ಸೈನ್ಯಕ್ಕೆ ಸೇರಿದ ಬಾಲಿವುಡ್ ನಟನ ಪುತ್ರಿ, ಭೇಷ್ ಎಂದ ನೆಟ್ಟಿಗರು

Bollywood actor's daughter: ಸಿನಿಮಾ ನಟರ ಮಕ್ಕಳು ನಟರೇ ಆಗುತ್ತಾರೆ, ರಾಜಕಾರಣಿಗಳ ಮಕ್ಕಳು ವಿದೇಶಗಳಲ್ಲಿ ಓದಿ, ರಾಜಕಾರಣಿಗಳೇ ಆಗುತ್ತಾರೆ. ಉದ್ಯಮಿಗಳು, ರಾಜಕಾರಣಿಗಳು, ಸೆಲೆಬ್ರಿಟಿಗಳ ಮಕ್ಕಳು ದೇಶ ಕಾಯುವ ಕೆಲಸಕ್ಕೆ ಸೇರುವುದಿಲ್ಲ, ಬಡವರ ಮಕ್ಕಳಷ್ಟೆ ದೇಶಸೇವೆಗೆ ನಿಲ್ಲುತ್ತಾರೆ ಎಂಬ ಮಾತಿತ್ತು. ಆದರೆ ಅದನ್ನೀಗ ಸುಳ್ಳು ಮಾಡಿದ್ದಾರೆ ಇಶಿತಾ ಶುಕ್ಲಾ. ಇತ್ತೀಚೆಗಷ್ಟೆ ಸೈನ್ಯಕ್ಕೆ ಸೇರಿರುವ ಇಶಿತಾ ಶುಕ್ಲಾ ಬಾಲಿವುಡ್​​ ಮಾತ್ರವಲ್ಲದೆ ದಕ್ಷಿಣದ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ನಟನ ಪುತ್ರಿ, ಮಾತ್ರವಲ್ಲದೆ ಜನಪ್ರಿಯ ನಟ ಬಿಜೆಪಿಯ ಸಂಸದ ಸಹ.

ಸೈನ್ಯಕ್ಕೆ ಸೇರಿದ ಬಾಲಿವುಡ್ ನಟನ ಪುತ್ರಿ, ಭೇಷ್ ಎಂದ ನೆಟ್ಟಿಗರು
Ravi Kishan Daughter

Updated on: Aug 12, 2026 | 12:11 PM

ಸಿನಿಮಾ (Cinema) ನಟರ ಮಕ್ಕಳು ನಟರೇ ಆಗುತ್ತಾರೆ, ರಾಜಕಾರಣಿಗಳ ಮಕ್ಕಳು ವಿದೇಶಗಳಲ್ಲಿ ಓದಿ, ರಾಜಕಾರಣಿಗಳೇ ಆಗುತ್ತಾರೆ. ಉದ್ಯಮಿಗಳು, ರಾಜಕಾರಣಿಗಳು, ಸೆಲೆಬ್ರಿಟಿಗಳ ಮಕ್ಕಳು ದೇಶ ಕಾಯುವ ಕೆಲಸಕ್ಕೆ ಸೇರುವುದಿಲ್ಲ, ಬಡವರ ಮಕ್ಕಳಷ್ಟೆ ದೇಶಸೇವೆಗೆ ನಿಲ್ಲುತ್ತಾರೆ ಎಂಬ ಮಾತಿತ್ತು. ಆದರೆ ಅದನ್ನೀಗ ಸುಳ್ಳು ಮಾಡಿದ್ದಾರೆ ಇಶಿತಾ ಶುಕ್ಲಾ. ಇತ್ತೀಚೆಗಷ್ಟೆ ಸೈನ್ಯಕ್ಕೆ ಸೇರಿರುವ ಇಶಿತಾ ಶುಕ್ಲಾ ಬಾಲಿವುಡ್​​ ಮಾತ್ರವಲ್ಲದೆ ದಕ್ಷಿಣದ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ನಟನ ಪುತ್ರಿ, ಮಾತ್ರವಲ್ಲದೆ ಜನಪ್ರಿಯ ನಟ ಬಿಜೆಪಿಯ ಸಂಸದ ಸಹ.

ನಟ, ಬಿಜೆಪಿ ಸಂಸದ ರವಿ ಕಿಶನ್ ಅವರ ಪುತ್ರಿ ಇಶಿತಾ ಶುಕ್ಲಾ ಸುಲಭವಾಗಿ ಚಿತ್ರರಂಗಕ್ಕೆ ಕಾಲಿಟ್ಟು ನಟಿಯಾಗುವ ಅಪ್ಪನ ನೆರಳಲ್ಲೇ ಸಾಗಿ ರಾಜಕಾರಣಿ ಆಗುವ ಅವಕಾಶ ಇದ್ದರೂ ಅವೆರಡನ್ನೂ ತೊರೆದು ಸೈನ್ಯಕ್ಕೆ ಸೇರಿದ್ದಾರೆ. ಇಶಿತಾ ದೆಹಲಿ ವಿಶ್ವವಿದ್ಯಾನಿಲಯದ ಅಂಗಸಂಸ್ಥೆಯಾದ ರಾಜ್‌ಧಾನಿ ಕಾಲೇಜಿನ ಪದವೀಧರರಾಗಿದ್ದಾರೆ. ಪದವಿ ಕಲಿಯುವಾಗಲೇ ಇಶಿತಾ, ದೆಹಲಿ ನಿರ್ದೇಶನಾಲಯದ 7 ಗರ್ಲ್ಸ್ ಬೆಟಾಲಿಯನ್‌ನ ಕೆಡೆಟ್ ಆಗಿದ್ದರು. ಇಶಿತಾ 2022 ರಲ್ಲಿ ಪ್ರಧಾನಿ ಮೋದಿ ಅವರ ಎನ್‌ಸಿಸಿ (NCC) ರ್ಯಾಲಿಯಲ್ಲಿ ಭಾಗವಹಿಸಿದ್ದರು ಮತ್ತು 1500 ಕೆಡೆಟ್‌ಗಳಲ್ಲಿ ಆಯ್ಕೆಯಾಗಿ ಅರ್ಹತಾ ಪ್ರಶಸ್ತಿಯನ್ನು ಪಡೆದಿದ್ದರು. 21 ನೇ ವಯಸ್ಸಿನಲ್ಲಿ, ಅವರು ಸೈನ್ಯಕ್ಕೆ ಅರ್ಜಿ ಸಲ್ಲಿಸಿ, 2023 ರಲ್ಲಿ ಭಾರತೀಯ ರಕ್ಷಣಾ ಪಡೆಗಳಲ್ಲಿ ಹೊಸದಾಗಿ ಸ್ಥಾಪಿಸಲಾದ ‘ಅಗ್ನಿವೀರ್’ ನೇಮಕಾತಿ ಯೋಜನೆಯಡಿ ‘ಮಹಿಳಾ ಅಗ್ನಿವೀರ’ರಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ:‘ಅಬ್ಬಬ್ಬ ಅಂಥ ಸಿನಿಮಾ ನೋಡಿರಲಿಲ್ಲ’ ಕನ್ನಡ ಚಿತ್ರದ ಬಗ್ಗೆ ತೆಲುಗು ನಟ ಮಾತು

ರವಿ ಕಿಶನ್ ಹಾಗೂ ಅವರ ಪತ್ನಿ ಪ್ರೀತಿ ಶುಕ್ಲಾ ಅವರ ನಾಲ್ವರು ಮಕ್ಕಳಲ್ಲಿ ಒಬ್ಬರಾಗಿದ್ದಾರೆ ಇಶಿತಾ. ಇಶಿತಾ ಅವರಿಗೆ ವೃತ್ತಿಪರ ಛಾಯಾಗ್ರಹಣದಲ್ಲೂ ಆಸಕ್ತಿಯಿದೆ. ಅವರು ಅಖಿಲ ಭಾರತ ಶೂಟಿಂಗ್ ಸ್ಪರ್ಧೆಯಲ್ಲಿ ಸ್ಪರ್ಧಿಸುವ ಮೂಲಕ ಸ್ನೈಪರ್ ಶೂಟರ್ ಆಗಿಯೂ ಹೆಸರು ಗಳಿಸಿದ್ದಾರೆ. ಇಶಿತಾ ಅವರ ಈ ಸಾಧನೆಗೆ ತೀವ್ರ ಪ್ರಶಂಸೆ ವ್ಯಕ್ತವಾಗಿದೆ. ಖುದ್ದು ಎನ್​​ಸಿಸಿ ಕೆಡೆಟ್ ಆಗಿದ್ದ ನಟ ಆರ್ ಮಾಧವನ್ ಇಶಿತಾರ ಸಾಧನೆಯನ್ನು ಕೊಂಡಾಡಿದ್ದಾರೆ.

ಇಶಿತಾರ ತಂದೆ ರವಿಕಿಶನ್ ಖ್ಯಾತ ನಟ. ಭೋಜ್​​ಪುರಿ ಚಿತ್ರರಂಗದ ಸ್ಟಾರ್ ಆಗಿರುವ ರವಿಕಿಶನ್, ಹಲವಾರು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಲಾಪತಾ ಲೇಡೀಸ್ ಸಿನಿಮಾನಲ್ಲಿ ಅವರ ಪೊಲೀಸ್ ಪಾತ್ರ ಭಾರಿ ಜನಪ್ರಿಯತೆ ಗಳಿಸಿತ್ತು. ತೆಲುಗಿನಲ್ಲಿ ‘ರೇಸುಗುರ್ರಂ’, ‘ಡಾಕು ಮಹಾರಾಜ್’, ‘ಸೈ ರಾ ನರಸಿಂಹ ರೆಡ್ಡಿ’, ‘ಎನ್​​ಟಿಆರ್’ ಕನ್ನಡದಲ್ಲಿ ‘ರಾಬರ್ಟ್’, ‘ದ್ರೋಣ’, ‘ಶಿವಾರ್ಜುನ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ರವಿಕಿಶನ್ ಅವರು ಬಿಜೆಪಿ ಸಂಸದರು ಸಹ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:01 pm, Wed, 12 August 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us