2014ರಲ್ಲಿ ರಿಲೀಸ್ ಆದ ‘ಬೆಂಗಳೂರು ಡೇಸ್’ ಸಿನಿಮಾ (Bangalore Days) ಸೂಪರ್ ಹಿಟ್ ಆಯಿತು. ಮಲಯಾಳಂನ ಈ ಸಿನಿಮಾ ಸಿಂಪಲ್ ಆಗಿತ್ತು. ಈ ಕಾರಣದಿಂದಲೇ ಜನರಿಗೆ ಇಷ್ಟವಾಯಿತು. ಇನ್ನು ಸಿನಿಮಾದ ಬಹುತೇಕ ಶೂಟಿಂಗ್ ಬೆಂಗಳೂರಿನಲ್ಲೇ ನಡೆದಿದ್ದರಿಂದ ಕರ್ನಾಟಕದವರಿಗೂ ಇಷ್ಟವಾಗಿತ್ತು. ಈಗ ಸಿನಿಮಾನ ಬಾಲಿವುಡ್ನವರು ರಿಮೇಕ್ ಮಾಡಿದ್ದಾರೆ. ಚಿತ್ರದ ಟ್ರೇಲರ್ ನೋಡಿದ ಅನೇಕರು ಬಾಯಿಗೆ ಬಂದಂತೆ ಬೈದಿದ್ದಾರೆ. ಮೂಲ ಚಿತ್ರವನ್ನು ಹಾಳು ಮಾಡಲಾಗಿದೆ ಎಂದು ಅನೇಕರು ಆರೋಪಿಸಿದ್ದಾರೆ.
‘ಬೆಂಗಳೂರು ಡೇಸ್’ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್, ನಿವೀನ್ ಪೌಳಿ, ನಜ್ರಿಯಾ ನಜೀಮ್, ಫಹಾದ್ ಫಾಸಿಲ್ ನಟಿಸಿದ್ದರು. ಈ ಸಿನಿಮಾ ಸಿಂಪಲ್ ಆಗಿದ್ದ ಕಾರಣದಿಂದಲೇ ಚಿತ್ರವನ್ನು ಜನರು ಇಷ್ಟಪಟ್ಟರು. ಈಗ ಸಿನಿಮಾ ಹಿಂದಿಗೆ ರಿಮೇಕ್ ಆಗಿದೆ. ‘ಯಾರಿಯಾ 2’ ಹೆಸರಿನಲ್ಲಿ ಸಿನಿಮಾ ಮೂಡಿಬರುತ್ತಿದ್ದು, ಟ್ರೇಲರ್ ರಿಲೀಸ್ ಆಗಿದೆ. ಮೂಲ ಸಿನಿಮಾ ನೋಡಿರುವ ಅನೇಕರು ಈ ಚಿತ್ರದ ಟ್ರೇಲರ್ ತೆಗಳಿದ್ದಾರೆ.
ರಾಧಿಕಾ ರಾವ್ ಹಾಗೂ ವಿನಯ್ ಸಪ್ರು ಅವರು ‘ಬೆಂಗಳೂರು ಡೇಸ್’ ಚಿತ್ರವನ್ನು ‘ಯಾರಿಯಾ 2’ ಹೆಸರಲ್ಲಿ ರಿಮೇಕ್ ಮಾಡಿದ್ದಾರೆ. ಟಿ-ಸೀರೀಸ್ ಬ್ಯಾನರ್ ಅಡಿಯಲ್ಲಿ ಭೂಷಣ್ ಕುಮಾರ್ ಮೊದಲಾದವರು ಸಿನಿಮಾನ ನಿರ್ಮಾಣ ಮಾಡಿದ್ದಾರೆ. ದಿವ್ಯಾ ಖೊಸ್ಲಾ ಕುಮಾರ್, ಯಶ್ ದಾಸ್ಗುಪ್ತಾ, ಅನಸ್ವರ ರಾಜನ್, ಮೀಜಾನ್ ಜಫ್ರಿ,
ವಾಸಿಮ್ ಹುಸೇನ್, ಪ್ರಿಯಾ ಪ್ರಕಾಶ್ ವಾರಿಯರ್ ಮೊದಲಾದವರು ನಟಿಸಿದ್ದಾರೆ. ‘ಯಾರಿಯಾ 2’ ಚಿತ್ರ ಅಕ್ಟೋಬರ್ 20ರಂದು ರಿಲೀಸ್ ಆಗಲಿದೆ.
ಇದನ್ನೂ ಓದಿ: 80ರ ದಶಕದ ಈ ಸಿನಿಮಾದ ರಿಮೇಕ್ ‘ಜವಾನ್’? ಆ ಚಿತ್ರದ ಕಥೆಯೂ ಹೀಗೆಯೇ ಇದೆ
ತಮಿಳಿನ ‘ಕೈದಿ’ ಚಿತ್ರವನ್ನು ‘ಭೋಲಾ’ ಹೆಸರಲ್ಲಿ ಹಿಂದಿಗೆ ರಿಮೇಕ್ ಮಾಡಲಾಯಿತು. ಬಾಲಿವುಡ್ ಫ್ಲೇವರ್ ಬೆರೆಸಲಾಯಿತು. ದಕ್ಷಿಣದ ಹಿಟ್ ಆದ ಈ ಚಿತ್ರ ಹಿಂದಿಯಲ್ಲಿ ಫ್ಲಾಪ್ ಆಯಿತು. ಅಜಯ್ ದೇವಗನ್ ಚಿತ್ರದಲ್ಲಿ ನಟಿಸಿದ್ದರು. ‘ಯಾರಿಯಾ 2’ ಚಿತ್ರದ ಕಥೆಯೂ ಹಾಗೆಯೇ ಆಗಲಿದೆ ಎಂದು ಅನೇಕರು ಹೇಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:37 am, Thu, 28 September 23