Jawan: ‘ತಾಕತ್ತಿದ್ದರೆ ಜವಾನ್​ ಎದುರು ನಿಮ್ಮ ಸಿನಿಮಾ ರಿಲೀಸ್​ ಮಾಡಿ’: ವಿವೇಕ್​ ಅಗ್ನಿಹೋತ್ರಿಗೆ ನೇರ ಸವಾಲು

|

Updated on: Jul 12, 2023 | 7:35 PM

Vivek Agnihotri: ಇತ್ತೀಚೆಗೆ ವಿವೇಕ್​ ಅಗ್ನಿಹೋತ್ರಿ ಅವರು ಟ್ವಿಟರ್​ನಲ್ಲಿ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ನಡೆಸಿದ್ದಾರೆ. ಈ ವೇಳೆ ಶಾರುಖ್​ ಖಾನ್ ಅವರ ಅಭಿಮಾನಿಯೊಬ್ಬರು ನೇರವಾಗಿ ಚಾಲೆಂಜ್​ ಮಾಡಿದ್ದಾರೆ.

Jawan: ‘ತಾಕತ್ತಿದ್ದರೆ ಜವಾನ್​ ಎದುರು ನಿಮ್ಮ ಸಿನಿಮಾ ರಿಲೀಸ್​ ಮಾಡಿ’: ವಿವೇಕ್​ ಅಗ್ನಿಹೋತ್ರಿಗೆ ನೇರ ಸವಾಲು
ಶಾರುಖ್​ ಖಾನ್​, ವಿವೇಕ್ ಅಗ್ನಿಹೋತ್ರಿ
Follow us on

ಬಾಲಿವುಡ್​ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ (Vivek Agnihotri) ಅವರಿಗೆ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾದಿಂದ ಸಖತ್​ ಜನಪ್ರಿಯತೆ ಸಿಕ್ಕಿತು. ಈಗ ಅವರು ‘ದಿ ವ್ಯಾಕ್ಸಿನ್​ ವಾರ್​’ (Vivek Agnihotri) ಸಿನಿಮಾ ಮಾಡುತ್ತಿದ್ದಾರೆ. ಈ ವರ್ಷ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆ ಸಿನಿಮಾ ಬಿಡುಗಡೆ ಆಗಲಿದೆ. ಸೋಶಿಯಲ್​ ಮೀಡಿಯಾದಲ್ಲಿ ವಿವೇಕ್​ ಅಗ್ನಿಹೋತ್ರಿ ಅವರು ಆ್ಯಕ್ಟೀವ್​ ಆಗಿದ್ದಾರೆ. ಅವರಿಗೆ ನೆಟ್ಟಿಗರೊಬ್ಬರು ನೇರ ಸವಾಲು ಎಸೆದಿದ್ದಾರೆ. ‘ತಾಕತ್ತಿದ್ದರೆ ನಿಮ್ಮ ಸಿನಿಮಾವನ್ನು ಜವಾನ್​ (Jawan Movie) ಚಿತ್ರದ ಎದುರು ರಿಲೀಸ್​ ಮಾಡಿ’ ಎಂದು ಚಾಲೆಂಜ್​ ಮಾಡಲಾಗಿದೆ. ಅದಕ್ಕೆ ವಿವೇಕ್​ ಅಗ್ನಿಹೋತ್ರಿ ಕೊಟ್ಟ ಉತ್ತರ ಏನು? ಈ ಸ್ಟೋರಿಯಲ್ಲಿದೆ ವಿವರ..

ಶಾರುಖ್​ ಖಾನ್​ ನಟನೆಯ ‘ಜವಾನ್​’ ಸಿನಿಮಾ ಮೇಲೆ ಭರ್ಜರಿ ಹೈಪ್​ ಕ್ರಿಯೇಟ್​ ಆಗಿದೆ. ಅಟ್ಲಿ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಇತ್ತೀಚೆಗೆ ರಿಲೀಸ್​ ಆಗಿರುವ ಪ್ರಿವ್ಯೂ ನೋಡಿ ಜನರು ವಾವ್​ ಎನ್ನುತ್ತಿದ್ದಾರೆ. ಸೆಪ್ಟೆಂಬರ್​ 7ರಂದು ‘ಜವಾನ್​’ ರಿಲೀಸ್​ ಆಗಲಿದೆ. ಆ ಸಿನಿಮಾ ಖಂಡಿತವಾಗಿಯೂ ಬ್ಲಾಕ್​ಬಸ್ಟರ್​ ಆಗಲಿದೆ ಎಂದು ಅನೇಕರು ಭವಿಷ್ಯ ನುಡಿಯುತ್ತಿದ್ದಾರೆ. ಅಂಥ ಸಿನಿಮಾದ ಎದುರು ತಮ್ಮ ‘ದಿ ವ್ಯಾಕ್ಸಿನ್​ ವಾರ್​’ ಚಿತ್ರವನ್ನು ರಿಲೀಸ್​ ಮಾಡಲು ವಿವೇಕ್​ ಅಗ್ನಿಹೋತ್ರಿ ಕೂಡ ಸಿದ್ಧರಿಲ್ಲ.

ಇತ್ತೀಚೆಗೆ ವಿವೇಕ್​ ಅಗ್ನಿಹೋತ್ರಿ ಅವರು ಟ್ವಿಟರ್​ನಲ್ಲಿ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ನಡೆಸಿದ್ದಾರೆ. ಈ ವೇಳೆ ಶಾರುಖ್​ ಖಾನ್ ಅವರ ಅಭಿಮಾನಿಯೊಬ್ಬರು ನೇರವಾಗಿ ಚಾಲೆಂಜ್​ ಮಾಡಿದ್ದಾರೆ. ‘ತಾಕತ್ತಿದ್ದರೆ ಶಾರುಖ್​ ಖಾನ್​ ಎದುರು ಕ್ಲ್ಯಾಶ್​ ಮಾಡಿಕೊಳ್ಳಿ’ ಎಂದು ಸವಾಲು ಎಸೆದಿದ್ದಾರೆ. ಇದಕ್ಕೆ ವಿವೇಕ್​ ಅಗ್ನಿಹೋತ್ರಿ ಅವರು ಕೂಲ್​ ಆಗಿ ಉತ್ತರ ನೀಡಿದ್ದಾರೆ. ‘ಬಾಲಿವುಡ್​ನ ಆಟದಲ್ಲಿ ನಾವು ಭಾಗಿಯಾಗಲ್ಲ. ಕ್ಲ್ಯಾಶ್ ಎಂಬ ಪದ ಇರುವುದು ಸ್ಟಾರ್​ಗಳಿಗೆ ಮತ್ತು ಮಾಧ್ಯಮದವರಿಗೆ ಮಾತ್ರ’ ಎಂದು ವಿವೇಕ್​ ಅಗ್ನಿಹೋತ್ರಿ ಹೇಳಿದ್ದಾರೆ.

ಇದನ್ನೂ ಓದಿ: Vivek Agnihotri: ‘ಹಿಂಸೆಯ ವೈಭವೀಕರಣವೂ ಟ್ಯಾಲೆಂಟ್​ ಆಗಿಬಿಟ್ಟಿದೆ’: ‘ಸಲಾರ್​’ ಟೀಸರ್​ ಬಿಡುಗಡೆ ಬೆನ್ನಲ್ಲೇ ವಿವೇಕ್​ ಅಗ್ನಿಹೋತ್ರಿ ಟ್ವೀಟ್​

‘ನಾನು ಭರವಸೆ ಕೊಡುತ್ತೇನೆ. ಶಾರುಖ್​ ಖಾನ್​ ಅವರ ‘ಜವಾನ್​’ ಸಿನಿಮಾ ಸಾರ್ವಕಾಲಿಕ ಬ್ಲಾಕ್​ ಬಸ್ಟರ್​ ಆಗಲಿದೆ. ಅದನ್ನು ನೋಡಿದ ಬಳಿಕ ದಯವಿಟ್ಟು ನಮ್ಮ ಚಿಕ್ಕ ಸಿನಿಮಾವನ್ನೂ ನೋಡಿ. ಭಾರತದ ದೊಡ್ಡ ಯುದ್ಧದ ಬಗ್ಗೆ ನಿಮಗೆ ತಿಳಿದಿರದ ವಿಷಯಗಳು ಕುರಿತು ಮಾಡಿರುವ ಸಿನಿಮಾ ನಮ್ಮದು’ ಎಂದು ವಿವೇಕ್​ ಅಗ್ನಿಹೋತ್ರಿ ಟ್ವೀಟ್​ ಮಾಡಿದ್ದಾರೆ. ಅವರ ಈ ಪೋಸ್ಟ್​ ವೈರಲ್​ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.