಪ್ತ ಗೆಳೆಯ. ಮುನ್​ಮುನ್​ಗೆ ಅರ್ಬಾಜ್​​ ಗೆಳೆತನವಿತ್ತು.

ಮುನ್​ಮುನ್​ ಮಾಡೆಲ್​. ವಯಸ್ಸು 39. ಮಧ್ಯಪ್ರದೇಶದ ಸಾಗರ್​ ಜಿಲ್ಲೆಯವರು. ಮುನ್​ಮುನ್​ ತಾಯಿ ಕಳೆದ ವರ್ಷ ನಿಧನ ಹೊಂದಿದ್ದಾರೆ. ಅವರ ಸಹೋದರ ಪ್ರಿನ್ಸ್​ ಧಮೇಚಾ ಅವರು ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮುನ್​ಮುನ್​ ಸಾಗರದಲ್ಲಿ ಸಮಯ ಕಳೆದಿದ್ದು ತುಂಬಾನೇ ಕಡಿಮೆ. ಅವರು ದೆಹಲಿಗೆ ಶಿಫ್ಟ್​ ಆಗುವುದಕ್ಕೂ ಮೊದಲು ಭೋಪಾಲ್​ಗೆ ತೆರಳಿದ್ದರು.

ಮುನ್​ಮುನ್​ ಮಾಡೆಲ್​ ಆಗಿ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದಾರೆ. ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 13 ಸಾವಿರ ​ ಹಿಂಬಾಲಕರಿದ್ದಾರೆ. ಅವರು ಕೊನೆಯದಾಗಿ ಪೋಸ್ಟ್ ಮಾಡಿದ್ದು ಸೆಪ್ಟೆಂಬರ್​ 22ರಂದು.

ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಶನಿವಾರ (ಅ.2) ರಾತ್ರಿ ನಡೆಯುತ್ತಿದ್ದ ರೇವ್​ ಪಾರ್ಟಿಯಲ್ಲಿ ಆರ್ಯನ್​ ಕೂಡ ಇದ್ದರು. ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್​ಸಿಬಿ) ಆರ್ಯನ್​ ಅವರನ್ನು ವಶಕ್ಕೆ ಪಡೆದು ಎನ್​ಸಿಬಿ ಕಚೇರಿಗೆ ಕರೆದುಕೊಂಡು ಬಂದಿತ್ತು. ಎನ್​ಸಿಬಿ ಕಚೇರಿ ಒಳಗೆ ಆರ್ಯನ್​ ಅವರಿಗೆ ನಾನಾ ರೀತಿಯ ಪ್ರಶ್ನೆಯನ್ನು ಮಾಡಲಾಯಿತು. ಇಂದು ಆರ್ಯನ್​ ಸೇರಿ ಮೂವರ ಕಸ್ಟಡಿ ವಿಸ್ತರಣೆಗೊಂಡಿದೆ. ಆರ್ಯನ್​ ಮೊಬೈಲ್​ನಲ್ಲಿ ಸಿಕ್ಕ ಪ್ರಮುಖ ಮಾಹಿತಿ ಹಾಗೂ ವಾಟ್ಸ್ಆ್ಯಪ್​ ​ಚಾಟ್​ಗಳನ್ನು ಇಟ್ಟುಕೊಂಡು ಎನ್​ಸಿಬಿ ಪರ ವಕೀಲರು ವಾದ ಮಂಡಿಸಿದ್ದರು. ಈ ಎಲ್ಲಾ ಸಾಕ್ಷ್ಯಗಳು ಆರ್ಯನ್​ ವಿರುದ್ಧವಾಗಿಯೇ ಇದ್ದವು. ಹೀಗಾಗಿ, ಕೋರ್ಟ್​ ಹೆಚ್ಚಿನ ವಿಚಾರಣೆಗೆ ಎನ್​ಸಿಬಿಗೆ ಅವಕಾಶ ನೀಡಿದೆ.

ಇದನ್ನೂ ಓದಿ: ಆರ್ಯನ್ ಏನು ಬೇಕಾದರೂ ಮಾಡಬಹುದು ಎಂದಿದ್ದ ಶಾರುಖ್ ಖಾನ್; ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ಆರ್ಯನ್ ಏನು ಬೇಕಾದರೂ ಮಾಡಬಹುದು ಎಂದಿದ್ದ ಶಾರುಖ್ ಖಾನ್; ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

Published On - 8:36 pm, Mon, 4 October 21