ಗ್ರೀಸ್​ನಲ್ಲಿ ಕೃತಿ ಸನೋನ್ ಧಮ್ಮಾರೋ ಧಮ್; ಸ್ಟೈಲಿಶ್ ಆಗಿ ಸಿಗರೇಟ್ ಸೇದುತ್ತಾ ನಿಂತ ನಟಿ

|

Updated on: Jul 30, 2024 | 7:35 AM

ಇತ್ತೀಚೆಗೆ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಯುವತಿಯೊಬ್ಬಳು ಸಿಗರೇಟ್ ಸೇದುತ್ತಾ ನಿಂತಿರೋದು ಕಂಡು ಬಂದಿದೆ. ಈ ವಿಡಿಯೋದಲ್ಲಿ ಇರೋದು ಕೃತಿ ಸನೋನ್ ಎಂದು ಕೆಲವರು ಹೇಳಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆ ನಡೆದಿದೆ.

ಗ್ರೀಸ್​ನಲ್ಲಿ ಕೃತಿ ಸನೋನ್ ಧಮ್ಮಾರೋ ಧಮ್; ಸ್ಟೈಲಿಶ್ ಆಗಿ ಸಿಗರೇಟ್ ಸೇದುತ್ತಾ ನಿಂತ ನಟಿ
ಕೃತಿ
Follow us on

ಬಾಲಿವುಡ್ ನಟಿ ಕೃತಿ ಸನೋನ್ ಸದ್ಯ ಗ್ರೀಸ್ ಪ್ರವಾಸದಲ್ಲಿ ಇದ್ದಾರೆ. ಅಲ್ಲಿ ಅವರು ಹಾಯಾಗಿ ಧಮ್ ಹೊಡೆಯುತ್ತಾ ನಿಂತಿರೋ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಅನೇಕರು ಸಾಕಷ್ಟು ಟೀಕೆ ಮಾಡಿದ್ದಾರೆ. ಕೃತಿ ಸನೋನ್ ಅವರು ಇತ್ತೀಚೆಗೆ ಬರ್ತ್​ಡೇ ಆಚರಿಸಿಕೊಂಡರು. ಬಾಯ್​​ಫ್ರೆಂಡ್ ಕಬೀರ್ ಬಾಹಿಯಾ ಜೊತೆ ಅವರು ಗ್ರೀಸ್ ತೆರಳಿದ್ದರು. ತಮ್ಮನ್ನು ಅಲ್ಲಿ ಗುರುತಿಸೋರು ಯಾರೂ ಇಲ್ಲ ಎಂದು ಅವರು ಭಾವಿಸಿದ್ದರು. ಆದರೆ, ಹಾಗಾಗಿಲ್ಲ.

ಇತ್ತೀಚೆಗೆ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಯುವತಿಯೊಬ್ಬಳು ಸಿಗರೇಟ್ ಸೇದುತ್ತಾ ನಿಂತಿರೋದು ಕಂಡು ಬಂದಿದೆ. ಈ ವಿಡಿಯೋದಲ್ಲಿ ಇರೋದು ಕೃತಿ ಸನೋನ್ ಎಂದು ಕೆಲವರು ಹೇಳಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆ ನಡೆದಿದೆ. ಕೆಲವರು ನಟಿಯನ್ನು ಟೀಕಿಸಿದ್ದಾರೆ. ‘ಮಾದರಿ ಆಗಬೇಕಾದವರೇ ಹೀಗಾದರೆ ಹೇಗೆ’ ಎಂದು ಕೆಲವರು ಕೇಳಿದ್ದಾರೆ. ‘ಗ್ಲಾಮರ್ ಮಾತ್ರ ಸಾಕಾಗುವುದಿಲ್ಲ, ಆರೋಗ್ಯವೂ ಬೇಕು’ ಎಂದು ಕೆಲವರು ಹೇಳಿದ್ದಾರೆ.

ಇದನ್ನೂ ಓದಿ: ‘ಕ್ರೂ’ ಸಿನಿಮಾದಿಂದ ಗೆದ್ದು ಬೀಗಿದ ಬಾಲಿವುಡ್​ ನಟಿ ಕೃತಿ ಸನೋನ್​

ಇನ್ನು ಕೃತಿಯನ್ನು ಕೆಲವರು ಬೆಂಬಲಿಸಿದ್ದಾರೆ. ‘ಇದು ಅವರ ಖಾಸಗಿ ವಿಚಾರ. ಅವರು ಹೊರದೇಶದಲ್ಲಿ ಏನೇ ಮಾಡಿದರೂ ಅದು ಅವರಿಗೆ ಬಿಟ್ಟ ವಿಚಾರ. ಸಿಗರೇಟ್​ನ ಅವರ ಪ್ರಮೋಟ್ ಮಾಡುತ್ತಿಲ್ಲವಲ್ಲ. ಹೀಗಿರುವಾಗ ನೀವೇಕೆ ಅದಕ್ಕೆ ಪ್ರಚಾರ ನೀಡುತ್ತೀರಿ’ ಎಂದು ಕೆಲವರು ಕೇಳಿದ್ದಾರೆ. ‘ಈ ವಾದದಲ್ಲಿ ಹುರುಳಿಲ್ಲ. ಜನರು ಸಿಗರೇಟ್ ಸೇದುತ್ತಾರೆ. ಅದರಲ್ಲೇನಿದೆ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

Kristi Sanon smoking in Greece
byu/Stunning_Cow_5233 inBollyBlindsNGossip


ಈ ಮೊದಲಿನ ಸಂದರ್ಶನ ಒಂದರಲ್ಲಿ ತಾವು ಸಿಗರೇಟ್ ಸೇದುವುದಿಲ್ಲ ಎಂದು ಅವರು ಹೇಳಿಕೊಂಡಿದ್ದರು. ‘ನಾನು ಸ್ಮೋಕಿಂಗ್ ಮಾಡಲ್ಲ. ನನ್ನ ಪಾತ್ರ ಕೇಳಿದರೆ ಮಾತ್ರ ನಾನು ಕೈಯಲ್ಲಿ ಸಿಗರೇಟ್ ಹಿಡಿಯುತ್ತೇನೆ’ ಎಂದು ಅವರು ಹೇಳಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:30 am, Tue, 30 July 24