AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ 19ನೇ ದಿನಕ್ಕೆ 566 ಕೋಟಿ ರೂ. ಗಳಿಸಿದ ‘ಜವಾನ್​’; ಮುಂದಿನ ಗುರಿ 600 ಕೋಟಿ

ಸತತ 19 ದಿನ ಪ್ರದರ್ಶನ ಕಂಡಿರುವ ‘ಜವಾನ್​’ ಸಿನಿಮಾ ಸೋಮವಾರ (ಸೆಪ್ಟೆಂಬರ್​ 25) ಭಾರತದ ಮಾರುಕಟ್ಟೆಯಲ್ಲಿ 5 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಈವರೆಗೆ ಭಾರತದಲ್ಲಿ ಒಟ್ಟು ಕಲೆಕ್ಷನ್​ 566 ಕೋಟಿ ರೂಪಾಯಿ ಆಗಿದೆ. ವಿಶ್ವಾದ್ಯಂತ ಈ ಸಿನಿಮಾ ಕಲೆಕ್ಷನ್​ ಸಾವಿರ ಕೋಟಿ ರೂಪಾಯಿ ಮೀರಿದೆ.

ಭಾರತದಲ್ಲಿ 19ನೇ ದಿನಕ್ಕೆ 566 ಕೋಟಿ ರೂ. ಗಳಿಸಿದ ‘ಜವಾನ್​’; ಮುಂದಿನ ಗುರಿ 600 ಕೋಟಿ
ಜವಾನ್
ಮದನ್​ ಕುಮಾರ್​
|

Updated on: Sep 26, 2023 | 11:31 AM

Share

ಈ ವರ್ಷದ ಸಕ್ಸಸ್​ಫುಲ್​ ಸಿನಿಮಾಗಳ ಪಟ್ಟಿಯಲ್ಲಿ ‘ಜವಾನ್​’ ಸಿನಿಮಾ (Jawan Movie) ಅಗ್ರ ಸ್ಥಾನ ಪಡೆದುಕೊಂಡಿದೆ. ವಿಶ್ವ ಬಾಕ್ಸ್​ ಆಫೀಸ್​ನಲ್ಲಿ 1004 ಕೋಟಿ ರೂಪಾಯಿ ಬಾಚಿಕೊಂಡಿರುವ ಈ ಸಿನಿಮಾ ಭಾರತದಲ್ಲಿ 19ನೇ ದಿನಕ್ಕೆ 566 ಕೋಟಿ ರೂಪಾಯಿ ಗಳಿಸಿದೆ. ಈ ಸಿನಿಮಾದ ಗೆಲುವಿನಿಂದ ಶಾರುಖ್​ ಖಾನ್​ (Shah Rukh Khan) ಅವರು ಬಾಕ್ಸ್​ ಆಫೀಸ್​ ಕಿಂಗ್​ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅಟ್ಲಿ ನಿರ್ದೇಶನದ ಈ ಚಿತ್ರಕ್ಕೆ ವಿಶ್ವಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸತತ 19 ದಿನ ಪ್ರದರ್ಶನ ಕಂಡಿರುವ ‘ಜವಾನ್​’ ಸಿನಿಮಾ ಸೋಮವಾರ (ಸೆಪ್ಟೆಂಬರ್​ 25) ಭಾರತದ ಮಾರುಕಟ್ಟೆಯಲ್ಲಿ 5 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಈವರೆಗೆ ಭಾರತದಲ್ಲಿ ಒಟ್ಟು ಕಲೆಕ್ಷನ್​ (Jawan Box Office Collection) 566 ಕೋಟಿ ರೂಪಾಯಿ ಆಗಿದ್ದು, ಮುಂದಿನ ಗುರಿ 600 ಕೋಟಿ ರೂಪಾಯಿ! ನಾಲ್ಕನೇ ವೀಕೆಂಡ್​ನಲ್ಲಿ ಈ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಂಡರೆ ಖಂಡಿತವಾಗಿಯೂ ಈ ಗುರಿ ತಲುಪಬಹುದು.

ಶಾರುಖ್​ ಖಾನ್, ಪ್ರಿಯಾಮಣಿ, ಸುನಿಲ್​ ಗ್ರೋವರ್​, ವಿಜಯ್​ ಸೇತುಪತಿ, ಸಾನ್ಯಾ ಮಲ್ಹೋತ್ರಾ, ದೀಪಿಕಾ ಪಡುಕೋಣೆ ಮುಂತಾದವರು ‘ಜವಾನ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ದೊಡ್ಡ ಗೆಲುವು ಸಿಕ್ಕಿದ್ದರಿಂದ ಈ ಎಲ್ಲ ಕಲಾವಿದರ ಖ್ಯಾತಿ ಹೆಚ್ಚಿದೆ. ನಿರ್ದೇಶಕ ಅಟ್ಲಿ ಅವರು ಈಗ ಪ್ಯಾನ್​ ಇಂಡಿಯಾ ಡೈರೆಕ್ಟರ್​ ಆಗಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅವರ ಮುಂದಿನ ಸಿನಿಮಾ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಸೃಷ್ಟಿ ಆಗಿದೆ.

ಇದನ್ನೂ ಓದಿ: ಸಾವಿರ ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದ ‘ಜವಾನ್​’ ಸಿನಿಮಾ; ಶಾರುಖ್​ ಖಾನ್​ ಹೊಸ ದಾಖಲೆ

ಶಾರುಖ್​ ಖಾನ್ ಅವರು ‘ಜವಾನ್​’ ಸಿನಿಮಾದಲ್ಲಿ ಆ್ಯಕ್ಷನ್​ ಅವತಾರ ತಾಳಿದ್ದಾರೆ. ಇದು ಅಭಿಮಾನಿಗಳಿಗೆ ಹೆಚ್ಚು ಇಷ್ಟ ಆಗಿದೆ. ಈ ಸಿನಿಮಾದಲ್ಲಿ ಮಾಸ್​ ಮನರಂಜನೆಯ ಜೊತೆಗೆ ಅನೇಕ ಸಾಮಾಜಿಕ ಕಳಕಳಿಯ ವಿಷಯಗಳನ್ನು ಕೂಡ ಹೇಳಲಾಗಿದೆ. ಚಿತ್ರದ ಗೆಲುವಿಗೆ ಇದು ಕೂಡ ಪ್ರಮುಖ ಕಾರಣ. ಉತ್ತರ ಭಾರತ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ‘ಜವಾನ್​’ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಇದನ್ನೂ ಓದಿ: ‘ಜವಾನ್​’ ತಂಡದಲ್ಲಿ ಕಿರಿಕ್​? ನಯನತಾರಾ ಮುನಿಸಿಗೆ ಪ್ರತಿಕ್ರಿಯೆ ನೀಡಿದ ಶಾರುಖ್​ ಖಾನ್​

ಗೌರಿ ಖಾನ್​ ಅವರು ‘ರೆಡ್​ ಚಿಲ್ಲೀಸ್​ ಎಂಟರ್​ಟೇನ್ಮೆಂಟ್’ ಬ್ಯಾನರ್​ ಮೂಲಕ ‘ಜವಾನ್​’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅವರಿಗೆ ಈ ಚಿತ್ರದಿಂದ ಭರ್ಜರಿ ಲಾಭ ಆಗಿದೆ. ಶಾರುಖ್​ ಖಾನ್​ ನಟಿಸುತ್ತಿರುವ ‘ಡಂಕಿ’ ಸಿನಿಮಾ ಕೂಡ ಇದೇ ವರ್ಷ ಬಿಡುಗಡೆಯಾಗಿ ಸೂಪರ್​ ಹಿಟ್​ ಆದರೆ ಒಂದೇ ವರ್ಷದಲ್ಲಿ ಮೂರು ಗೆಲುವು ಪಡೆದ ಖ್ಯಾತಿ ಅವರಿಗೆ ಸಲ್ಲಲಿದೆ. ‘ಡಂಕಿ’ ಚಿತ್ರಕ್ಕೆ ರಾಜ್​ಕುಮಾರ್​ ಹಿರಾನಿ ಅವರು ನಿರ್ದೇಶನ ಮಾಡುತ್ತಿರುವುದರಿಂದ ಗೆಲುವು ಖಚಿತ ಎಂದು ಸಿನಿಪ್ರಿಯರು ಮಾತನಾಡಿಕೊಳ್ಳುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ