ಕೃತಿ ಸನೋನ್​-ಶಾಹಿದ್ ಕಪೂರ್​ ನಡುವಿನ ಶೇಕಡ 25ರಷ್ಟು ಹಸಿಬಿಸಿ ದೃಶ್ಯಗಳಿಗೆ ಕತ್ತರಿ

ವ್ಯಾಲೆಂಟೈನ್​ ಡೇ ಹತ್ತಿರ ಇರುವಾಗ ‘ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ’ ಸಿನಿಮಾ ಬಿಡುಗಡೆ ಆಗುತ್ತಿದೆ. ಶಾಹಿದ್​ ಕಪೂರ್​ ಮತ್ತು ಕೃತಿ ಸನೋನ್​ ಅವರು ತೆರೆ ಹಂಚಿಕೊಂಡಿದ್ದಾರೆ. ಜೋಡಿ ಹಕ್ಕಿಗಳನ್ನು ಸೆಳೆಯಲು ಈ ಸಿನಿಮಾ ತಂಡ ಪ್ರಯತ್ನಿಸಿದಂತಿದೆ. ಆದರೆ ಈ ಚಿತ್ರದ ಒಂದಷ್ಟು ದೃಶ್ಯಗಳಿಗೆ ಸೆನ್ಸಾರ್​ ಮಂಡಳಿ ಕತ್ತರಿ ಹಾಕಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ..

ಕೃತಿ ಸನೋನ್​-ಶಾಹಿದ್ ಕಪೂರ್​ ನಡುವಿನ ಶೇಕಡ 25ರಷ್ಟು ಹಸಿಬಿಸಿ ದೃಶ್ಯಗಳಿಗೆ ಕತ್ತರಿ
ಶಾಹಿದ್​ ಕಪೂರ್​, ಕೃತಿ ಸನೋನ್​

Updated on: Feb 07, 2024 | 1:16 PM

ನಟ ಶಾಹಿದ್ ಕಪೂರ್ ಮತ್ತು ನಟಿ ಕೃತಿ ಸನೋನ್​ (Kriti Sanon) ಅವರು ಜೋಡಿಯಾಗಿ ಅಭಿನಯಿಸಿರುವ ‘ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ’ ಸಿನಿಮಾ ಈ ವಾರ (ಫೆಬ್ರವರಿ 9) ಬಿಡುಗಡೆ ಆಗುತ್ತಿದೆ. ಇತ್ತೀಚೆಗಷ್ಟೇ ಈ ಸಿನಿಮಾಗೆ ಸೆನ್ಸಾರ್​ ಪ್ರತಿಕ್ರಿಯೆ ಮುಗಿದಿದೆ. ಈ ಚಿತ್ರದಲ್ಲಿ ಕೃತಿ ಸನೋನ್​ ಮತ್ತು ಶಾಹಿದ್​ ಕಪೂರ್​ (Shahid Kapoor) ನಡುವೆ ಹಸಿಬಿಸಿ ದೃಶ್ಯಗಳು ಇವೆ. ಇಂಥ ದೃಶ್ಯಗಳಿಗೆ ಸೆನ್ಸಾರ್​ ಮಂಡಳಿ (Censor Board) ಸದಸ್ಯರು ಕತ್ತರಿ ಹಾಕಿದ್ದಾರೆ. ‘ಬಾಲಿವುಡ್​ ಹಂಗಾಮಾ’ ವರದಿ ಪ್ರಕಾರ, ಶೇಕಡ 25ರಷ್ಟು ಆ ರೀತಿಯ ದೃಶ್ಯವನ್ನು ತೆಗೆದುಹಾಕಲು ಸೆನ್ಸಾರ್​ ಮಂಡಳಿ ಸೂಚಿಸಿದೆ. ಈ ಕಾರಣದಿಂದ ಸಿನಿಮಾ ಮೇಲೆ ಕೌತುಕ ಮೂಡುವಂತಾಗಿದೆ.

ನಟಿ ಕೃತಿ ಸನೋನ್​ ಅವರು ಎಲ್ಲ ಬಗೆಯ ಪಾತ್ರಗಳಿಗೂ ಜೀವ ತುಂಬಬಲ್ಲಂತಹ ಕಲಾವಿದೆ. ಕಳೆದ ವರ್ಷ ಅವರು ‘ಆದಿಪುರುಷ್​’ ಸಿನಿಮಾದಲ್ಲಿ ಸೀತಾ ಮಾತೆಯ ಪಾತ್ರವನ್ನು ಮಾಡಿದ್ದರು. 2021ರಲ್ಲಿ ಬಂದಿದ್ದ ‘ಮಿಮಿ’ ಚಿತ್ರದಲ್ಲಿ ಬಾಡಿಗೆ ತಾಯಿಯಾಗಿ ಅವರು ಗಮನ ಸೆಳೆದಿದ್ದರು. ಈಗ ‘ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ’ ಚಿತ್ರದಲ್ಲಿ ಅವರಿಗೆ ರೋಬೋಟ್​ ಪಾತ್ರ ನೀಡಲಾಗಿದೆ. ಸಿಫ್ರಾ ಎಂಬ ರೋಬೋಟ್​ ಆಗಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಬಾಲಿವುಡ್ ನಟಿ ಕೃತಿ ಸೆನನ್ ಧರಿಸಿರುವ ಈ ಉಡುಪಿನ ಬೆಲೆ ಎಷ್ಟು ಲಕ್ಷ ಗೊತ್ತೆ?

ಕೃತಿ ಸನೋನ್​ ಮತ್ತು ಶಾಹಿದ್​ ಕಪೂರ್​ ನಡುವಿನ ಕೆಮಿಸ್ಟ್ರಿ ಹೇಗೆ ಮೂಡಿಬಂದಿದೆ ಎಂಬುದನ್ನು ನೋಡಲು ಫ್ಯಾನ್ಸ್​ ಕಾದಿದ್ದಾರೆ. ‘ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ’ ಸಿನಿಮಾದಲ್ಲಿ ಭರ್ಜರಿ ಕಾಮಿಡಿ ಇರಲಿದೆ ಎಂಬದಕ್ಕೆ ಟ್ರೇಲರ್​ನಲ್ಲಿ ಸುಳಿವು ಸಿಕ್ಕಿದೆ. ವ್ಯಾಲೆಂಟೈನ್ಸ್​ ವೀಕ್​ನಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿರುವುದರಿಂದ ಉತ್ತಮ ಓಪನಿಂಗ್​ ಪಡೆದುಕೊಳ್ಳುವ ನಿರೀಕ್ಷೆ ಇದೆ. ಬೆಡ್​ ರೂಮ್​ ದೃಶ್ಯಕ್ಕೆ ಕತ್ತರಿ ಹಾಕಿದ್ದು ಮಾತ್ರವಲ್ಲದೇ, ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬ ಸಂದೇಶವನ್ನು ದೊಡ್ಡ ಅಕ್ಷರಗಳಲ್ಲಿ ಪ್ರದರ್ಶಿಸುವಂತೆ ಸೂಚಿಸಲಾಗಿದೆ. ಡೈಲಾಗ್​ನಲ್ಲಿ ಕೆಲವು ಪದಗಳನ್ನು ಬದಲಿಸಬೇಕು ಎಂದು ಆದೇಶಿಸಲಾಗಿದೆ. ಸೆನ್ಸಾರ್​ ಮಂಡಳಿ ಸೂಚಿಸಿದ ಕಡೆಗಳಲ್ಲಿ ಕತ್ತರಿ ಹಾಕಿದ ಬಳಿಕ ಚಿತ್ರದ ಅವಧಿ 2 ಗಂಟೆ 23 ನಿಮಿಷ ಆಗಿದೆ.

‘ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ’ ಸಿನಿಮಾದ ಟ್ರೇಲರ್​:

‘ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ’ ಸಿನಿಮಾದ ಟ್ರೇಲರ್​ ಗಮನ ಸೆಳೆದಿದೆ. ಅಮಿತ್​ ಜೋಶಿ ಮತ್ತು ಆರಾಧನಾ ಶಾ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಧರ್ಮೇಂದ್ರ, ಡಿಂಪಲ್​ ಕಪಾಡಿಯಾ, ರಾಕೇಶ್​ ಬೇಡಿ, ರಾಜೇಶ್ ಕುಮಾರ್​ ಮುಂತಾದವರು ಕೂಡ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಇದು ಒಂದು ‘ಅಸಾಧ್ಯ ಪ್ರೇಮಕಹಾನಿ’ ಎಂದು ಚಿತ್ರತಂಡ ಹೇಳಿಕೊಂಡಿದೆ. ಟ್ರೇಲರ್​ನಲ್ಲಿ ಹೊಸತನ ಕಾಣಿಸಿದೆ. ಈ ಸಿನಿಮಾ ನೋಡಲು ಫ್ಯಾನ್ಸ್​ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us