ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ: ಇತಿಹಾಸವೇನು? ದಾದಾ ಸಾಹೇಬ್ ಯಾರು?

|

Updated on: May 20, 2023 | 8:28 PM

Dada saheb phalke film foundation: ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು: ಚಲನಚಿತ್ರೋದ್ಯಮದಲ್ಲಿನ ಸಾಧನೆಗಳಿಗಾಗಿ ಈ ಪ್ರಶಸ್ತಿಗಳನ್ನು ವಾರ್ಷಿಕವಾಗಿ ನೀಡಲಾಗುತ್ತದೆ. ಅಸಹಾಯಕ ಜನರ ಪಕ್ಕದಲ್ಲಿ ನಿಲ್ಲುವುದರಿಂದ ಹಿಡಿದು ಭಾರತೀಯ ಸಂಸ್ಕೃತಿಯನ್ನು ಪ್ರಚಾರ ಮಾಡುವುದು ಫೌಂಡೇಶನ್​ನ ಮುಖ್ಯ ಗುರಿಗಳಲ್ಲಿ ಒಂದಾಗಿದೆ.

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ: ಇತಿಹಾಸವೇನು? ದಾದಾ ಸಾಹೇಬ್ ಯಾರು?
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ
Follow us on

ಇಂದು (ಮೇ 20) ಮುಂಬೈನ (Mumbai) ಮುಖೇಶ್ ಪಟೇಲ್ ಸಭಾಂಗಣದಲ್ಲಿ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ ವಿತರಣಾ ಸಮಾರಂಭ ನಡೆಯುತ್ತಿದೆ. ಈ ಮೆಗಾ ಇವೆಂಟ್ ಅಧಿಕೃತವಾಗಿ ಸಂಜೆ 6 ರಿಂದ ಪ್ರಾರಂಭವಾಯಿತು. ಬಾಲಿವುಡ್​ನ ಹಲವು ಸೆಲೆಬ್ರಿಟಿಗಳು ಕಾರ್ಯಕ್ರಮಕ್ಕೆ ಹಾಜರಿ ಹಾಕಿದ್ದಾರೆ. ಈ ಪ್ರಶಸ್ತಿಯನ್ನು ಚಲನಚಿತ್ರ ಜಗತ್ತಿನಲ್ಲಿ ಮಾಡಿದ ಸಾಧನೆಗಳಿಗಾಗಿ ಪ್ರತಿ ವರ್ಷ ನೀಡಲಾಗುತ್ತದೆ. ಪ್ರಶಸ್ತಿ ನೀಡಿ ‘ದಾದಾಸಾಹೇಬ್ ಫಾಲ್ಕೆ ಫಿಲ್ಮ್ ಫೌಂಡೇಶನ್’ ತನ್ನ ಜವಾಬ್ದಾರಿ ಮುಗಿಸಿಬಿಡುವುದಿಲ್ಲ. ಅಸಹಾಯಕ ಜನರ ಪರ ನಿಲ್ಲುವುದರಿಂದ ಹಿಡಿದು ಭಾರತೀಯ ಸಂಸ್ಕೃತಿಯನ್ನು ಪ್ರಚಾರ ಮಾಡುವುದು ಅವರ ಮುಖ್ಯ ಗುರಿಗಳಲ್ಲಿ ಒಂದಾಗಿದೆ. 2018 ರಲ್ಲಿ, ಅಕ್ಷಯ್ ಕುಮಾರ್ (Akshay Kumar) ಮತ್ತು ಮನಿಶಾ ಕೊಯಿರಾಲಾ ಅವರಂತಹ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನಿತವಾಗಿದ್ದರು.

2019 ರಲ್ಲಿ, ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ವತಃ ಶಾರುಖ್ ಖಾನ್ ಕೂಡ ಉಪಸ್ಥಿತರಿದ್ದರು. ಆ ವರ್ಷ ಅವರು ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ಪ್ರಶ್ನೆಯೆಂದರೆ, ಈ ಪ್ರಶಸ್ತಿಗೆ ಅರ್ಹರಾದವರನ್ನು ಯಾರು ಆರಿಸುತ್ತಾರೆ? ತೀರ್ಪುಗಾರರ ಮಂಡಳಿಯಲ್ಲಿ ಯಾರಿದ್ದಾರೆ? ಎಂಬುದು. ಇಲ್ಲಿದೆ ಉತ್ತರ, ನಿರ್ದೇಶಕ ಅಬ್ಬಾಸ್ ಮಸ್ತಾನ್‌ನಿಂದ ಅನೀಸ್ ಬಾಜ್ಮೀ, ಡೇವಿಡ್ ಧವನ್, ಸಚಿನ್ ಪಿಲ್ಗಾಂವ್ಕರ್‌ರಂತಹ ವ್ಯಕ್ತಿಗಳು ಜ್ಯೂರಿ ಸದಸ್ಯರನ್ನು ಈ ಪ್ರಶಸ್ತಿ ಸಮಿತಿ ಒಳಗೊಂಡಿದೆ. ಆದರೆ ಅತ್ಯುತ್ತಮ ಚಿತ್ರ ಅಥವಾ ಅತ್ಯುತ್ತಮ ನಟ ಅಥವಾ ನಟಿ ಮಾತ್ರವಲ್ಲ, ಜೀವಮಾನದ ಸಾಧನೆ ಅಂದರೆ ಜೀವಮಾನ ಸಾಧನೆಗೆ ಸಹ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ದಾದಾಸಾಹೇಬ್ ಫಾಲ್ಕೆ ಯಾರು? ಪ್ರತಿ ವರ್ಷ ಮೆಗಾ ಇವೆಂಟ್ ಅನ್ನು ಏಕೆ ಆಯೋಜಿಸಲಾಗುತ್ತದೆ? ಎಂಬ ಪ್ರಶ್ನೆ ಸಹಜ. ದಾದಾ ಸಾಹೇಬ್ ಫಾಲ್ಕೆ ಭಾರತೀಯ ಚಿತ್ರರಂಗದ ಪಿತಾಮಹ. 1870 ರಲ್ಲಿ ಧುಂಡಿರಾಜ್ ಗೋಬಿಂದ್ ಫಾಲ್ಕೆ ಎಂಬ ಹೆಸರಿನೊಂದಿಗೆ ಜನಿಸಿದರು. ಆದರೆ ನಂತರದಲ್ಲಿ ಅವರು ನಮ್ಮ ಜನರ ‘ದಾದಾಸಾಹೇಬ’ ಆದರು. ಅವರು ನಾಸಿಕ್‌ನ ಮರಾಠಿ ಕುಟುಂಬದಲ್ಲಿ ಜನಿಸಿದರು. ಮಧ್ಯಮ ವರ್ಗದ ಕುಟುಂಬವಾಗಿತ್ತು. ಏಳು ಜನ ಒಡಹುಟ್ಟಿದವರು, ಹೆತ್ತವರು ಒಟ್ಟು 9 ಜನರ ಕುಟುಂಬ. ಅವರು ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿದ್ದರು, ಆದರೆ ಗುರಿ ವಿಭಿನ್ನವಾಗಿತ್ತು. 1913 ರಲ್ಲಿ, ಅವರು ‘ರಾಜಾ ಹರಿಶ್ಚಂದ್ರ’ ಎಂಬ ಚಲನಚಿತ್ರವನ್ನು ಮಾಡಿದರು, ಇದು ಭಾರತದ ಮೊದಲ ಪೂರ್ಣ-ಉದ್ದದ ಮೂಕಿ ಚಿತ್ರವಾಗಿತ್ತು. ಅದರ ನಂತರ ಅವರು ಸುಮಾರು 24 ವರ್ಷಗಳ ಅವಧಿಯಲ್ಲಿ ಸುಮಾರು 95 ಫೀಚರ್ ಫಿಲಂಗಳು (ಚಲನಚಿತ್ರ) ನಿರ್ಮಾಣ ಮಾಡಿದರು. ಇವುಗಳಲ್ಲಿ ‘ಸತ್ಯವಾನ್ ಸಾವಿತ್ರಿ’, ‘ಸೇತು ಬಂಧನ’, ‘ಶ್ರೀ ಕೃಷ್ಣ ಜನಂ’ ಮತ್ತು ಹಲವು ಸೇರಿವೆ. ದಾದಾ ಸಾಹೇಬ್ ಫಾಲ್ಕೆ ಹೋದರು, ಆದರೆ ಅವರ ಉತ್ತರಾಧಿಕಾರಿಗಳು ಉಳಿದಿದ್ದಾರೆ. ಮತ್ತು ಅವರನ್ನು ಗುರುತಿಸಲು ಈ ಕಾರ್ಯಕ್ರಮವನ್ನು ಪ್ರತಿವರ್ಷ ಆಯೋಜಿಸಲಾಗುತ್ತದೆ. ಈ ವರ್ಷ ಯಾರು ಅತ್ಯುತ್ತಮ ನಟ-ನಟಿ, ಉತ್ತಮ ಸಿನಿಮಾ, ಸಿನಿಮಾ ನಿರ್ದೇಶಕ ಇನ್ನೂ ಹಲವು ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ