AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೊನಾಲ್ಡ್ ಟ್ರಂಪ್ ಭೇಟಿಗೆ ‘ಒಪ್ಪಿದ’ ನಟ ಬೊಮನ್ ಇರಾನಿ, ಆದರೆ ಇದೆ ಕೆಲ ಷರತ್ತು

Boman Irani video: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನಿಗಳೊಂದಿಗೆ ‘ಶಾಂತಿ ಮಾತುಕತೆ’ ನಡೆಸುವುದಾಗಿ ಹೇಳಿಕೊಂಡಿದ್ದಾರೆ ಅಲ್ಲದೆ, ಅದಕ್ಕೆ ಕೆಲವು ಷರತ್ತುಗಳನ್ನು ಸಹ ಹಾಕಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಈ ಬೆಳವಣಿಗೆಯನ್ನು ಗಮನಿಸಿದ ಬಾಲಿವುಡ್ ನಟ ಬೋಮನ್ ಇರಾನಿ, ಟ್ರಂಪ್ ಅವರಿಗೆ ಅತ್ಯಂತ ತಮಾಷೆಯಾಗಿ ತಿರುಗೇಟು ನೀಡಿದ್ದಾರೆ.

ಡೊನಾಲ್ಡ್ ಟ್ರಂಪ್ ಭೇಟಿಗೆ ‘ಒಪ್ಪಿದ’ ನಟ ಬೊಮನ್ ಇರಾನಿ, ಆದರೆ ಇದೆ ಕೆಲ ಷರತ್ತು
Donald Trump Boman Irani
ಮಂಜುನಾಥ ಸಿ.
|

Updated on:Mar 26, 2026 | 1:07 PM

Share

ಪಶ್ಚಿಮ ಏಷ್ಯಾದಲ್ಲಿ ಅಮೆರಿಕಾ-ಇಸ್ರೇಲ್ ಮತ್ತು ಇರಾನ್ ನಡುವೆ ಸಂಘರ್ಷ ಮುಂದುವರಿಯುತ್ತಿದೆ. ಈ ಯುದ್ಧದಿಂದ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಸಮಸ್ಯೆ ಅನುಭವಿಸುತ್ತಿವೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಇರಾನಿಗಳೊಂದಿಗೆ ‘ಶಾಂತಿ ಮಾತುಕತೆ’ ನಡೆಸುವುದಾಗಿ ಹೇಳಿಕೊಂಡಿದ್ದಾರೆ ಅಲ್ಲದೆ, ಅದಕ್ಕೆ ಕೆಲವು ಷರತ್ತುಗಳನ್ನು ಸಹ ಹಾಕಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಈ ಬೆಳವಣಿಗೆಯನ್ನು ಗಮನಿಸಿದ ಬಾಲಿವುಡ್ (Boman Irani) ನಟ ಬೋಮನ್ ಇರಾನಿ, ಟ್ರಂಪ್ ಅವರಿಗೆ ಅತ್ಯಂತ ತಮಾಷೆಯಾಗಿ ತಿರುಗೇಟು ನೀಡಿದ್ದಾರೆ.

ಟ್ರಂಪ್ ಅವರು ‘ಇರಾನಿ’ಗಳೊಟ್ಟಿಗೆ ಮಾತುಕತೆಗೆ ಸಿದ್ಧ ಎಂದಿರುವುದನ್ನು ತಮಾಷೆಯಾಗಿ ಉಲ್ಲೇಖಿಸಿರುವ ಬೋಮನ್ ಇರಾನಿ, ‘ನಾನು, ಸ್ಮೃತಿ ಇರಾನಿ ಮತ್ತು ಅರುಣಾ ಇರಾನಿ ಟ್ರಂಪ್ ಅವರೊಂದಿಗೆ ಸಂಧಾನ ನಡೆಸಲು ಸಿದ್ಧವಿದ್ದೇವೆ’ ಎಂದಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ‘ಮಿಸ್ಟರ್ ಡೊನಾಲ್ಡ್ ಟ್ರಂಪ್ ಅವರು ಇರಾನಿಗಳ ಜೊತೆ ಮಾತನಾಡಲು ಬಯಸಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಇದಕ್ಕಾಗಿ ಮೂವರು ಇರಾನಿಗಳನ್ನು ಕರೆಯಲಾಗಿದೆ ಸ್ಮೃತಿ ಇರಾನಿ, ಅರುಣಾ ಇರಾನಿ ಜಿ ಮತ್ತು ನಾನು (ಬೋಮನ್ ಇರಾನಿ). ಶಾಂತಿಗಾಗಿ ನಾನು ಏನು ಬೇಕಾದರೂ ಮಾಡಲು ಸಿದ್ಧ’ ಎಂದು ಹೇಳಿದ್ದಾರೆ.

View this post on Instagram

A post shared by Boman Irani (@boman_irani)

ಆದರೆ ಈ ಮಾತುಕತೆ ಎಲ್ಲಿ ನಡೆಸಬೇಕು ಎಂಬ ಬಗ್ಗೆ ಬೋಮನ್ ಷರತ್ತು ಹಾಕಿದ್ದಾರೆ. ‘ನಾವು ವಾಷಿಂಗ್ಟನ್‌ಗೆ ಬರುವುದಿಲ್ಲ. ಬದಲಾಗಿ ಟ್ರಂಪ್ ಸಾಹೇಬರು ತಮ್ಮ ನಿಯೋಗದೊಂದಿಗೆ ಮುಂಬೈನ ದಾದರ್ ಪಾರ್ಸಿ ಕಾಲೋನಿಗೆ ಬರುವುದು ಉತ್ತಮ. ಅವರಿಗೆ ನಾವು ನಮ್ಮ ಸಾಂಪ್ರದಾಯಿಕ ಧನ್ಸಾಕ್ ಮತ್ತು ಕಸ್ಟರ್ಡ್ ಊಟ ಬಡಿಸುತ್ತೇವೆ. ಆದರೆ, ಅವರು ಬರುವಾಗ ತಮ್ಮೊಂದಿಗೆ ಒಂದು ದೊಡ್ಡ ಗ್ಯಾಸ್ ಸಿಲಿಂಡರ್ ತಂದರೆ ನಮ್ಮೆಲ್ಲರಿಗೂ ಅನುಕೂಲವಾಗುತ್ತದೆ,” ಎಂದು ಭಾರತದಲ್ಲಿ ಸದ್ಯ ಇರುವ ಎಲ್‌ಪಿಜಿ ಕೊರತೆಯ ಬಗ್ಗೆಯೂ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ:ಡೊನಾಲ್ಡ್ ಟ್ರಂಪ್ ಕುತ್ತಿಗೆಗೆ ಗಾಯ: ಆರೋಗ್ಯದ ಬಗ್ಗೆ ಅನುಮಾನ

ಬೋಮನ್ ಅವರ ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಟಿ ಸಮೀರಾ ರೆಡ್ಡಿ ಅದ್ಭೂತ ಎಂದು ಕಾಮೆಂಟ್ ಮಾಡಿದ್ದರೆ, ನಟ ಸಿದ್ಧಾರ್ಥ್ ಸಹ ಪ್ರತಿಕ್ರಿಯೆ ನೀಡಿದ್ದಾರೆ. ಫರ್ಹಾನ್ ಅಖ್ತರ್, ರಿಕಿ ಕೇಜ್ ಸೇರಿದಂತೆ ಹಲವು ಗಣ್ಯರು ಬೊಮನ್ ಅವರ ಈ ಹಾಸ್ಯ ಪ್ರಜ್ಞೆಯನ್ನು ಮೆಚ್ಚಿಕೊಂಡಿದ್ದಾರೆ. ಅಲ್ಲು ಅರ್ಜುನ್ ಪತ್ನಿ ಅಲ್ಲು ಸ್ನೇಹಾ ರೆಡ್ಡಿ ಮತ್ತು ನಟಿ ಪ್ರಿಯಾಮಣಿ ಕೂಡ ಈ ಪೋಸ್ಟ್ ಅನ್ನು ಲೈಕ್ ಮಾಡಿದ್ದಾರೆ.

ಬೋಮನ್ ಇರಾನಿ ಇತ್ತೀಚೆಗಷ್ಟೇ ‘ದ ಮೆಹ್ತಾ ಬಾಯ್ಸ್’ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡಿದ್ದು, ಪ್ರಸ್ತುತ ಕೆಲವು ಬಾಲಿವುಡ್ ಮತ್ತು ದಕ್ಷಿಣದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಂಘರ್ಷದ ಗಂಭೀರ ವಾತಾವರಣದ ನಡುವೆಯೂ ತಮ್ಮ ಹೆಸರಿನ (ಇರಾನಿ) ಸಾಮ್ಯತೆಯನ್ನು ಬಳಸಿ ಅವರು ಮಾಡಿರುವ ಈ ಹಾಸ್ಯ ಎಲ್ಲರ ಗಮನ ಸೆಳೆಯುತ್ತಿದೆ. ಅವರ ವಿಡಿಯೋ ವೈರಲ್ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:04 pm, Thu, 26 March 26

Follow Us