ಬಾಲಿವುಡ್​ನಲ್ಲಿ ಮತ್ತೊಂದು ‘ಅನಿಮಲ್’; ‘ಧುರಂಧರ್’ ಚಿತ್ರದಲ್ಲಿ ರಣವೀರ್ ಸಿಂಗ್ ರಕ್ಕಸ ಅವತಾರ

ರಣವೀರ್ ಸಿಂಗ್ ನಟನೆಯ ಹೊಸ ಚಿತ್ರ 'ಧುರಂಧರ್' ಟೀಸರ್ ಬಿಡುಗಡೆಯಾಗಿದೆ. 'ಅನಿಮಲ್' ಚಿತ್ರದಂತೆ ಇದು ರಕ್ತಸಿಕ್ತ ಹಿಂಸಾತ್ಮಕ ಚಿತ್ರವಾಗಿದೆ. ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ರಕ್ಕಸನಾಗಿ ಕಾಣಿಸಿಕೊಂಡಿದ್ದಾರೆ. ಸಂಜಯ್ ದತ್, ಆರ್. ಮಾಧವನ್ ಮುಂತಾದವರು ಇತರ ಪಾತ್ರಗಳಲ್ಲಿ ನಟಿಸಿದ್ದಾರೆ.

ಬಾಲಿವುಡ್​ನಲ್ಲಿ ಮತ್ತೊಂದು ‘ಅನಿಮಲ್’; ‘ಧುರಂಧರ್’ ಚಿತ್ರದಲ್ಲಿ ರಣವೀರ್ ಸಿಂಗ್ ರಕ್ಕಸ ಅವತಾರ
ರಣವೀರ್

Updated on: Jul 07, 2025 | 7:08 AM

ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ (Animal Movie) ಸೂಪರ್ ಹಿಟ್ ಆಯಿತು. ಈ ಚಿತ್ರವನ್ನು ಒಂದು ವರ್ಗದ ಜನರು ತುಂಬಾನೇ ಇಷ್ಟಪಟ್ಟರು. ಈ ಸಿನಿಮಾ ತುಂಬಾನೇ ರಕ್ತಸಿಕ್ತವಾಗಿತ್ತು. ಈಗ ಅಂಥದ್ದೇ ಮತ್ತೊಂದು ಸಿನಿಮಾ ಬರುವ ಸೂಚನೆ ಬಾಲಿವುಡ್​ನಲ್ಲಿ ಸಿಕ್ಕಿದೆ. ಈ ಬಾರಿ ರಣವೀರ್ ಸಿಂಗ್ ಅವರು ಈ ಚಿತ್ರಕ್ಕೆ ಹೀರೋ ಅನ್ನೋದು ವಿಶೇಷ. ಸಿನಿಮಾಗೆ ‘ಧುರಂಧರ್’ ಎಂದು ಹೆಸರು ಇಡಲಾಗಿದೆ. ‘ಉರಿ’ ಸಿನಿಮಾ ಮಾಡಿದ್ದ ಆದಿತ್ಯ ಧಾರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ರಣವೀರ್ ಸಿಂಗ್ ಅವರು ಸಿನಿಮಾದಿಂದ ಸಿನಿಮಾಗೆ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಅವರು ಈ ಮೊದಲು ‘ಪದ್ಮಾವತ್’ ಸಿನಿಮಾದಲ್ಲಿ ಖಿಲ್ಜಿ ಪಾತ್ರದಲ್ಲಿ ಮಿಂಚಿದ್ದರು. ಈಗ ಅವರಿಗೆ ಅಂಥದ್ದೇ ಮತ್ತೊಂದು ಪಾತ್ರ ಸಿಕ್ಕಿದೆ. ಅವರು ‘ಧುರಂಧರ್’ ಸಿನಿಮಾದಲ್ಲಿ ರಕ್ಕಸನಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ
ನಂಬಲೇ ಬೇಕು.. ಸ್ಕ್ವಿಡ್ ಗೇಮ್ ನಟನಿಗೆ ಕನ್ನಡದ ಈ ಚಿತ್ರ ಎಂದರೆ ಸಖತ್ ಇಷ್ಟ
ಗೆಳತಿಯ ತುಟಿಗೆ ಮುತ್ತು; ಸೆನ್ಸೇಷನ್ ಸೃಷ್ಟಿ ಮಾಡಿದ ಸಂಯುಕ್ತಾ ಹೆಗಡೆ
ಕನ್ನಡದ ಬಗ್ಗೆ ವಿವಾದ ಮಾಡಿಕೊಂಡ ಕಮಲ್​ಗೆ ಹೊಸ ನಿರ್ಬಂಧ ಹೇರಿದ ಕೋರ್ಟ್
‘ಸಿತಾರೆ ಜಮೀನ್ ಪರ್​​’: ಆಮಿರ್ ಖಾನ್ ರಿಮೇಕ್ ಮಾಡಿದ್ದೇಕೆ? ಉತ್ತರಿಸಿದ ನಟ

‘ಧುರಂದರ್’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಇದರಲ್ಲಿ ಅವರು ಭರ್ಜರಿ ಆ್ಯಕ್ಷನ್ ಮೆರೆದಿದ್ದಾರೆ. ಅಷ್ಟೇ ಅಲ್ಲ, ಬೀಸ್ಟ್ ಆಗಿ ಅವರು ಮಿಂಚಿದ್ದಾರೆ. ಇದು ಭರ್ಜರಿ ವೈಲೆನ್ಸ್ ಸಿನಿಮಾ ಅನ್ನೋದು ಗೊತ್ತಾಗಿದೆ. ಸಂಜಯ್ ದತ್, ಆರ್. ಮಾಧವನ್, ಅಕ್ಷಯ ಖನ್ನಾ, ಅರ್ಜುನ್ ರಾಂಪಾಲ್ ಕೂಡ ಸಿನಿಮಾದಲ್ಲಿ ಇದ್ದಾರೆ. ಎಲ್ಲ ಪಾತ್ರಗಳಿಗೂ ಹೊಸ ಅವತಾರ ನೀಡಲಾಗಿದೆ. ಸಾರಾ ಅರ್ಜುನ್ ಅವರು ಈ ಚಿತ್ರಕ್ಕೆ ನಾಯಕಿ.

ಈ ಸಿನಿಮಾಗೆ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ‘ಧುರಂದರ್’ ಸಿನಿಮಾ ಕ್ರಿಸ್​ಮಸ್ ತಿಂಗಳು ಡಿಸೆಂಬರ್​ನಲ್ಲಿ (ಡಿಸೆಂಬರ್ 5) ರಿಲೀಸ್ ಆಗಿದೆ. ಜುಲೈ 6 ರಣವೀರ್ ಸಿಂಗ್ ಜನ್ಮದಿನ. ಈ ಕಾರಣದಿಂದ ಅವರು ಈ ಟೀಸರ್ ರಿಲೀಸ್ ಮಾಡಿದ್ದಾರೆ. ರಣವೀರ್ ಸಿಂಗ್ ಅವರ ಹೊಸ ಅವತಾರ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ.

ಇದನ್ನೂ ಓದಿ: ‘ನಿನ್ನ ದೇಹ ನೀನೇ ನಿರ್ಧರಿಸು’; ದೀಪಿಕಾಗೆ ನೇರವಾಗಿ ಹೇಳಿದ್ದ ರಣವೀರ್ ಸಿಂಗ್

ರಣವೀರ್ ಸಿಂಗ್ ಅವರಿಗೆ ಇತ್ತೀಚೆಗೆ ಇಷ್ಟು ಒಳ್ಳೆಯ ಪಾತ್ರ ಸಿಕ್ಕಿಲ್ಲ ಎಂದು ಅನೇಕರು ಹೇಳಿದ್ದಾರೆ. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ 2023ರಲ್ಲಿ ರಿಲೀಸ್ ಆಯಿತು. ಈ ಚಿತ್ರ ಯಶಸ್ಸು ಕಂಡಿತ್ತು. ಇದಾದ ಬಳಿಕ ರಣವೀರ್ ಸಿಂಗ್ ಅವರಿಗೆ ಅಂಥ ಒಳ್ಳೆಯ ಪಾತ್ರ ಸಿಕ್ಕಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

Published On - 7:06 am, Mon, 7 July 25