‘ಬರೀ ಸ್ಟಾರ್ ಮಗ ಅಂತ ಸುದ್ದಿ ಮಾಡೋದಲ್ಲ, ಡ್ರಗ್ಸ್ ಜಾಲ ದೊಡ್ಡದಿದೆ’: ನಟ ಗುರುನಂದನ್
‘ಫಸ್ಟ್ ರ‍್ಯಾಂಕ್ ರಾಜು’, ‘ರಾಜು ಕನ್ನಡ ಮೀಡಿಯಂ’ ಸಿನಿಮಾಗಳ ಮೂಲಕ ಗುರುತಿಸಿಕೊಂಡವರು ನಟ ಗುರುನಂದನ್. ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್ನಲ್ಲಿ ಸಿಕ್ಕಿಬಿದ್ದಿರುವ ಹಿನ್ನೆಲೆಯಲ್ಲಿ ಗುರುನಂದನ್ ಮಾತನಾಡಿದ್ದಾರೆ.
ಡ್ರಸ್ ಕೇಸ್ನಲ್ಲಿ ಅರೆಸ್ಟ್ ಆಗಿರುವ ಆರ್ಯನ್ ಖಾನ್ ಬಗ್ಗೆ ಅನೇಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸ್ಯಾಂಡಲ್ವುಡ್ ನಟ ಗುರುನಂದನ್ ಕೂಡ ಈ ಕುರಿತು ಮಾತನಾಡಿದ್ದಾರೆ. ‘ಕೇವಲ ದೊಡ್ಡ ಸ್ಟಾರ್ ಮಕ್ಕಳು ಸಿಕ್ಕಿಬಿದ್ದಾಗ ಮಾತ್ರ ನ್ಯೂಸ್ ಮಾಡುವುದಲ್ಲ. ಇದೊಂದು ದೊಡ್ಡ ಜಾಲವಾಗಿ ಬೆಳೆದಿದೆ. ಇದನ್ನು ಬೇರು ಸಮೇತ ಕಿತ್ತುಹಾಕಬೇಕು. ಕಳೆದ ಬಾರಿ ಬೇರು ಸಮೇತ ಕಿತ್ತು ಹಾಕುತ್ತೇವೆ ಅಂತ ಹೇಳಲಾಗಿತ್ತು. ಆದರೆ ಅದು ಮತ್ತೆ ಹುಟ್ಟಿಕೊಂಡಿದೆ’ ಎಂದು ಗುರುನಂದನ್ ಹೇಳಿದ್ದಾರೆ.
‘ಕೇವಲ ಮೀಡಿಯಾ, ಪೊಲೀಸರು ಅಥವಾ ರಾಜಕಾರಣಗಳಿಂದ ಇದನ್ನು ನಿಯಂತ್ರಣ ಮಾಡೋಕೆ ಆಗಲ್ಲ. ಸಾರ್ವಜನಿಕರು ಕೂಡ ಇದಕ್ಕೆ ಕೈ ಜೋಡಿಸಬೇಕು. ಸುಳಿವು ಸಿಕ್ಕರೆ ಅದನ್ನು ಪೊಲೀಸರಿಗೆ ನೀಡಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆಯವರಿಗೆ ತುಂಬ ಕಷ್ಟ ಆಗುತ್ತದೆ. ಯಾಕೆಂದರೆ ಈ ಜಾಲ ತುಂಬ ಹಬ್ಬಿ ಹೋಗಿದೆ. ಇಂದು ಡ್ರಗ್ಸ್ ಇಲ್ಲ ಎಂದರೆ ಪಾರ್ಟಿಯೇ ಇಲ್ಲ ಎಂಬಂತಾಗಿದೆ ಎನ್ನುವುದು ನನ್ನ ಭಾವನೆ. ಪ್ರತಿಷ್ಠಿತ ಪಾರ್ಟಿಗಳಿಗೆ ಹೋದರೆ ಡ್ರಗ್ಸ್ ಇರುತ್ತದೆ ಎನಿಸುತ್ತದೆ’ ಎಂದು ಗುರುನಂದನ್ ಹೇಳಿದ್ದಾರೆ.
ಇದನ್ನೂ ಓದಿ:
ಡ್ರಗ್ಸ್ ಕೇಸ್: ಎನ್ಸಿಬಿ ಕಚೇರಿಯಲ್ಲಿ ಗಪ್ಚುಪ್ ಆಗಿ ಕುಳಿತ ಶಾರುಖ್ ಪುತ್ರ ಆರ್ಯನ್ ಖಾನ್; ಇಲ್ಲಿದೆ ವಿಡಿಯೋ
ಡ್ರಗ್ಸ್ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಶಾರುಖ್ ಪುತ್ರನ ಹಿನ್ನೆಲೆ ಏನು? ಇಲ್ಲಿದೆ ಆರ್ಯನ್ ಖಾನ್ ಇತಿಹಾಸ