ಬಿಗ್ ಬಾಸ್​ಗೆ ವೈಲ್ಡ್​ ಕಾರ್ಡ್ ಮೂಲಕ ಮತ್ತಷ್ಟು ಸ್ಪರ್ಧಿಗಳ ಎಂಟ್ರಿ?

ಬಿಗ್ ಬಾಸ್ ಕನ್ನಡ ಮನೆಗೆ ಮತ್ತಷ್ಟು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿ ನೀಡಲು ಸಜ್ಜಾಗಿದ್ದಾರೆ. 60 ದಿನಗಳನ್ನು ಪೂರೈಸಿರುವ ಶೋ ಅನ್ನು 118 ದಿನಗಳಿಗೆ ವಿಸ್ತರಿಸಲಾಗಿದೆಯಂತೆ. ಕೆಲ ಅತಿಥಿಗಳು ಮನೆಗೆ ಭೇಟಿ ನೀಡುತ್ತಿದ್ದು, ಅವರಲ್ಲಿ ಕೆಲವರು ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಯಲ್ಲಿ ಉಳಿದುಕೊಳ್ಳುವ ಸಾಧ್ಯತೆ ಇದೆ.

ಬಿಗ್ ಬಾಸ್​ಗೆ ವೈಲ್ಡ್​ ಕಾರ್ಡ್ ಮೂಲಕ ಮತ್ತಷ್ಟು ಸ್ಪರ್ಧಿಗಳ ಎಂಟ್ರಿ?
ಬಿಗ್ ಬಾಸ್

Updated on: Nov 25, 2025 | 12:56 PM

ಪ್ರತಿ ವಾರ ಬಿಗ್ ಬಾಸ್ (Bigg Boss) ಮನೆಯಲ್ಲಿ 2-3 ಮಾತ್ರ ವೈಲ್ಡ್ ಕಾರ್ಡ್ ಎಂಟ್ರಿಗಳು ಇರುತ್ತಿದ್ದವು. ಈ ಸೀಸನ್ ಅಲ್ಲಿ ಮೂರನೇ ವಾರದಲ್ಲೇ ಮೂರು ವೈಲ್ಡ್​ ಕಾರ್ಡ್ ಎಂಟ್ರಿ ಆಗಿತ್ತು. ಈಗ ಬಿಗ್ ಬಾಸ್ 60 ದಿನಗಳನ್ನು ಪೂರೈಸುತ್ತಾ ಬರುತ್ತಿದ್ದು, ಮತ್ತೊಂದಷ್ಟು ಮಂದಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡಲು ರೆಡಿ ಆಗಿದ್ದಾರೆ ಎಂದು ಹೇಳಲಾಗುತ್ತ ಇದೆ. ಇದನ್ನು ಕೇಳಿ ವೀಕ್ಷಕರು ಅಚ್ಚರಿಗೊಂಡಿದ್ದಾರೆ.

ಈ ವಾರ ಬಿಗ್ ಬಾಸ್ ಮನೆಯಲ್ಲಿ ಭರ್ಜರಿ ಪಾರ್ಟಿ ಆಯೋಜನೆ ಮಾಡಲಾಗುತ್ತಿದೆ. ಬಿಗ್ ಬಾಸ್ ಪಾರ್ಟಿಗೆ ಹೊರಗಿನಿಂದ ಅತಿಥಿಗಳು ಬರುತ್ತಿದ್ದಾರೆ. ಮೋಕ್ಷಿತಾ, ಚೈತ್ರಾ, ಮಂಜು ಸೇರಿದಂತೆ ಅನೇಕರು ಬಂದಿದ್ದಾರೆ. ಇನ್ನೂ ಕೆಲವರು ದೊಡ್ಮನೆಗೆ ಬರುವವರಿದ್ದಾರೆ. ಇವರಲ್ಲಿ ಕೆಲವರನ್ನು ವೈಲ್ಡ್ ಕಾರ್ಡ್ ಆಗಿ ದೊಡ್ಮನೆಯಲ್ಲಿ ಉಳಿದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಿಗ್ ಬಾಸ್​ನಲ್ಲಿ ಈ ಬಾರಿಯ ಥೀಮ್ ಎಕ್ಸ್​ಪೆಕ್ಟ್​ ದಿ ಅನ್​ ಎಕ್ಸ್​ಪೆಕ್ಟ್. ಈ ಕಾರಣದಿಂದಲೇ ಬಿಗ್ ಬಾಸ್​ನಲ್ಲಿ ಮೂರನೇ ವಾರದಲ್ಲೇ ಫಿನಾಲೆ ಆಯೋಜನೆ ಮಾಡಲಾಯಿತು. ಆ ಬಳಿಕ ಮೂವರು ವೈಲ್ಡ್​ ಕಾರ್ಡ್​ನ ಒಟ್ಟಿಗೆ ಕರೆತರಲಾಯಿತು. ಈಗ ಮತ್ತೊಂದಷ್ಟು ವೈಲ್ಡ್​ ಕಾರ್ಡ್​ನ ಪರಿಚಯಿಸಲು ವಾಹಿನಿ ನಿರ್ಧರಿಸಿದೆಯಂತೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಬಂದ ಮಾಜಿ ಸ್ಪರ್ಧಿಗಳು; ನಡೀತಿದೆ ದೊಡ್ಡ ಪಾರ್ಟಿ

ಸಾಮಾನ್ಯವಾಗಿ ಬಿಗ್ ಬಾಸ್ 100 ದಿನ ನಡೆಯುತ್ತದೆ. ಕೆಲವೊಮ್ಮೆ ಇದನ್ನು ವಿಸ್ತರಿಸಲಾಗುತ್ತದೆ. ಈ ಬಾರಿಯೂ ಅದನ್ನೇ ಮಾಡಲು ವಾಹಿನಿ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಈ ಬಾರಿ ಶೋ 118 ದಿನ ನಡೆಯಲಿದೆಯಂತೆ. ಹೀಗಾಗಿ, ಎರಡನೇ ರೌಂಡ್​ನಲ್ಲಿ ಒಂದಷ್ಟು ವೈಲ್ಡ್​ ಕಾರ್ಡ್ ಸ್ಪರ್ಧಿಗಳು ದೊಡ್ಮನೆಯ ಪ್ರವೇಶ ಮಾಡುತ್ತಿದ್ದಾರೆ.

ಕಳೆದ ವರ್ಷ ಹನುಮಂತ ಅವರು ಬಿಗ್ ಬಾಸ್​ಗೆ ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಮಾಡಿದ್ದರು. ಅವರು ಕಪ್ ಎತ್ತಿದ್ದಾರೆ. ಸದ್ಯ ರೇಸ್​ನಲ್ಲಿ ಗಿಲ್ಲಿ ಮುಂದಿದ್ದಾರೆ. ಅವರೇ ಕಪ್ ಗೆಲ್ಲುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಈಗ ವೈಲ್ಡ್ ಕಾರ್ಡ್ ಮೂಲಕ ಯಾರನ್ನಾದರೂ ಪರಿಚಯಿಸಿದರೆ ಅವರು ಟೋ್ ಕಾಂಪಿಟೇಷನ್ ಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.