AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜವಾನ್’ ಫೈಟ್ ಮರುಸೃಷ್ಠಿ: ಭೇಷ್ ಎಂದ ಶಾರುಖ್ ಖಾನ್

Shah Rukh Khan: ಶಾರುಖ್ ಖಾನ್​ರ 'ಜವಾನ್' ಸಿನಿಮಾದ ಫೈಟ್ ದೃಶ್ಯವೊಂದನ್ನು ಕೆಲ ಯುವಕರು ಮೊಬೈಲ್ ಬಳಸಿ ಮರುಸೃಷ್ಠಿ ಮಾಡಿದ್ದು, ಸ್ವತಃ ಶಾರುಖ್ ಖಾನ್ ಭೇಷ್ ಎಂದಿದ್ದಾರೆ.

'ಜವಾನ್' ಫೈಟ್ ಮರುಸೃಷ್ಠಿ: ಭೇಷ್ ಎಂದ ಶಾರುಖ್ ಖಾನ್
ಮಂಜುನಾಥ ಸಿ.
|

Updated on: Sep 27, 2023 | 7:48 PM

Share

ಶಾರುಖ್ ಖಾನ್ (Shah Rukh Khan) ನಟನೆಯ ‘ಜವಾನ್‘ (Jawan) ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿದೆ. ಬಾಕ್ಸ್ ಆಫೀಸ್​ನಲ್ಲಿ 1000 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಇನ್ನೂ ಗಳಿಸುತ್ತಲೇ ಇದೆ. ಸಿನಿಮಾದ ಆಕ್ಷನ್ ದೃಶ್ಯಗಳು ಪ್ರೇಕ್ಷಕರಿಗೆ ಬಹುವಾಗಿ ಹಿಡಿಸಿವೆ. ಅದರಲ್ಲಿಯೂ ಶಾರುಖ್ ಖಾನ್​ರ ‘ಸ್ವ್ಯಾಗ್’ ಅನ್ನು ಅಭಿಮಾನಿಗಳು ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚೆಗೆ ಶಾರುಖ್ ಖಾನ್ ಅಭಿಮಾನಿಗಳು ಕೆಲವರು ‘ಜವಾನ್’ ಸಿನಿಮಾದ ಫೈಟ್ ದೃಶ್ಯವೊಂದನ್ನು ಮರುಸೃಷ್ಟಿಸಿದ್ದು, ಸ್ವತಃ ಶಾರುಖ್ ಖಾನ್ ಭೇಷ್ ಎಂದಿದ್ದಾರೆ.

ಅರ್ಬಾಜ್ ಕರೀಂ ಹೆಸರಿನ ಶಾರುಖ್ ಖಾನ್ ಅಭಿಮಾನಿ, ಒಂದು ಸ್ಮಾರ್ಟ್ ಫೋನ್ ಬಳಸಿ ‘ಜವಾನ್’ ಸಿನಿಮಾದ ಫೈಟ್ ದೃಶ್ಯವೊಂದನ್ನು ರೀಕ್ರಿಯೇಟ್ ಮಾಡಿದ್ದಾರೆ. ಸಿನಿಮಾದಲ್ಲಿ ಇರುವಂತೆ, ಶಾರುಖ್​ರಿಂದ ಹೊಡೆತ ತಿನ್ನುವ ದುಷ್ಟರು ಹಾರುವ ದೃಶ್ಯಗಳು, ಹೊಗೆಯ ಮಧ್ಯದಿಂದ ಶಾರುಖ್ ಖಾನ್ ಬರುವ ದೃಶ್ಯ, ಶಾರುಖ್ ಖಾನ್ ಮುಂದೆ ಪಾರಿವಾಳ ಹಾರುವ ದೃಶ್ಯ ಎಲ್ಲವನ್ನೂ ಚಿತ್ರೀಕರಿಸಿ ಅದಕ್ಕೆ ಸೂಕ್ತ ಹಿನ್ನೆಲೆ ಸಂಗೀತವನ್ನು ಸೇರಿಸಲಾಗಿದೆ. ಜೊತೆಗೆ ನಟರು ಸಹ ಸಖತ್ ಆಗಿ ಫೈಟ್ ದೃಶ್ಯದಲ್ಲಿ ನಟಿಸಿದ್ದಾರೆ.

‘ಜಾರ್​ಮ್ಯಾಟಿಕ್ಸ್’ ಹೆಸರಿನ ಯೂಟ್ಯೂಬ್ ಚಾನೆಲ್​ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಈ ವಿಡಿಯೋವನ್ನು ಸ್ಮಾರ್ಟ್​ಫೋನ್​ನಿಂದ ಚಿತ್ರೀಕರಿಸಲಾಗಿದ್ದು, ಪಾರಿವಾಳ ಹಾರುವ ಎಫೆಕ್ಟ್​ಗೆ ಗ್ರೀನ್​ಮ್ಯಾಟ್ ಬಳಸಲಾಗಿದೆ, ಹೊಗೆಯ ಎಫೆಕ್ಟ್ ಅನ್ನು ಬೇರೆ ವೆಬ್​ಸೈಟ್​ನಿಂದ ಪಡೆಯಲಾಗಿದೆ, ಇನ್ನಿತರೆ ಮಾಹಿತಿಗಳನ್ನು ಸಹ ವಿಡಿಯೋದ ಡಿಸ್​ಕ್ರಿಪ್ಷನ್​ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಭಾರತದಲ್ಲಿ 19ನೇ ದಿನಕ್ಕೆ 566 ಕೋಟಿ ರೂ. ಗಳಿಸಿದ ‘ಜವಾನ್​’; ಮುಂದಿನ ಗುರಿ 600 ಕೋಟಿ

ಶಾರುಖ್ ಖಾನ್, ಟ್ವಿಟ್ಟರ್​ನಲ್ಲಿ ಈ ವಿಡಿಯೋ ನೋಡಿ ಖುಷಿಯಾಗಿದ್ದು, ”ವಿಡಿಯೋ ಅದ್ಭುತವಾಗಿದೆ. ನಿಮ್ಮ ಕೆಲಸ ಚೆನ್ನಾಗಿದೆ. ಸಖತ್ ಮಾಸಿಯಾಗಿ ವಿಡಿಯೋ ಕಾಣುತ್ತಿದೆ. ನಿಮ್ಮ ಈ ಶ್ರಮಕ್ಕೆ ಧನ್ಯವಾದ. ನಿಮಗೆ ನನ್ನ ಪ್ರೀತಿಪೂರ್ವಕ ವಂದನೆಗಳು” ಎಂದಿದ್ದಾರೆ.

ಜನಪ್ರಿಯ ಸಿನಿಮಾಗಳ ಸೀನ್​ಗಳನ್ನು ಯುವಕರು ಮೊಬೈಲ್, ಡಿಎಸ್​ಎಲ್​ಆರ್ ಬಳಸಿ ಮರುಸೃಷ್ಠಿ ಮಾಡುವ ಟ್ರೆಂಡ್ ಕಳೆದ ಕೆಲ ವರ್ಷಗಳಿಂದ ನಡೆಯುತ್ತಿದೆ. ಆಫ್ರಿಕಾದ ದೇಶವೊಂದರಲ್ಲಿ ಕೆಲ ಬಾಲಕರು ಇಂಗ್ಲೀಷ್ ಸಿನಿಮಾಗಳ ಟ್ರೈಲರ್​ಗಳನ್ನು ತಮ್ಮದೇ ರೀತಿಯಲ್ಲಿ ರೀಕ್ರಿಯೇಟ್ ಮಾಡಿ ವಿಶ್ವದ ಗಮನ ಸೆಳೆದಿದ್ದರು. ಅವರ ವಿಡಿಯೋಗಳು ಪ್ರಪಂಚದಾದ್ಯಂತ ವೈರಲ್ ಆಗಿದ್ದವು. ತೆಲಂಗಾಣದ ಕೆಲ ಹುಡುಗರ ತಂಡ ಸಹ ‘ವಕೀಲ್ ಸಾಬ್’, ‘ಭರತ್ ಅನೇ ನೇನು’ ಇನ್ನೂ ಕೆಲವು ಸಿನಿಮಾಗಳ ಫೈಟ್ ದೃಶ್ಯಗಳನ್ನು ರೀಕ್ರಿಯೇಟ್ ಮಾಡಿ ಭೇಷ್ ಎನಿಸಿಕೊಂಡಿದ್ದರು. ಈಗ ಈ ಹೊಸ ತಂಡ ಹುಟ್ಟಿಕೊಂಡಿದೆ.

‘ಜವಾನ್’ ಸಿನಿಮಾದಲ್ಲಿನ ಆಕ್ಷನ್ ದೃಶ್ಯಗಳನ್ನು ಪ್ರೇಕ್ಷಕರು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ‘ಜವಾನ್’ ಪಕ್ಕಾ ಆಕ್ಷನ್ ಸಿನಿಮಾ ಆಗಿದ್ದು, ಶಾರುಖ್ ಖಾನ್ ಸಹ ಹಿಂದೆಂದೂ ಕಾಣದ ಮಾಸ್ಸಿ ಅವತಾರದಲ್ಲಿ ‘ಜವಾನ್’ನಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ