ಕಾಲು ನೋವಿನಿಂದ ಸಂಪೂರ್ಣ ಚೇತರಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ

ಇಷ್ಟು ದಿನ ರಶ್ಮಿಕಾ ಮಂದಣ್ಣ ಅವರು ಕಾಲು ನೋವಿನಿಂದ ಬಳಲುತ್ತಿದ್ದರು. ನಡೆದಾಡಲು ಅವರಿಗೆ ಕಷ್ಟವಾಗಿತ್ತು. ಈಗ ಚೇತರಿಕೆ ಕಂಡಿದ್ದಾರೆ. ವ್ಹೀಲ್ ಚೇರ್​ ಹಾಗೂ ಯಾರ ಸಹಾಯವೂ ಇಲ್ಲದೇ ಅವರು ನಡೆಯಲು ಶುರು ಮಾಡಿಕೊಂಡಿದ್ದಾರೆ. ಅವರ ಹೊಸ ವಿಡಿಯೋ ನೋಡಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಕಾಲು ನೋವಿನಿಂದ ಸಂಪೂರ್ಣ ಚೇತರಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ
Rashmika Mandanna

Updated on: Feb 09, 2025 | 3:57 PM

ನಟಿ ರಶ್ಮಿಕಾ ಮಂದಣ್ಣ ಅವರು ಒಂದರ ಹಿಂದೊಂದು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಶೂಟಿಂಗ್, ಪ್ರಮೋಷನ್​ ಎಂದು ಸದಾ ಸುತ್ತಾಡುವ ಅವರು ಇತ್ತೀಚೆಗೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಜಿಮ್​ನಲ್ಲಿ ವರ್ಕೌಟ್ ಮಾಡುವಾಗ ಅವರಿಗೆ ಪೆಟ್ಟಾಗಿತ್ತು. ಇದರಿಂದ ಅವರಿಗೆ ನಡೆದಾಡಲು ಕೂಡ ಕಷ್ಟ ಆಗುತ್ತಿತ್ತು. ಆದರೆ ಈಗ ರಶ್ಮಿಕಾ ಮಂದಣ್ಣ ಅವರು ಕಾಲು ನೋವಿನಿಂದ ಸಂಪೂರ್ಣ ಚೇತರಿಕೆ ಕಂಡಿದ್ದಾರೆ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಅವರು ನಡೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಯಾವುದೇ ತೊಂದರೆ ಇಲ್ಲದೇ ಅವರು ನಡೆದುಕೊಂಡು ಹೋಗಿದ್ದು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ರಶ್ಮಿಕಾ ಮಂದಣ್ಣ ನಟನೆಯ ‘ಛಾವಾ’ ಸಿನಿಮಾ ಸದ್ಯದಲ್ಲೇ ಬಿಡುಗಡೆ ಆಗಲಿದೆ. ಈ ಸಿನಿಮಾದ ಪ್ರಮೋಷನ್​ನಲ್ಲಿ ಭಾಗವಹಿಸುವ ಸಂದರ್ಭಕ್ಕೆ ಸರಿಯಾಗಿ ಅವರ ಕಾಲಿಗೆ ಪೆಟ್ಟಾಗಿದ್ದರಿಂದ ಅವರಿಗೆ ಸಖತ್ ಬೇಸರ ಆಗಿತ್ತು. ಹಾಗಿದ್ದರೂ ಕೂಡ ವ್ಹೀಲ್ ಚೇರ್​ನಲ್ಲಿ ಬಂದು ಅವರು ಟ್ರೇಲರ್​ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಆಗ ಅವರ ಪರಿಸ್ಥಿತಿ ಕಂಡು ಅಭಿಮಾನಿಗಳಿಗೆ ನೋವಾಗಿತ್ತು. ಆದರೆ ಈಗ ರಶ್ಮಿಕಾ ಗುಣಮುಖರಾಗಿದ್ದಾರೆ.

ಕಾಲಿಗೆ ಪೆಟ್ಟು ಮಾಡಿಕೊಂಡ ಬಳಿಕ ರಶ್ಮಿಕಾ ಮಂದಣ್ಣ ಕುಂಟುವಂತಾಗಿತ್ತು. ನಡೆಯುವಾಗ ಅವರಿಗೆ ಇನ್ನೊಬ್ಬರ ಸಹಾಯ ಬೇಕಾಗುತ್ತಿತ್ತು. ಆದರೆ ಈಗ ಅವರು ಹೈದರಾಬಾದ್​ ವಿಮಾನ ನಿಲ್ದಾಣದಲ್ಲಿ ಯಾರ ಸಹಾಯವೂ ಇಲ್ಲದೇ ನಡೆದು ಬಂದಿದ್ದಾರೆ. ಹೈದರಾಬಾದ್​ನಿಂದ ಮುಂಬೈಗೆ ಅವರು ಪ್ರಯಾಣ ಬೆಳೆಸಿದ್ದಾರೆ. ‘ಛಾವಾ’ ಸಿನಿಮಾ ಫೆಬ್ರವರಿ 14ರಂದು ಬಿಡುಗಡೆ ಆಗಲಿದೆ. ಆ ಸಿನಿಮಾದ ಪ್ರಮೋಷನ್​ನಲ್ಲಿ ರಶ್ಮಿಕಾ ಮಂದಣ್ಣ ಭಾಗಿ ಆಗಲಿದ್ದಾರೆ.

ಇದನ್ನೂ ಓದಿ: ಕಾಲು ಮುರಿದರೂ ಫೋಟೋಶೂಟ್​ ಮರೆಯಲ್ಲ ರಶ್ಮಿಕಾ

‘ಛಾವಾ’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರು ವಿಕ್ಕಿ ಕೌಶಲ್ ಜೊತೆ ನಟಿಸಿದ್ದಾರೆ. ಐತಿಹಾಸಿಕ ಕಥಾಹಂದರ ಹೊಂದಿರುವ ಈ ಸಿನಿಮಾದ ಟ್ರೇಲರ್​ ಗಮನ ಸೆಳೆದಿದೆ. ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅವರಿಗೆ ಬಾಲಿವುಡ್​ನಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಎಲ್ಲರೂ ಈ ಸಿನಿಮಾ ನೋಡಲು ಕಾದಿದ್ದಾರೆ. ‘ಪುಷ್ಪ 2’ ಸಿನಿಮಾದ ಅಭೂತಪೂರ್ವ ಸಕ್ಸಸ್ ಬಳಿಕ ರಶ್ಮಿಕಾ ಅವರು ಚಾವಾ ಸಿನಿಮಾದಲ್ಲೂ ಮೋಡಿ ಮಾಡುವ ಸೂಚನೆ ಸಿಕ್ಕಿದೆ. ಟ್ರೇಲರ್​ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಸಿನಿಮಾಗಾಗಿ ವಿಕ್ಕಿ ಕೌಶಲ್ ಅವರು ಸಾಕಷ್ಟು ಶ್ರಮ ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.